ರಾಯಚೂರು: ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಮಾತನಾಡುವ ಮೂಲಕ ಅವರ ಸತ್ಯ ಬಯಲಿಗೆ ಎಳೆಯುತ್ತೇನೆ ಎಂದು ಹೇಳಿಕೆ ನೀಡಿದ್ದು ಆರ್ ಎಸ್ ಎಸ್, ಬಿಜೆಪಿ ನಾಯಕರು ಖರ್ಗೆ ಅವರನ್ನು ಮಾನಸಿಕವಾಗಿ ಕುಗ್ಗಿಸಲು ದಲಿತರಾದ ನಾರಾಯಣಸ್ವಾಮಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ
ಎ.ವಸಂತಕುಮಾರ ಆರೋಪಿಸಿದರು.
ಅವರಿಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ, ಆರ್.ಅಶೋಕ ಸೇರಿದಂತೆ ಇನ್ನಿತರರು ಪದೇಪದೆ ಖರ್ಗೆ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ. ಇದೊಂದು ರಾಜಕೀಯ ಹವ್ಯಾಸವಾಗಿಬಿಟ್ಟಿದೆ. ವಿಪಕ್ಷದ ನಾಯಕ ಸ್ಥಾನದಲ್ಲಿರುವವರು ಈ ರೀತಿ ಟೀಕೆ ಮಾಡುವುದು ಶೋಭೆ ತರುವಂಥದ್ದಲ್ಲ. ಜನರ ಸಮಸ್ಯೆಗಳನ್ನು ಜನಪರ ನಿಲುವುಗಳನ್ನು ಹೊಂದಿದ್ದರೆ ಮಾತನಾಡಲಿ. ಸರ್ಕಾರ ವೈಫಲ್ಯವಾಗಿದ್ದರೆ, ಜನಪ್ರತಿನಿಧಿಗಳು ಕೆಲಸ ಮಾಡದಿದ್ದರೆ ಟೀಕೆ ಟಿಪ್ಪಣಿ ಮಾಡಬೇಕೆ ವಿನಃ ವೈಯಕ್ತಿಕ ದ್ವೇಷದಿಂದ ಖರ್ಗೆ ಕುಟುಂಬವನ್ನು ನಿಂದಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ನನ್ನನ್ನು ಕೆಣಕಬೇಡಿ. ಪ್ರಿಯಾಂಕ್ ಖರ್ಗೆಯವರ ಎಲ್ಲ ವಹಿವಾಟು ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ. ಬಿಚ್ಚಿಡುವಂತ ಯಾವುದೇ ಗೌಪ್ಯ ಸಂಗತಿಗಳು ಇಲ್ಲ. ಅವರ ಜೀವನವೇ ತೆರೆದ ಪುಸ್ತಕವಾಗಿದೆ. ಕೇವಲ ಪ್ರಚಾರದ ಆಸೆಯಿಂದ ಈ ರೀತಿ ಛಲವಾದಿ ನಾರಾಯಣ ಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರ ಎಲ್ಲ ಬಿಚ್ಚಿ ನಿಂತಿದ್ದಾರೆ. ಅವರಿಗೆ ಕಿಂಚಿತ್ತೂ ಮಾನ ಮರ್ಯಾದೆ ಇದ್ದರೆ ಬೆತ್ತಲಾಗಿ ನಿಂತಿರುವ ಅವರು ಮಾನ ಮುಚ್ಚಿಕೊಳ್ಳಲಿ ಏನು ಬಿಚ್ಚಿಡುತ್ತೇನೆ ಎಂಬುದನ್ನು ಸ್ಪಷ್ಟಪಡಿಸಲಿ. ಖರ್ಗೆ ಹಾಗೂ ಪ್ರಿಯಾಂಖ ಖರ್ಗೆ ಬಗ್ಗೆ ಎಲ್ಲ ಮಾಹಿತಿ ಬಿಚ್ಚಿಡಲಿ. ಜನರಿಗೂ ಗೊತ್ತಾಗಲಿ ಅವರ ಬಗ್ಗೆ ಏನಿದೆ ಎನ್ನುವುದು ರಾಜಕಾರಣದ ವ್ಯವಸ್ಥೆಯಲ್ಲಿ ಕಿಂಚಿತ್ತು ಕಾಳಜಿ ಇದ್ದರೆ. ಇತಿಮಿತಿಯೊಳಗೆ ಮಾತನಾಡಲಿ ಎಂದು ಕಿಡಿಕಾರಿದರು.
