ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಜಾರಕಿಹೊಳಿ ಅವರು* ಚಿಕ್ಕೋಡಿ ಪಟ್ಟಣದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಡಿ. ಟಿ. ಶ್ರೀನಿವಾಸ ಹಾಗೂ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ ಅವರ ನೇತೃತ್ವದಲ್ಲಿ, ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಹಣಬರ ಸಮಾಜದ ಶತಮಾನೋತ್ಸವ, ಶ್ರೀ ಶ್ರೀ ಶ್ರೀ ಕೃಷ್ಣ ಯಾದವಾನಂದ ಸ್ವಾಮಿಗಳ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಬೃಹತ್ ಯಾದವ ಹಣಬರ ಗೊಲ್ಲ ಸಮಾವೇಶ ಭವ್ಯವಾಗಿ ನಡೆಯಿತು.
ಈ ಮಹತ್ವದ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರು ಹಾಗೂ ಗಣ್ಯರು ಜೊತೆಗೆ ಸೇರಿ ವೀರಕೇಸರಿ ಅಮಟೂರು ಬಾಳಪ್ಪ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು. ಯಾದವ ಸಮಾಜದ ಏಳಿಗೆ, ಒಗ್ಗಟ್ಟು ಹಾಗೂ ಹಕ್ಕುಗಳ ಕಾಪಾಡುವ ನಿಟ್ಟಿನಲ್ಲಿ ಈ ಸಮಾವೇಶ ದಿಕ್ಕು ತೋರಿಸುವ ಬೆಳಕು ಆಗಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತೇವೆ.
ಸಚಿವರಾದ ಶ್ರೀ ಭೈರತಿ ಸುರೇಶ, ಶಾಸಕರಾದ ಶ್ರೀ ಗಣೇಶ ಹುಕ್ಕೇರಿ, ಶ್ರೀ ಅಶೋಕ ಪಟ್ಟಣ, ಮತ್ತು ಶ್ರೀ ರಾಜು ಕಾಗೆ, ವಿ.ಪ. ಸದಸ್ಯ ಶ್ರೀ ನಾಗರಾಜ ಯಾದವ, ಉಪಸ್ಥಿತರಿದ್ದರು.
ವರದಿ/ಸದಾನಂದ ಎಚ್