*ಹಳೆ ಹುಬ್ಬಳ್ಳಿ* ಹಳೆ ಹುಬ್ಬಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಮಿನಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ನಂಬರ್ ka 22 AA5746 ನದ್ದರಲ್ಲಿ ಮತ್ತು ಇಬ್ಬರೂ ಸೈನಿಕರ ಮನೆಯ ವಸ್ತುಗಳನ್ನು ಚೆನ್ನೈಯಿಂದ ಕಾರವಾರ ಹಾಗೂ ಗೋವಾ ಕಡೆಗೆ ತೆಗೆದುಕೊಂಡು ಹೋಗುವಾಗ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾರವಾರ ರೋಡ್ ಬೈಪಾಸ್ ಹತ್ತಿರ ವಾಹನ ಚಾಲಕ ಊಟ ಮಾಡಲು ನಿಲ್ಲಿಸಿದಾಗ ವಾಹನವನ್ನು ಮತ್ತು ವಾಹನದಲ್ಲಿದ್ದ ಮೂರು ವಿವಿಧ ಕಂಪನಿಯ ಮೋಟಾರ್ ಸೈಕಲ್ ಗಳು ಹಾಗೂ ಗ್ರಹ ಬಳಕೆಯ ವಸ್ತುಗಳು ಒಟ್ಟು 15,50,000 ಕಿಮ್ಮತ್ತಿನ ಉಳ್ಳವನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ಯು ಬಿ ಚಿಕ್ಕಮಠ. ಸಹಾಯಕ ಪೊಲೀಸ್ ಆಯುಕ್ತರು ಹುಬ್ಬಳ್ಳಿ ಶಹರ ದಕ್ಷಿಣ ಉಪ ವಿಭಾಗ. ರವರ ಮಾರ್ಗದರ್ಶನದಲ್ಲಿ ಎಂ ಎನ್ ಸಿಂಧೂರ್. ಪೋಲಿಸ್ ಇನ್ಸ್ಪೆಕ್ಟರ್ ಹಳೆ ಹುಬ್ಬಳ್ಳಿ ಪಿ ಎನ್ ಸಾತನ್ನವರ್. ಪಿಎಸ್ಐ ಹಳಿ ಹುಬ್ಬಳ್ಳಿ ವಿಶ್ವನಾಥ್ ಆಲ್ಮಟ್ಟಿ. ಪಿಎಸ್ಐ ಹಳೆ ಹುಬ್ಬಳ್ಳಿ ಹಾಗೂ ಸಿಬ್ಬಂದಿಯವರಾದ
ಎಎಸ್ಐ ಪಿ ಬಿ ಕಾಳೆ. ಪಿ ಎಚ್ ಸಿ ರವರಾದ ಅಭಯ್ ಕನ್ನಳ್ಳಿ. ಕೃಷ್ಣ ಮೋಟೆಬೆನ್ನೂರ್. ನಾಗರಾಜ್ ಕೆಂಚನವರ್. ಬಸವರಾಜ್ ಚೌಹಾನ್. ಡಿಬಿ ಚಂಡುನವರ. ಜಿಎಸ್ ಮತ್ತಿಗಟ್ಟಿ. ಸಿಪಿಸಿ ರವರಾದ ರಮೇಶ್ ಹಲ್ಲೆ. ಕಲ್ಲನಗೌಡ ಗುರನಗೌಡ್ರು. ಹಾಗೂ ವಿಠ್ಠಲ್ ಹೊಸಳ್ಳಿ. ಅವರು ಆರೋಪಿತನಾದ ವಿಠ್ಠಲ್ ತಂದೆ ಬಸಪ್ಪ ಕುರಡಿ ಸಾಕಿನ್ ರಾಮನ ಕೊಪ್ಪ ತಾಲೂಕು ಕುಂದಗೋಳ ಜಿಲ್ಲಾ ಧಾರವಾಡ ಈತನಿಗೆ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹತ್ತಿರ ಪತ್ತೆ ಮಾಡಿ ಅವನಿಂದ ಮಿನಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನ ಅದರಲ್ಲಿದ್ದ ಒಟ್ಟು ಮೂರು ಮೋಟಾರ್ ಸೈಕಲ್ ಗಳು ಗೃಹ ಬಳಕೆಯ ಸಾಮಾನುಗಳು ಒಟ್ಟು 15,50,000 ಕಿಮ್ಮತ್ತುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ವಶಪಡಿಸಿಕೊಂಡು ಪತ್ರಗಳನ್ನು ಪರಿಶೀಲನೆ ಮಾಡಿ ಮಾಲೀಕರಿಗೆ ಹಿಂದಿರುಗಿಸಿದರು.
ವರದಿ : ಸದಾನಂದ ಎಂ.ಎಚ್