ತಾಳಿಕೋಟಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ನ್ನು ಮುಸ್ಲಿಮರು ಶನಿವಾರ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಹುಣಸಗಿ ರಸ್ತೆಯಲ್ಲಿರುವ ಇದಗಾ ಮೈದಾನದಲ್ಲಿ ಈದ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹಮದ್ ಖಾಜಿ ನೇತೃತ್ವ ವಹಿಸಿದ್ದರು. ಧಾರ್ಮಿಕ ವಿದ್ವಾಂಸ ಡಾ.ಮಿನಹಾಜುದ್ದೀನ ಖಾಜಿ ಈದ್ ಪ್ರವಚನ ನೀಡಿದರು. ಪ್ರಮುಖರಾದ ಕೆ.ಎಂ.ಡೋಣಿ,ಎಂ.ಎಚ್. ಕೆಂಭಾವಿ,ಎ.ಡಿ.ಎಕೀನ, ಅಬ್ದುಲ್ ರಜಾಕ್ ಮನಗೂಳಿ,ಅಲ್ಲಾಭಕ್ಷ ನಮಾಜಕಟ್ಟಿ,ಎಂ.ಎ. ಮೇತ್ರಿ,ಕೆ.ಐ.ಸಗರ, ಸೈಯದ್ ಫಸಿಯುದ್ದೀನ ಕಾಜಿ, ಎ.ಎಸ್. ನಮಾಜಕಟ್ಟಿ,ಸಿಕಂದರ ವಠಾರ,ರಾಜ್ ಅಹಮದ್ ಒಂಟಿ,
ನಿರಂಜನಶಾ ಮಕಾಂದಾರ, ಅಬ್ದುಲ್ ಸತ್ತಾರ ಅವಟಿ,ಇಬ್ರಾಹಿಂ ಮನ್ಸೂರ,ಆರೀಫ ಹೊನ್ನುಟಗಿ, ಚಂದಾಹುಸೇನ ಖಾಂಜಾದೆ, ಎಂ.ಆರ್.ಮಕಾಂದಾರ,ರೋಶನ ಡೋಣಿ,ಎಂ.ಕೆ.ಚೋರಗಸ್ತಿ,ಎಸ್.ಎ.ನಾಲಬಂದ, ಮುಸ್ತಫಾ ಚೌಧರಿ, ಹಸನ ಸಾಬ್ ಮನಗೂಳಿ, ಮುಜಾಹೀದ ನಮಾಜಕಟ್ಟಿ,ತನ್ವೀರ ಮನಗೂಳಿ, ಶಫೀಕ ಇನಾಮದಾರ ಮತ್ತಿತರರು ಇದ್ದರು.
ವರದಿ : ದೇವು ಕೋಚಬಾಳ ತಾಳಿಕೋಟೆ
