18-04-2025, ಶುಕ್ರವಾರ, ಬೆಂಗಳೂರು/ಬೀದರ್: ಬೀದರ ಶಕ್ತಿ’ ಕನ್ನಡ ದಿನಪತ್ರಿಕೆಯ ವರದಿಗಾರ ರವಿ ಬಸವರಾಜ ಬೊನುಂಡೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ದಸ್ತಗಿರಿಸಾಬ, ಗಸ್ತು ಅರಣ್ಯ ಪಾಲಕ, ಹೊನ್ನಿಕೇರಿ ಗಸ್ತು, ಬೀದರ ಪ್ರಾದೇಶಿಕ ಅರಣ್ಯ ವಲಯ, ಪತ್ರಕರ್ತನಿಗಾದ ಹಲ್ಲೆ ಪ್ರಕರಣದಲ್ಲಿ ಪತ್ರಕರ್ತರಿಗೆ ನ್ಯಾಯ ದೊರಕಿದೆ.
ಘಟನೆ ಹಿನ್ನಲೆ, ದಿನಾಂಕ 16-04-2025ರಂದು ಮಾನ್ಯ ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ, ರವರು ಬೀದರ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆ/ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭಕ್ಕೆ ಆಗಮಿಸು ಪ್ರಯುಕ್ತ ಮಾನ್ಯ ಅರಣ್ಯ ಸಚಿವರ ನಿರ್ದೇಶನದಂತೆ 2025-26ನೇ ಸಾಲಿನ ರಸ್ತೆ ಬದಿ ನೆಡುತೋಪು ಕಾಮಗಾರಿಗೆ ಮಾನ್ಯ ಮುಖ್ಯ ಮಂತ್ರಿರವರಿಂದ ಚಾಲನೆ ನೀಡಲು ದಿನಾಂಕ: 15-04-2025ರಂದು ರಾತ್ರಿ 09:00 ಗಂಟೆಯ ಸುಮಾರಿಗೆ ಬೀದರ ನಗರದ ಎರ್‌ಪೋರ್ಟ್ ಮಾರ್ಗದಲ್ಲಿ ನೆಡುತೋಪು ನಿರ್ಮಾಣ ಮಾಡುವ ಕಾಮಗಾರಿಯ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ‘ಬೀದರ ಶಕ್ತಿ’ ಕನ್ನಡ ದಿನಪತ್ರಿಕೆಯ ವರದಿಗಾರರಾದ ರವಿ ಬಸವರಾಜ ಬೊನುಂಡೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಮಧ್ಯ ವಾಗ್ವಾದ ಹಾಗೂ ತಂಟೆ ತಕರಾರು ನಡೆದು ಈ ಕುರಿತು ಬೀದರ ಗಾಂಧಿ ಗಂಜ ಪೋಲಿಸ್ ಠಾಣೆಯಲ್ಲಿ ಅಪರಾದ ಸಂಖ್ಯೆ: 0063/2025 ಹಾಗೂ 0064/2025 ಪ್ರಕರಣಗಳು ದಾಖಲಾಗಿರುತ್ತದೆ.
