ಶಾಹಪೂರ ಪಟ್ಟಣದ ಸಮಾಜ ಕಲ್ಯಾಣ ಕಚೇರಿಯ ಬಾಲಕಿಯರ ವಸತಿ ನಿಲಯದ ಅಡುಗೆ ಸಿಬ್ಬಂದಿಯಾಗಿದ್ದ ಶರಣಮ್ಮ ವಯೋ ನಿವೃತ್ತಿ ಹೊಂದಿಹ ಕಾರಣ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಾಲಕಿಯರ ವಸತಿ ನಿಲಯದ ವಾರ್ಡನ, ಮತ್ತು ಸಿಬ್ಬಂದಿಯವರಿಂದ ಶರಣಮ್ಮ ಅವರಿಗೆ ಶಾಲು ಹಚ್ಚಿ ಗೌರವಯುತವಾಗಿ ಸನ್ಮಾನಿಸಲಾಯಿತು. ಶರಣಮ್ಮ
ಅವರು ಸುಮಾರು 30 ವರ್ಷಗಳಿಂದ ಒಂದೇ ಹಾಸ್ಟೆಲ್ ನಲ್ಲಿ ಅಡುಗೆ ಸಹಾಯಕಿ ಹುದ್ದೆಯನ್ನು ನಿಷ್ಠಾ ಯಿಂದ ಹಾಗೂ ಶ್ರದ್ದಾ ಪೂರ್ವಕವಾಗಿ ವಸತಿ ನಿಲಯದಲ್ಲಿ ಅಡುಗೆ ಸಿಬ್ಬಂದಿಯಾಗಿ ಸೇವೆಯನ್ನು ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು ಅವರ ವಯೋನಿವೃತ್ತಿ ನಂತರ ಮುಂದಿನ ಜೀವನ ಆರೋಗ್ಯಸುಖ ಶಾಂತಿ ಸಮೃದ್ಧಿ ಸುಖವಾಗಿರಲಿ ಎಂದು ಎಲ್ಲಾ ಸಿಬ್ಬಂದಿಗಳು ಹಾರೈಸಿದರು.
ಈ ಸಂದರ್ಭದಲ್ಲಿ ವಾರ್ಡನ್ ಗಳಾದ ಮಹಬೂಬ, ಆಯಿಷಾ, ಪ್ರೀತಿ ದೇಸಾಯಿ, ಶಿವರಾಜ, ಸಿಬ್ಬಂದಿಗಳಾದ ದ್ವಿ.ದ.ಸ. ಉಲ್ಲಾಸ ಕುಮಾರ ಕೆರೋಳ್ಳಿ, ರಾಜೇಶ, ಕಂಪ್ಯೂಟರ ಆಪರೇಟರ್ ಗಳಾದ ಶರಣು ಹಾಗೂ ಅಶ್ವಿನಿ, ಶಿಲ್ಪ ಇತರರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್