ಕೊರವಿ ದೊಡ್ಡ ತಾಂಡಾದಲ್ಲಿ ಕಾಳಿಕಾದೇವಿಯ ಜಾತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 200 ಕ್ಕಿಂತ ಹೆಚ್ಚು ಜನರು ಭಾಗಿ

ಚಿಂಚೋಳಿ: ತಾಲ್ಲೂಕಿನ ಕೊರವಿ ದೊಡ್ಡ ತಾಂಡಾದಲ್ಲಿ ಹಮ್ಮಿಕೊಂಡ ಕಾಳಿಕಾದೇವಿಯ 14ನೇ ಜಾತ್ರಾ ಮಹೋತ್ಸವದಲ್ಲಿ ನೇರೆಯ ತೆಲಂಗಾಣ ರಾಜ್ಯದ ತಾಂಡೂರನ ವಿನಾಯಕ ಸುಪರ್ ಸ್ವೇಷಾಲೀಟಿ ಆಸ್ವತ್ರೆಯ ಸಂಸ್ಥಾಪಕ ವಿಠ್ಠಲ ನಾಯಕ ವೈಧ್ಯರ ತಂಡದೊಂದಿಗೆ ಸಿಬ್ಬಂದಿ ವರ್ಗದವರು ಆಗಮಿಸಿ ಕಾಳಿಕಾದೇವಿಯ ಜಾತ್ರೆಯಲ್ಲಿ ಆಗಮಿಸಿ ಭಕ್ತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ಕಾಳಿಕಾದೇವಿಯ ಮಠದ ಪೀಠಾಧಿಪತಿಗಳಾದ ವಿಠ್ಠಲ ಮಹಾರಾಜರು ಉಧ್ಘಾಟನೆ ಮಾಡಿದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 200 ಕ್ಕಿಂತ ಹೆಚ್ಚು ಜನರು ಬಿ.ಪಿ,ಶೂಗರ್,ಜ್ವರ,ಕೆಮ್ಮು,ನೆಗಡಿ,ಸೇರಿದಂತೆ ಇನ್ನಿತರೆ, ತಪಾಸಣೆಯನ್ನು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಹ ಆರೋಗ್ಯ ತಪಾಸಣೆ ಸದುಪಯೋಗ ಪಡೆದುಕೊಂಡರು ಎಂದು ಉಚಿತ ಆರೋಗ್ಯ ತಪಾಸಣೆ ನೇತೃತ್ವ ವಹಿಸಿದ್ದ ಡಾ.ತುಕ್ಕರಾಮ ಪವ್ಹಾರ ತಿಳಿಸಿದ್ದಾರೆ. ಉಚಿತ
ತಪಾಸಣೆ ನಡೆಸಿದ ವೈದ್ಯರುಗಳಾದ ಡಾ.ಮಾಲಾಶ್ರೀ,ಡಾ.ಆಕಾಂಕ್ಷಿ,ಡಾ.ಸಂತೋಷ ರಾಠೋಡ್,ಶಾರದಾ ಚಿಂಚೋಳಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!