ಔರಾದ್ : ತಾಲೂಕಿನ ಮುಸ್ತಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲಾ ಮಕ್ಕಳಿಗೆ ಪರಿಸರದ ಜಾಗೃತಿ ಮೂಡಿಸಲಾಯಿತು. ಶಾಲೆಯ ಮುಖ್ಯಶಿಕ್ಷಕಿ ಶಕುಂತಲಾ ಪಾಟೀಲ್, ಸಹಶಿಕ್ಷಕಿ ಸುನಿತಾ ಬಿರಾದಾರ್ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪರಿಸರವನ್ನು ನಾವು ರಕ್ಷಣೆ ಮಾಡಿದರೆ, ಅದು ನಮ್ಮನ್ನು ಉಸಿರಿರೋವರೆಗೂ ರಕ್ಷಣೆ ಮಾಡುತ್ತದೆ. ಪರಿಸರ ಸಂರಕ್ಷಣೆ, ಸಸಿ ನೆಡುವು ವಿಷಯ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿರಬೇಕು. ಸಸಿಗಳನ್ನು ನೆಟ್ಟು ಸ್ವಂತ ಮಕ್ಕಳಂತೆ ಅವುಗಳನ್ನು ಪೋಷಣೆ ಮಾಡಬೇಕು. ಮುಂದಿನ ದಿನಗಳಲ್ಲಿ ಗಿಡಗಳು ನಮಗೆ ಅಶ್ರಯ ನೀಡುತ್ತವೆ ಎಂದರು.
ಸಹಶಿಕ್ಷಕಿ ನಂದಿನಿ ಮೊಕ್ತೆದಾರ್ ಮಾತನಾಡಿ, ಕೇವಲ ಮರ, ಗಿಡಗಳನ್ನು ನಾಶಗೊಳಿಸುವುದರಿಂದ ಮಾತ್ರ ಪರಿಸರ ನಾಶವಾಗುವುದಿಲ್ಲ, ಬದಲಾಗಿ ಪರಿಸರದ ಮಾಲಿನ್ಯದಿಂದಲೂ ಕೂಡ ಪರಿಸರ ನಾಶವಾಗುತ್ತದೆ. ಆದ್ದರಿಂದ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುವ ಮೂಲಕ ಗಿಡಗಳನ್ನು ಬೆಳೆಸಬೇಕಿದೆ ಎಂದರು.
ಬಿಸಿಯೂಟ ಸಿಬ್ಬಂದಿಗಳಾದ ಸುನಿತಾ, ಮೀನಾಕ್ಷಿ ಸೇರಿದಂತೆ ಶಾಲಾ ಮಕ್ಕಳು ಪಾಲ್ಗೊಂಡರು.
ವರದಿ : ರಾಚಯ್ಯ ಸ್ವಾಮಿ