ದೊಡ್ಡ ಚರಂಡಿ ಯಲ್ಲಿ ಬಿದ್ದಿರುವ ಹಸುವನ್ನು ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ

ಜೇವರ್ಗಿ : ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ಆಕಸ್ಮಿಕವಾಗಿ ದೊಡ್ಡ ಚರಂಡಿಗೆ ಬಿದ್ದಿದೆ ಎಂದು ತಿಳಿದಾಗ ರಕ್ಷಣಾ ಕರೆ ಸಮಯ 16:30 ಬಂದಿರುತ್ತದೆ ಕಾರ್ಯ ಪ್ರವೃತ್ತರಾದ ಜೇವರ್ಗಿ ಅಗ್ನಿಶಾಮಕ ಸಿಬ್ಬಂದಿ ಯವರು ಸಮಯ 16:33 ರಕ್ಷಣಾ ಕರೆಯ ಸ್ಥಳವನ್ನು ತಲುಪಿ ಹೊಸ ಮತ್ತು ಸ್ಥಳೀಯರ ಸಹಾಯದಿಂದ 30 ನಿಮಿಷಗಳ ಕಾಲ ಕಾರ್ಯಚರಣೆ ಮಾಡಿ ದೊಡ್ಡ ಚರಂಡಿಯಲ್ಲಿ ಬಿದ್ದಿರುವ ಆಕಳನ್ನು ಜೀವಂತವಾಗಿ ರಕ್ಷಣೆ ಮಾಡಿದರು,

ಈ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಸುಭಾಷ್ (ಅಗ್ನಿಶಾಮಕ ಠಾಣಾಧಿಕಾರಿ), ಪಿಂಟು ಬಿ ಲಮಾಣಿ (ಪ್ರಮುಖ ಅಗ್ನಿಶಾಮಕ) ಸೋಮ್‍ಶೇಖರ್ ಗೋಗಿ (ಚಾಲಕ ತಂತ್ರಜ್ಞ ) ಸಂಗಪ್ಪ ಲೋಣಿ (ಅಗ್ನಿಶಾಮಕ ಚಾಲಕ) ಆನಂದಯ್ಯ (ಅಗ್ನಿಶಾಮಕ) ಹೊಳಗುಂದಿ ಪುನೀತ್ (ಅಗ್ನಿಶಾಮಕ) ಕೆ.ಎಂ ಜಗದೀಶ್ (ಅಗ್ನಿಶಾಮಕ) ಸೋಮಶೇಖರ್ ದೊಡ್ಮನಿ (ಅಗ್ನಿಶಾಮಕ) ದೌವಲ್ ಸಾಬ್ (ಅಗ್ನಿಶಾಮಕ ) ಆಕಳನ್ನು ಜೀವಂತವಾಗಿ ರಕ್ಷಣೆ ಮಾಡಿ ಮಾಲೀಕರಾದ ಮೈನುದ್ದೀನ್ ರವರಿಗೆ ಒಪ್ಪಿಸಿದರು.

error: Content is protected !!