ಪತ್ರಿಕಾ ದಿನಾಚರಣೆ ಹಾಗು ಪತ್ರಕರ್ತರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ….!

ವಿಜಯಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಬೆಂಗಳೂರು, ವಿಜಯಪುರ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಹಾಗು ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅತೀ ಸುಂದರವಾಗಿ ನೆರವೇರಿತು….

ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಇಂದು 27/07/2025ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ನಿಮಿತ್ತ 2025ನೇ ಸಾಲಿನ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸುನೀಲ ಭಾಸ್ಕರ್, ಐಶ್ವರ್ಯ ತಾಳಿಕೋಟಿ, ಮಾರುತಿ ಹಿಪ್ಪರಗಿ, ಶ್ರೀಶೈಲ (ಸಚಿನ್) ಇಂಡಿ, ಮಹ್ಮದ್ ಅಶ್ಲಾಕ್ ಕರಜಗಿ, ಉದಯಕುಮಾರ ಆಕಾಶಿ, ತೌಫಿಕ್ ಕಲಾದಗಿ, ಭಾರ್ಗವಿ ದೇಶಪಾಂಡೆ, ಹಸನ್ ಮುಲ್ಲಾ, ಹಸನ್‌ ಡೊಂಗ್ರಿ ಕಮತಗಿ, ಗುಲಾಂಮಹದ್ ದಫೇದಾರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮತ್ತು ಜಿಲ್ಲಾ ಅಪರ ಪೊಲೀಸ ವರಿಷ್ಠಾಧಿಕಾರಿಗಳಿಗೆ,
ಹಿರಿಯ ಪತ್ರಕರ್ತ ಅನಿಲ್ ಹೊಸಮನಿ, ಮಲ್ಲಪ್ಪ ಬಿದರಿ ಅವರಿಗೆ ಸನ್ಮಾನ ಮಾಡಿ, ಮನೆ ಮನೆಗೆ ಪತ್ರಿಕಾ ವಿತರಕ ವಿನಯ ಕಡ್ಲಿಮಟ್ಟಿಗೆ ಸೈಕಲ್ ನೀಡಿ ಗೌರವಿಸಲಾಯಿತು..

ಈ ಕಾರ್ಯಕ್ರಮದಲ್ಲಿ ಮನಗೂಳಿಯ ಸೂಫಿ ಸಂತ ಡಾ.ಫೈರೋಜಿ ಇನಾಮದಾರ ಹಾಗು ಬಂಜಾರಾ ಸಮಾಜದ ಗೋಪಾಲ್ ಗುರೂಜಿ ಸಾನ್ನಿಧ್ಯ ವಹಿಸಿದ್ದರು,
ಅತಿಥಿಗಳಾಗಿ ದೇವರಹಿಪ್ಪರಗಿ ಶಾಸಕ ಭೀಮನಗೌಡ (ರಾಜು)ಪಾಟೀಲ, ಯುವ ವಿಕಾಸ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಬಿಜ್ಜರಗಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಅಪರ ಜಿಲ್ಲಾಧಿಕಾರಿಯಾದ ಸೋಮಲಿಂಗ ಗೆನ್ನೂರು. ಮನಗೂಳಿ ಗ್ರಾಮ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಭೇದಿಸಿ, ಪ್ರಮುಖ ಪಾತ್ರ ವಹಿಸಿದ ದಕ್ಷ ಪೊಲೀಸ ಅಧಿಕಾರಿಯಾದ ಅಡಿಷನಲ್ ಎಸ್ಪಿ ರಾಮನಗೌಡ ಹಟ್ಟಿ .ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ, ಜಿಲ್ಲಾಧ್ಯಕ್ಷ ಯುಸೂಫ್ ನೇವಾರ ಸೇರಿ ಅನೇಕರು ಉಪಸ್ಥಿತರಿದ್ದರು…

ವರದಿ : ದೌಲಪ್ಪ ಮನಗೂಳಿ
ವಿಜಯಪುರ

error: Content is protected !!