ಪತ್ರಕರ್ತ ಶಿವಯ್ಯ ಮಠಪತಿ ಸೇರಿ ನಾಲ್ವರು ಗಣ್ಯರಿಗೆ ೨೦೨೬ರ ‘ಅಭಿನವ ರೇಣುಕ ಶ್ರೀ’ ಪ್ರಶಸ್ತಿ ಘೋಷಣೆ

====================
​ಬಸವಕಲ್ಯಾಣ : ಇಲ್ಲಿನ ಪ್ರಸಿದ್ಧ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಅಭಿನವ ರೇಣುಕ ಶ್ರೀ’ ಪ್ರಶಸ್ತಿಗೆ ೨೦೨೬ನೇ ಸಾಲಿಗೆ ನಾಲ್ವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಗವಿಮಠದ ಪೀಠಾಧಿಪತಿಗಳಾದ ಪೂಜ್ಯ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ತಿಳಿಸಿದ್ದಾರೆ.​
​ಮಲ್ಲಿಕಾರ್ಜುನ ಮಠ ನಿವೃತ್ತ ಉಪನ್ಯಾಸಕರು, ​ಶಿವಯ್ಯಾ ಕರಬಸಯ್ಯಾ ಮಠಪತಿ ಜಿಲ್ಲಾ ವರದಿಗಾರರು, ಗ್ಯಾರಂಟಿ ನ್ಯೂಸ್,
​ ಬಸವರಾಜ ಹನುಮಶೆಟ್ಟಿ ಮಾಲಿ ಪಾಟೀಲ, ಸದಾನಂದ ವೀರಯ್ಯಾಸ್ವಾಮಿರನ್ನು ಪ್ರಶಸ್ತಿ ನೀಡಿ ಶ್ರೀಗಳು ಆಶೀರ್ವದಿಸಲಿದ್ದಾರೆ. ​ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ಈ ಪ್ರಶಸ್ತಿ ಪ್ರಧಾನ ಸಮಾರಂಭವು ಜರುಗಲಿದೆ. ಇದೆ ಮಾರ್ಚ್ ದಿ.1 ರಂದು ಭಾನುವಾರ ಸಂಜೆ ೪:೦೦ ಗಂಟೆಗೆ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯ ಗವಿಮಠ, ಬಸವಕಲ್ಯಾಣ ಕಾರ್ಯಕ್ರಮ ಜರುಗಲಿದ್ದು, ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಶ್ರೀ ಘನಲಿಂಗ ರುದ್ರಮುನಿ ಶಿವಯೋಗಿಗಳ ದರ್ಶನ ಪಡೆದು, ಮಹಾಪ್ರಸಾದ ಸ್ವೀಕರಿಸಿ ಪುನೀತರಾಗಬೇಕೆಂದು ಗವಿಮಠ ಟ್ರಸ್ಟ್ ವತಿಯಿಂದ ಕೋರಲಾಗಿದೆ.

error: Content is protected !!