ಲೋಕ ಮಾತೆ ಶ್ರೀ ಅಹಲ್ಯಬಾಯಿ ದೇವಿ ಹೋಲ್ಕರ್ ರವರಿಗೆ ಮರಣೋತ್ತರ “ಭಾರತ ರತ್ನ” ಪ್ರಶಸ್ತಿ ನೀಡಲು ಗೋಪಾಲ ಎಮ್. ಪಿ ಮನವಿ

17ನೇ ಶತಮಾನದಲ್ಲಿ 12 ಜ್ಯೋತಿರ್ ಲಿಂಗಗಳನ್ನು ಸ್ಥಾಪಿಸಿದ ಪುಣ್ಯ ಶ್ಲೋಕ ಮಾತಾಶ್ರೀ ಅಹಲ್ಯಾಬಾಯಿ ದೇವಿ ಹೋತ್ಕರ್ ರವರು ಭಾರತ ದೇಶದ್ಯಂತ 10,432 ದೇವಾಲಯಗಳನ್ನು ಸ್ಥಾಪಿಸಿದ ದಿಟ್ಟ ವೀರ ಮಹಾರಾಣಿಯ ಧರ್ಮ ರಕ್ಷಣೆಯ ಕಾರ್ಯವನ್ನು ಜಗತ್ತು ಕೊಂಡಾಡುತ್ತಿದೆ, ರಾಜಮಾತಾ ಅಹಲ್ಯಾಬಾಯಿ ದೇವಿ ಹೋಲ್ಕರ್ ರಾಷ್ಟ್ರೀಯ ಏಕತೆಯನ್ನು ಸಾಧಿಸಿ ಅಖಂಡ ಭಾರತ ನಿರ್ಮಾಣ ಪ್ರಯತ್ನ ಮಾಡಿದ ಮಹಾತಾಯಿ, ಮಹಿಳೆ ಅಶ್ವದಳವನ್ನು ಕಟ್ಟಿ ಮಹಿಳಾ ಸಾಧನೆಗೆ ವ್ಯಾಖ್ಯಾನ ಬರೆದವರು, ಇವರ ಆಡಳಿತವನ್ನು ಸುವರ್ಣ ಯುಗ ಎಂದು ಕರೆಯುವರು,

ರಾಜಯೋಗಿನಿ ಜನಕಲ್ಯಾಣಕ್ಕಾಗಿ ಅನಾಥಾಲಯ, ಔಷಧ ಕುಟೀರ, ಯಾತ್ರಿಕ ನಿವಾಸಗಳ ಸ್ಥಾಪಿಸಿ ಅವುಗಳಿಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸಿ ವಿಶೇಷವಾಗಿ ಪ್ರಾಣಿ ಪಕ್ಷಿಗಳಿಗೆ ನೀರು, ಆಹಾರ ಕಾಳಿನ ವ್ಯವಸ್ಥೆ ಕಲ್ಪಿಸಿದ ಮಹಾತಾಯಿ ರಾಜ ಮಾತಾ ಕೊಡುಗೆ ಅವಿಸ್ಮರಣೀಯವಾದದು.ಅವರು ಧಾರ್ಮಿಕ ಪ್ರಜ್ಞೆಯ ಮೂಡಿಸಿ ಅನ್ಯಧರ್ಮಿಯವರಿಂದ ದಾಳಿಗೆ ಒಳಗಾದ ಜ್ಯೋತಿರ್ಲಿಂಗಗಳ ಜೀರಣೋದ್ಧಾರ ಮಾಡಿದ ರಾಜಮಾತಾ ” ಭಾರತದ ಎಲಿಜಿಬಿತ್ ” ಎಂದ ವಿದೇಶಿಗರಿಂದ ಹೆಸರು ಪಡೆದ ರಾಜಮಾತೆ ರಾಣಿ ಅಹಲ್ಯಾಬಾಯಿ ದೇವಿ ಹೋಲ್ಕರ್ 31 ಮೇ” ಘನ ಭಾರತ ಸರ್ಕಾರ ರಾಷ್ಟ್ರವ್ಯಾಪಿ ಜಯಂತೋತ್ಸವ ಆಚರಣೆಗೆ ಆದೇಶ ಮಾಡಬೇಕು ಹಾಗೂ ಹಿಂದೂ ಧರ್ಮ ಉಳಿವಿಗಾಗಿ ಮಾಡಿದ ತಾಯಿಯ ಜನಕಲ್ಯಾಣದ ಕಾರ್ಯ ಕೊಡುಗೆಗಾಗಿ ಮರಣೋತ್ತರವಾಗಿ “ಭಾರತರತ್ನ ಪ್ರಶಸ್ತಿ” ಕೊಡಬೇಕಾಗಿ ಶ್ರೀಮತಿ ದ್ರೌಪತಿ ಮುರ್ಮು ರಾಷ್ಟ್ರಪತಿಗಳು ಹಾಗೂ ನರೇಂದ್ರ ಮೋದಿ ಪ್ರಧಾನಮಂತ್ರಿಗಳಿಗೆ ಪತ್ರವನ್ನು
ಗೋಪಾಲ ಎಂ.ಪಿ ಬರೆದಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!