ಗುಡಸ್ : ಪ್ರತಿ ವರ್ಷದಂತೆ ಈ ವರ್ಷವೂ ಹುಕ್ಕೇರಿ ತಾಲೂಕಿನ ಸುಕ್ಷೇತ್ರ ಗುಡಸ್ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಗುಡಸ್ ಗ್ರಾಮದ ಸುಕ್ಷೇತ್ರ ಶ್ರೀ ಬಸವೇಶ್ವರ ಜಾತ್ರೆಯನ್ನು ಶ್ರಾವಣ ಮಾಸದ ನಿಮಿತ್ಯವಾಗಿ ಜಾತ್ರೆಯನ್ನು ಆಚರಿಸಲಾಗುವುದು ಬೆಳಗಿನ ಜಾವದಲ್ಲಿ ಶ್ರೀ ಬಸವೇಶ್ವರ ದೇವರ ಮಹಾ ರುದ್ರಾಭಿಷೇಕ ನಡೆದು ಗ್ರಾಮದ ಮುತ್ತೈದೆಯರ ಸುಮಂಗಲಿಯರು ಆರತಿಯೊಂದಿಗೆ ಕರಡಿ ಮಜಲ ಭಜನ ವಾದ್ಯಗಳೊಂದಿಗೆ ಅಂಬಲಿ ಕೊಡಗಳನ್ನು ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು ದೇವರಿಗೆ ವಿವಿಧ ಹೂವುಗಳಿಂದ ದೇವರನ್ನು ಅಲಂಕಾರ ಮಾಡುವುದು ಅದೇ ರೀತಿಯಾಗಿ ಮರುದಿನ ಸಾಯಂಕಾಲದ ಸಮಯದಲ್ಲಿ ಗುಡ್ಡದ ಶ್ರೀ ಲಗಮ ದೇವಿಯ ಮಹಾಪ್ರಸಾದದ ಪೂಜೆಯನ್ನು ನೆರವೇರಿಸುವರು ಗುಡ್ಡದ ಲಗಮ ದೇವಿಗೆ ಹೋಗುವ ಸಂದರ್ಭದಲ್ಲಿ ವಾಹನಗಳಲ್ಲಿ ಪ್ರಸಾದವನ್ನು ಮಾಡಿಕೊಂಡು ಶ್ರೀ ಗುಡ್ಡದ ಲಗಮವದೇವಿಗೆ ಅಂದರೆ ಗ್ರಾಮದಿಂದ ಸುಮಾರು 3 ಕಿ.ಮೀಗಳವರಿಗೆ ವಾಹನಗಳಲ್ಲಿ ಪ್ರಸಾದಗಳನ್ನು ತೆಗೆದುಕೊಂಡು ಹೋಗಿ ಶ್ರೀ ಲಗಮವ್ವ ದೇವಿಯ ದೇವಸ್ಥಾನದ ಅವರಣದಲ್ಲಿ ಜನರಿಗೆ ಮಹಾಪ್ರಸಾದವನ್ನು ಹಂಚುವುದು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬಸವರಾಜ ನರಸಣ್ಣವರ್ ಸಿಂಧೂರ್ ಕರಿಗಾರ್ ಶಿವಪ್ಪ ಚಿಕ್ಕಾನಿ ಕಾಡಪ್ಪ ಅಮ್ಮನಿಗೆ ಚಂದು ದಂಡಗಿ ಮತ್ತು ಊರಿನ ಸಮಸ್ತ ಗುರು ಹಿರಿಯರು ಉಪಸ್ಥಿತರಿದ್ದರು
ವರದಿ : ಸದಾನಂದ ಎಮ್ ಎಚ್