ಬಿಜೆಪಿಯ ಗೊಂದಲದ ನಾಯಕತ್ವ ಧಿಕ್ಕರಿಸಿ ಇಬ್ಬರು ಶಾಸಕರುಹೊರಗೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇಯಾದ ಇತಿಹಾಸವಿದೆ. ಬಿಜೆಪಿ ನಾಯಕರ ಟೀಕೆ ಆಪಾದನೆಗಳು ಜನರ ದಿಕ್ಕು ತಪ್ಪಿಸುವ ಹುನ್ನಾರವಾಗಿದೆ.
ಛಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ನಿಂದಲೆ ರಾಜಕೀಯ ಜೀವನ ಆರಂಭಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರ ಗರಡಿಯಲ್ಲಿ ಬೆಳೆದವರು. ಈಗ ಅಧಿಕಾರದಾಸೆಗೆ ಬಿಜೆಪಿಗೆ ಹೋದವರು. ಖರ್ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಯಾವ ಸಮುದಾಯಕ್ಕೂ ಕಡೆಗಣಿಸಿಲ್ಲ. ರಾಯಚೂರು ಮಹಾನಗರ ಪಾಲಿಕೆಯ ಮಹಾಪೌರರಾದ ನರಸಮ್ಮ ಮಾಡಗಿರಿ ಅವರು ರಜೆ ಮೇಲೆ ಹೋಗಿದ್ದಾರೆ. ಮಾದಿಗ ಸಮುದಾಯದ ನರಸಮ್ಮ ಅವರನ್ನು ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾದಿಗ ಸಮಾಜದ ಮುಖಂಡ ಎಂ. ವಿರುಪಾಕ್ಷಿ ಆರೋಪ ಮಾಡಿದ್ದು ಸರಿಯಲ್ಲ, ಸಮಾಜಕ್ಕೆ ಅನ್ಯಾಯ ಆಗುವುದಕ್ಕೆ ನಾವು ಬಿಡುವುದಿಲ್ಲ. ರಜೆ ಮೇಲೆ ಹೋಗಿರುವ ವಿಚಾರದ ಗೊಂದಲವಿದೆ. ಅವರ ರಜೆ ಮೇಲೆ ಹೋಗುವ ವಿಚಾರ ವೈಯಕ್ತಿಕ ಹೋಗಿದ್ದರೆ.
ಒತ್ತಡ ಹೇರಿದ್ದರೆ ಅವರೇ ಸ್ಪಷ್ಟಪಡಿಸಬೇಕು. ಪಕ್ಷದ ಗಮನಕ್ಕೆ ಇಲ್ಲ. ರಾಜಕೀಯ ಒತ್ತಡ ಹಾಕಿದ್ದರೆ. ದೂರು ಕೊಡಲಿ. ಪಕ್ಷದಲ್ಲಿ ಗುಂಪುಗಾರಿಕೆ
ರಾಯಚೂರಿನಲ್ಲಿ ರಾಜಕೀಯ ಅಸ್ತಿತ್ವಕ್ಕೆ ಉಳಿಸಿಕೊಳ್ಳಲು ತಮ್ಮದೇ ಗುಂಪು ಮಾಡಿಕೊಳ್ಳುತ್ತಿದ್ದಾರೆ. ವೈಯಕ್ತಿಕವಾಗಿ ಈ ಬೆಳವಣಿಗೆಯನ್ನು ನಾನು ಒಪ್ಪುವುದಿಲ್ಲ. ಸಮಯ ಬಂದಾಗ ದಲಿತ ಸಿಎಂ ಕೂಡ ಆಗುತ್ತಾರೆ. ಆ ಸಮಯ ಬಂದಿಲ್ಲ ಬರಲಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾದ ಬಸವರಾಜ ಪಾಟೀಲ್ ಇಟಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜಶೇಖರ ರಾಮಸ್ವಾಮಿ, ಕೆಪಿಸಿಸಿ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ, ನಗರಪಾಲಿಕೆ ಸದಸ್ಯ ಬಸವರಾಜ ದರೂರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಸ್ಲಂ ಪಾಶಾ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಮಾಜಿ ಅಧ್ಯಕ್ಷ ಮೊಹಮದ್ ಉಸ್ಮಾನ, ಅಬ್ದುಲ ಕರೀಮ, ಇಕ್ಬಾಲ್ ಅಹ್ಮದ, ಶ್ರೀನಿವಾಸ ಶಿಂಧೆ, ರಾಮಕೃಷ್ಣ ನಾಯಕ, ರಮೇಶ ರೋಸ್ಲಿ ಹಾಗೂ ಇತರರು ಉಪಸ್ಥಿತರಿದ್ದರು.