ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಬೆಳಗಾವಿ ಜಿಲ್ಲೆಯ ಪದಾಧಿಕಾರಿಗಳ ಆಯ್ಕೆ

ಬೆಳಗಾವಿ ನಗರದ ಪ್ರವಾಸಿ ಮಂದಿರದ ಭ್ರಷ್ಟರ ವಿರುದ್ಧ ಸಿಡಿದೆದ್ದ ಪತ್ರಕರ್ತರು; ನಿಷ್ಠಾವಂತ ಪತ್ರಕರ್ತರ ಹಕ್ಕಿಗೆ ಧ್ವನಿ ಎತ್ತಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ನೀಡಿ ಸತ್ಕರಿಸಲಾಯಿತು. ಸಭೆಯ ಬಳಿಕ ಮಾತನಾಡಿದ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, “ಇತ್ತೀಚಿನ ದಿನಗಳಲ್ಲಿ ಧೈರ್ಯಶಾಲಿ ಮತ್ತು ನಿಷ್ಠಾವಂತ ಪತ್ರಕರ್ತರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಿ ಅವರನ್ನು ದಬ್ಬಾಳಿಕೆ ಮಾಡುವ ಕ್ರೂರ ಪ್ರಯತ್ನ ನಡೆಯುತ್ತಿದೆ. ಇದು ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ನೀಡಲಾಗುತ್ತಿರುವ ನೇರ ಧಕ್ಕೆ,” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉಪಸ್ಥಿತರಿದ್ದರು. ಪದಾಧಿಕಾರಿಗಳಾಗಿ:ಶ್ರೀಕಾಂತ ಚೌಗಲಾ – ಜಿಲ್ಲಾ ಗೌರವಾಧ್ಯಕ್ಷ ಗಂಗಾಧರ ಶಿರಗಾಂವಿ – ಜಿಲ್ಲಾ ಉಪಾಧ್ಯಕ ಸಂತೋಷ ಪಾಟೀಲ – ಹುಕ್ಕೇರಿ ಉಪಾಧ್ಯಕ್ಷರು ಶಿವರಾಜ ಕೋಳಿ – ಅಥಣಿ ತಾಲೂಕು ಸಂಘಟನಾ ಸದಸ್ಯ ಮೋಹನ ಕಾಂಬಳೆ – ರಾಯಬಾಗ ತಾಲೂಕು ಸಂಘಟನಾ ಸದಸ್ಯ
ಅಥಣಿ, ರಾಯಬಾಗ, ಗೋಕಾಕ್, ಚನ್ನಮ್ಮನ ಕಿತ್ತೂರು ಸೇರಿದಂತೆ ವಿವಿಧ ತಾಲೂಕುಗಳಿಂದ ಅಧ್ಯಕ್ಷರು, ಉಪಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.

ನೈತಿಕತೆ, ಧೈರ್ಯ ಮತ್ತು ಸಮಾಜಪರ ನಿಟ್ಟಿನಲ್ಲಿ ಕೆಲಸಮಾಡುವ ಪತ್ರಕರ್ತರಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಜವಾಬ್ದಾರಿ. ಮಾಧ್ಯಮವು ಸಮಾಜದ ಕಣ್ಣಾಗಿರುವುದರಿಂದ, ಆ ಕಣ್ಣನ್ನು ಕುಪ್ಪಳಿಸಬಾರದು – ಬದಲಿಗೆ ಅದರ ಮೂಲಕ ಸತ್ಯದ ಬೆಳಕು ಹರಡಲಿದೆ.

ವರದಿ ಸದಾನಂದ

error: Content is protected !!