ಕುಡಿಯುವ ನೀರಿನ ಸುತ್ತ ಗಬ್ಬೆದ್ದು ನಾರುತ್ತಿರುವ ಚರಂಡಿ ಹೀಗಿರುವಾಗ ಡೆಂಗೀ ತಡೆ ಸಾಧ್ಯವೇ.? 

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಇಸ್ಲಾಂಪುರ ಗ್ರಾಮದಲ್ಲಿ

ಅಂಗನವಾಡಿ ಶಾಲೆಯ ಮುಂಭಾಗದಲ್ಲಿ ಹಾಗೂ ಪಕ್ಕದಲ್ಲೇ ಇರುವ ಕುಡಿಯುವ ನೀರಿನ ಟ್ಯಾಂಕ್ ಹತ್ತಿರ ಚರಂಡಿಯ ನೀರು ನಿಂತು ಗಬ್ಬು ವಾಸನೆ ಬರುತ್ತಾ ಇದ್ರು ಪಂಚಾಯತಿ ಯವರು ಡೋಂಟ್ ಕೇರ್ ಎಂಬಂತೆ ವರ್ಥಿಸುತ್ತಿದ್ದಾರೆ,

ರಾಜ್ಯದಲ್ಲಿ ಈಗಾಗಲೇ ಸ್ವಲ್ಪ ಡೆಂಗೀ ಪ್ರಕರಣ ಗಳು ಕಡಿಮೆ ಯಾಗುತ್ತಿವೆ ಅಂತಹದರಲ್ಲಿ ಇಂತಹ ಸಾರ್ವಜನಿಕ ಸ್ಥಳದಲ್ಲಿ ಸಣ್ಣ ಸಣ್ಣ ಮಕ್ಕಳು ಆಡುವ ಜಾಗದಲ್ಲಿ ಗಮನ ಹರಿಸದೆ ಇದ್ದರೆ ಮಾರಕ ರೋಗಗಳಿಗೆ ಮಕ್ಕಳು ಗ್ರಾಮಸ್ಥರು ತುತ್ತಾಗುವುದು ನಿಶ್ಚಿತ ಹಾಗಾದರೆ ಇದಕ್ಕೆ ಜವಾಬ್ದಾರಿ ಯಾರು.? ಎಂಬ ಯಕ್ಷಪ್ರಶ್ನೆ ಹುಟ್ಟುತ್ತಿದೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು

ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಈ ಕಡೆ ಗಮನಹರಿಸಿ ಸ್ವಚ್ಛತೆ ಕಾರ್ಯಕ್ಕೆ ಮುಂದಾಗಬೇಕಿದೆ,

 

 

ವರದಿ : ರಸುಲ್ ಬೆನ್ನೂರ

error: Content is protected !!