ಹುಕ್ಕೇರಿ : ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಶಾಂತಿ ಸಭೆ ಈ ದಿನ ಜರಗಿತು.
ಸಭೆಯಲ್ಲಿ ಗೋಕಾಕ್ ವಿಭಾಗದ ಡಿ.ಎಸ್.ಪಿ. ಶ್ರೀ ರವಿ ಡಿ. ನಾಯಕ್, ಹುಕ್ಕೇರಿ ತಹಸಿಲ್ದಾರ ಶ್ರೀ ಬಲರಾಮ್ ಕಟ್ಟಿಮನಿ, ಹುಕ್ಕೇರಿ ಪೊಲೀಸ್ ಠಾಣೆಯ ಪಿ.ಐ. ಶ್ರೀ ಮಹಾಂತೇಶ್ ಬಸಾಪುರ್ ಅವರ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಸಮಾಜದ ಶಾಂತಿ-ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಹಬ್ಬಗಳನ್ನು ಶಿಸ್ತಿನಿಂದ, ಪರಸ್ಪರ ಸಹಕಾರದೊಂದಿಗೆ ಆಚರಿಸುವಂತೆ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಮಾಜಮುಖಿ ಗಣ್ಯರಾದ ಶ್ರೀ ಮಹಾವೀರ್ ನಿಲಜಗಿ, ಶ್ರೀ ಜಯಗೌಡ ಪಾಟೀಲ್, ಶ್ರೀ ಏ.ಕೆ ಪಾಟೀಲ್, ಶ್ರೀ ಗುರುರಾಜ ಕುಲಕರ್ಣಿ, ಶ್ರೀ ರಾಜು ಮುನ್ನೋಳಿ, ಶ್ರೀ ಸಲೀಮ್ ನದಾಫ್, ಶ್ರೀ ಸುನಿಲ್ ಬೈರಣ್ಣವರ್, ಶ್ರೀ ನೇಮಿನಾಥ್ ಖೆಮಲಾಪುರ, ಶ್ರೀ ಜ್ಯೋತಿಬಾ ದುಪ್ಪಟೆ ಸೇರಿದಂತೆ ಅಗ್ನಿಶಾಮಕ ದಳ, ಪುರಸಭೆ, ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳು, ಹಿಂದೂ-ಮುಸ್ಲಿಂ ಮುಖಂಡರು ಹಾಗೂ ವಿವಿಧ ಗಣೇಶ ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರು ಭಾಗವಹಿಸಿದ್ದರು.
ಸಭೆಯಲ್ಲಿ ಹಬ್ಬದ ಸಂದರ್ಭ ಶಾಂತಿ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದವು.
