ಬೀದರ್ : ನಗರದ ರಸ್ತೆ ವಿಭಜಕಗಳ ಮಧ್ಯೆ ರಾತ್ರಿ ಗಿಡಗಳನ್ನ ನೆಡುತ್ತಿದ್ದ ಸಂದರ್ಭದಲ್ಲಿ ಅದರ ವಿಡಿಯೋ ಮಾಡಲು ಮುಂದಾಗಿದ್ದ ಸ್ಥಳಿಯ ಪತ್ರಕರ್ತನ ರೊಚ್ಚಿಗೆದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಾಲರ್ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳ ಮೋಕ್ಷಾ ಮಾಡಿ ಹ*ಲ್ಲೆ ಮಾಡಿದ್ದಾರೆ.
ಹ*ಲ್ಲೆ ಮಾಡಿದ್ದಲ್ಲದೆ ಆತನ್ನ ಅರಣ್ಯ ಇಲಾಖೆ ಕಚೇರಿಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಲ್ಲದೆ ಸರ್ಕಾರಿ ಅಧಿಕಾರಿಗಳ ಕೆಲ್ಸಕ್ಕೆ ಅಡೆತಡೆ ಅಂತಾ ಸಾಬೀತು ಮಾಡಲು ಯತ್ನ
ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್ ಆಗ್ತಿದಂತೆ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಎಪ್ರಿಲ್ 16ಕ್ಕೆ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.
ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ವೈರಲ್ ಬೆನ್ನೆಲೆ ಸಚಿವ ಖಂಡ್ರೆ ತನ್ನ ಇಲಾಖೆಗೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಸೂಚಿಸಿದ್ದಾರೆ.