ಚಿಂಚೋಳಿ : ತಾಲೂಕಿನ ಸಾಲೇಬೀರನಹಳ್ಳಿಯ ಪಾಂಡುರಂಗನ ಮಂದಿರ ಆವರಣದಲ್ಲಿ ಶ್ರಾವಣ ಏಕಾದಶಿ ಪ್ರಯುಕ್ತ ವೀರ ಮಾರುತಿ ನಾಟ್ಯ ಸಂಘ ಸುದೀಕರ ಕಲಾ ಬಳಗದ ವತಿಯಿಂದ ಕಾರ್ಯಕ್ರಮ ಮಾಡಲಾಯಿತು.ಪತ್ರಕರ್ತ ಜಗನ್ನಾಥ ಶೇರಿಕಾರ ಮಾತನಾಡಿ
ತಂದೆತಾಯಿ ಎಂದರೆ ಭಾರ ಎನ್ನುವ ಇಂದಿನ ದಿನಗಳಲ್ಲಿ ಸಮಾಜವನ್ನು ಬಾಧಿಸುತ್ತಿರುವ ಸಂಸ್ಕಾರ ಕೊರತೆಯ ಮಧ್ಯೆ ಪಾಂಡುರಂಗ ವಿಠಲನ ಚರಿತ್ರೆ ತಂದೆತಾಯಿಯ ಸೇವೆಯ ಮಹತ್ವ ಸಾರುತ್ತದೆ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ ಐನೋಳ್ಳಿ ಮಾತನಾಡಿ
ತಂದೆತಾಯಿಯನ್ನು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಪುಂಡಲೀಕನಿಗೆ ಕಾಶಿ ಯಾತ್ರೆಯ ದಾರಿಯಲ್ಲಿ ಮನ ಪರಿವರ್ತನೆಯಾಗಿ ತಂದೆತಾಯಿಯ ಸೇವೆ ಮಾಡುತ್ತಿದ್ದಾಗ ಸಾಕ್ಷಾತ್ ವಿಷ್ಣು ದೇವನೇ ಬಂದರೂ ತಂದೆತಾಯಿಯ ಸೇವೆಯಲ್ಲಿಯೇ ತಲ್ಲೀನನಾಗಿರುವುದು ಆಗ ವಿಷ್ಣುದೇವ ಬಂದಿದ್ದಾನೆ, ಕಿಂಚಿತ್ತು ತಲೆ ಕೆಡಿಸಿಕೊಳ್ಳದೇ ಹೆತ್ತವರ ಸೇವೆ ಮಾಡುತ್ತಿರುವುದರ ಫಲವಾಗಿ ಪುಂಡಲೀಕನೇ ಪಾಂಡರಂಗ ವಿಠಲನಾದ ಎಂಬ ಕತೆ ಇಂದಿನ ಸಮಾಜಕ್ಕೆ ಪೂರಕವಾಗಿದೆ
ಮಥುರಾದ ಕೃಷ್ಣ ಉಡುಪಿಯಲ್ಲಿ ನೆಲೆಗೊಂಡಂತೆ ಪಂಡರಾಪುರದ ಪಾಂಡುರಂಗ ವಿಠಲ ಸಾಲೇಬೀರನಹಳ್ಳಿಯಲ್ಲಿ ನೆಲೆಗೊಂಡಿದ್ದಾರೆ. ಇದಕ್ಕೆ ಭಕ್ತರ ಕರ್ತೃತ್ವ ಶಕ್ತಿಯೇ ಕಾರಣ.
ಸಾಮಾನ್ಯವಾಗಿ ಭಜನೆಯಲ್ಲಿ ಎರಡು ಪ್ರಕಾರಗಳಿದ್ದು ಒಂದು ಹರಿ ಭಜನೆ ಇನ್ನೊಂದು ಶಿವ ಭಜನೆ. ಸಾಲೇಬೀರನಹಳ್ಳಿಯ ಪಾಂಡುರಂಗನ ಸನ್ನಿಧಿಯಲ್ಲಿ ಭಕ್ತರು ನಡೆಸುತ್ತಿರುವುದು ಶಿವ ಭಜನೆಯಾಗಿದೆ. ಉಡುಪಿಯ ಕೃಷ್ಣನನ್ನೇ ತನ್ನತ್ತ ತಿರುಗುವಂತೆ ಮಾಡಿದ ಕನಕದಾಸನ ಹಾಗೆಯೇ ಪಾಂಡುರಂಗನನ್ನು ಶಿವ ಭಜನೆಯ ಮೂಲಕ ಪ್ರಸನ್ನಗೊಳಿಸಲು ಸಾಧ್ಯ ಎಂದು ಹೇಳಿದರು.ಚಂದ್ರಶೇಖರ ಲಕಶೆಟ್ಟಿ ಸ್ವಾಗತಿಸಿದರು. ಜಗನ್ನಾಥರೆಡ್ಡಿ ಚಟ್ನಳ್ಳಿ ನಿರೂಪಿಸಿದರು. ಜಗಪ್ಪ ಮಾಡಗಿ ವಂದಿಸಿದರು. ಈ
ಕಾರ್ಯಕ್ರಮದಲ್ಲಿ ಪಾಂಡುರಂಗ ವಿಠಲ ಮಂದಿರದ ಸದ್ಭಕ್ತ ಮಂಡಳಿಯ ಮುಖಂಡರಾದ ಪ್ರಭುಲಿಂಗ ಲೇವಡಿ, ಏಕಾದಶಿ ದಾಸೋಹಿಗಳಾದ ಸಂಗಮನಾಥರೆಡ್ಡಿ ಶೇರಿಕಾರ, ಸುಧೀರ ಕಲಾ ಬಳಗದ ಚಂದ್ರಶೇಖರ ಲಕಶೆಟ್ಟಿ, ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ ಪೂಜಾರಿ ಪ್ರಭು ಕಂಬಾರ, ಗ್ರಾ.ಪಂ. ಸದಸ್ಯ ಗುರು ಪಾಟೀಲ, ಗ್ರಾ.ಪಂ. ಮಾಜಿ ಅಧ್ಯಕ್ಷ ತುಕಾರಾಮ ಬಲ್ಲೆಮ್ ಮುಖಂಡರಾದ ಚನ್ನಪ್ಪ ಪಾಟೀಲ, ಮಹಿಬೂಬ ಪಟೇಲ್, ಹಣಮಂತರಾವ್ ಪಾಟೀಲ, ಶ್ರೀನಿವಾಸರೆಡ್ಡಿ ಶೇರಿಕಾರ, ಶಂಕರ ಶಿವಪುರಿ, ಮಧುಕರರೆಡ್ಡಿ, ಗೋಪಾಲರೆಡ್ಡಿ, ಸಿದ್ದು ಧೇಶಪಾಂಡೆ, ಬಕ್ಕಪ್ಪ ಪವಾಡಶೆಟ್ಟಿ, ಜಗನ್ನಾಥರೆಡ್ಡಿ ತುಮಕುಂಟಾ, ಜಗಪ್ಪ ಮಾಡಗಿ, ಚಂದ್ರಶೇಖರ ಸೋಮಾ, ವೆಂಕಟರೆಡ್ಡಿ, ಕಂಟೆಪ್ಪ ತುಮಕುಂಟಾ, ಇತರರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್