ಚಿತ್ತಾಪುರ:- ಶುಕ್ರವಾರ ಸಂಜೆ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ನಾಲ್ಕು ಮನೆಗಳು ಜಖಂ ಆಗಿದ್ದು ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ ಎಂದು ತಹಶೀಲ್ದಾರ್ ನಾಗಯ್ಯ ಸ್ವಾಮಿ ಹಿರೇಮಠ ಅವರು ಮಾಹಿತಿ ನೀಡಿದ್ದಾರೆ
ನಿನ್ನೆ ಚಿತ್ತಾಪುರ ಪಟ್ಟಣದಲ್ಲಿ 8.4 ಮಿ.ಮಿ ಮಳೆಯಾಗಿದ್ದು,ಗುಂಡಗುರ್ತಿ ವಲಯದಲ್ಲಿ 6.6ಮಿ.ಮಿ ಅಳ್ಳೊಳ್ಳಿ ವಲಯದಲ್ಲಿ 6.0 ಮಳೆಯಾಗಿದ್ದು ಚಿತ್ತಾಪುರ ಪಟ್ಟಣದ ಖಾಧಿ ಭಂಡಾರ ಹತ್ತಿರದ ಶಕುಂತಲಾ ಗಂಡ ಚಂದ್ರಕಾಂತ ಸುನಾರ,ಶಿವರಾಮ ತಂದೆ ಶಂಕರರಾವ ಸರಾಫ,ಚಿತಾಷಾವಲಿ ವೃತ್ತದ ಹತ್ತಿರ ಜುಲೇಖಾಬೇಗಂ ಗಂಡ ಪಾಶಾಮಿಯ್ಯಾ ಮತ್ತು ತಾಲೂಕಿನ ಇಂಗಳಗಿ ಗ್ರಾಮದ ನಾಗೇಂದ್ರ ತಂದೆ ತಿಪ್ಪಣ್ಣ ಇವರ ದನದ ಕೊಟ್ಟಿಗೆ ಬಿದ್ದಿದ್ದು ಸ್ಥಳಕ್ಕೆ ತಹಶೀಲ್ದಾರ್ ನಾಗಯ್ಯ ಸ್ವಾಮಿ ಹಿರೇಮಠ ಮ್ತತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ
ವರದಿ ಮೊಹಮ್ಮದ್ ಅಲಿ ಚಿತ್ತಾಪುರ