ಹುಮನಾಬಾದ : ತಾಲೂಕಿನ ಮಾಣಿಕ ಪಬ್ಲಿಕ್ ಸ್ಕೂಲ್ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಅದಕ್ಕಾಗಿ ಸಂಸ್ಥೆಯಿಂದ ನುರಿತ ಹಾಗೂ ಅನುಭವಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಗಲಿರುಳು ಪ್ರಯತ್ನಿಸುತ್ತಿದೆ. 2024-25ನೇ ಸಾಲಿನ ಸಿ.ಬಿ.ಎಸ್.ಸಿ ಬೋರ್ಡ್ ಪರೀಕ್ಷೆಯಲ್ಲಿ ನಮ್ಮ ವಿದ್ಯಾಲಯದ ಫಲಿತಾಂಶ ಶೇ100% ಅತ್ಯುತ್ತಮವಾಗಿದೆ.
ಬೋರ್ಡ್ ಪರೀಕ್ಷೆಗೆ ಒಟ್ಟು 77 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ ಅಗ್ರಶ್ರೇಣಿಯಲ್ಲಿ 01 ವಿದ್ಯಾರ್ಥಿ, ಪ್ರಥಮ ಶ್ರೇಣಿಯಲ್ಲಿ 60 ವಿದ್ಯಾರ್ಥಿಗಳು, ಹಾಗೂ ಎರಡನೇ ಶ್ರೇಣಿಯಲ್ಲಿ 16 ವಿದ್ಯಾರ್ಥಿ ಉತ್ತೀರ್ಣರಾಗಿರುತ್ತಾರೆ ಎಂದು ತಿಳಿಸಲು ಅತ್ಯಂತ ಹರ್ಷವಾಗುತ್ತದೆ. ಸಾಹಿಲ್ 92.2%, ಐಶಾ ಆಫ್ರೀನ್ 84.6% ಮಹಾದೇವ 83% ಶ್ರೀಕರ 83%, ಜಿ.ಜೆ ಜೋಸ್ನಾ 79.8% ಸಾಯಿಕೃಷ್ಣ 79.2% ಗುರುಪ್ರಸಾದ 78.6% ವೈಷ್ಣವಿ 78.2% ಸ್ನೇಹಾ 78% ಸುಜಾತಾ 78% ಓಂಪಾಠಕ 77.6% ಹಾಗೂ ವಾಸವಿ 76.6% ಅಂಕಗಳನ್ನು ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪ.ಪೂ. ಜ್ಞಾನರಾಜ ಪ್ರಭುಗಳು ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸ ಇನ್ನು ಚೆನ್ನಾಗಿ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ. ನಮ್ಮ ಸಂಸ್ಥೆಯ ಅಧ್ಯಕ್ಷರಾದ ಆನಂದರಾಜ ಪ್ರಭುಗಳು, ಕಾರ್ಯದರ್ಶಿಗಳಾದ ಚಾರುದತ್ತ ಪ್ರಭುಗಳು, ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತ ಪಡಿಸುತ್ತಾ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂಧಿ ವರ್ಗದವರಿಗೆ ಅಭಿನಂದಿಸಿದ್ದಾರೆ. ಮೃಗಾಂಕ ಪಾಂಡೆ ಪ್ರಾಚಾರ್ಯರು, ಹಾಗೂ ಸಿಬ್ಬಂಧಿ ವರ್ಗದವರು ಫಲಿತಾಂಶದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.