ಮುಂದುವರೆದು, ಸಾಮಾಜಿಕ ಮಾದ್ಯಮ ಜಾಲಾತಾಣಗಳಲ್ಲಿ ವೈರಲ್ ಆದ ದೃಷ್ಯಾವಳಿಗಳ (ವಿಡೀಯೊ) ತುಣುಕುಗಳು ಮತ್ತು ಜಿಲ್ಲೆಯ ವಿವಿಧ ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿ, ಮತ್ತು ಪತ್ರಕರ್ತರ ಸಂಘಟನೆಗಳಿಂದ ಈ ವಿಚಾರವಾಗಿ ಪ್ರತಿರೋಧ ವ್ಯಕ್ತವಾದ ಪರಿಣಾಮ ಅರಣ್ಯ ಅಧಿಕಾರಿ ದಸ್ತಗಿರಿಸಾಬ, ಗಸ್ತು ಅರಣ್ಯ ಪಾಲಕ, ಹೊನ್ನಿಕೇರಿ ಗಸ್ತು, ಬೀದರ ಪ್ರಾದೇಶಿಕ ಅರಣ್ಯ ವಲಯ, ಇವರನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ದಸ್ತಗಿರಿಸಾಬ, ಗಸ್ತು ಅರಣ್ಯ ಪಾಲಕ ಹೊನ್ನಿಕೇರಿ ಗಸ್ತು, ಬೀದರ ಪ್ರಾದೇಶಿಕ ಅರಣ್ಯ ವಲಯ, ಇವರು ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುವಾಗ ಸಾರ್ವಜನಿಕರೊಂದಿಗೆ ಸೌಜನ್ಯಯುತವಾದ ಸ್ಪಂದನಾಶೀಲ ವರ್ತನೆಯನ್ನು ತೋರಿಸದೇ ಇರುವುದು ಹಾಗೂ ವಿನಯದಿಂದ ವರ್ತಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮಗಳು 2021ರ ನಿಯಮ (3)ನ್ನು ಉಲ್ಲಂಘಿಸಿ ಕರ್ತವ್ಯದಲ್ಲಿ ಅಶಿಸ್ತು ತೋರಿರುವುದರಿಂದ ಹಾಗೂ ಸದರಿ ಈ ಮೇಲಿನ ಘಟನೆಯ ಬಗ್ಗೆ ಕುಲಂಕುಶವಾಗಿ ತನಿಖೆಯಾಗಿ ಪ್ರಕರಣದ ಸತ್ಯಾಸತ್ಯೆಯು ತಿಳಿಯಬೇಕಾಗಿರುವುದರಿಂದ ಸದರಿಯವರನ್ನು ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗುವ ಸಂಭವ ಇರುವುದರಿಂದ ಇವರನ್ನು ಕರ್ನಾಟಕ ಸಿವಿಲ್ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10 (1) (ಡಿ)ರನ್ವಯ ಹಾಗೂ ಉಲ್ಲೇಖ (1) & (2)ರ ಸೂಚನೆಯಂತೆ ಈ ಕೆಳಗಿನಂತೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ ಎಂದು ಅಧಿಕೃತವಾಗಿ ತಿಳಿದುಬಂದಿದೆ.
ರಾಜ್ಯದ್ಯಂತ ಪತ್ರಕರ್ತರ ಸಂಘಟನೆಗಳ ಹೋರಾಟಕ್ಕೆ ಸಂಧ ಜಯ, ಇದು ಪತ್ರಕರ್ತರ ಜಯ. ಅಧಿಕಾರದ ಮಧದಿಂದ ಸರಕಾರಿ ಅಧಿಕಾರಿಗಳು ಕೆಟ್ಟ ರೀತಿಯಲ್ಲಿ ವರ್ತಿಸುವವರಿಗೆ, ಇದು ಸೂಕ್ತ ಉತ್ತರ.
ವರದಿಗಾರನ ಮೇಲೆ ಹಲ್ಲೆ ಮಾಡಿದ ಅರಣ್ಯ ಅಧಿಕಾರಿ ಅಮಾನತ್ತು ಮಾಡಿಸಿದ ರಾಜ್ಯ ಅರಣ್ಯ ಸಚಿವರಿಗೆ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ರಾಜ್ಯ ಸರಕಾರಕ್ಕೆ ಪತ್ರಕರ್ತರ ಪರವಾಗಿ ಕರ್ನಾಟಕ ರಾಜ್ಯ ವೃತ್ತಿನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಪ್ರಸಾದ್ ಗೌಡ ಮತ್ತು ಪದಾಧಿಕಾರಿಗಳ ವತಿಯಿಂದ ಹೃದಯ ತುಂಬಿದ ಕೃತಜ್ಞತೆಗಳು.