ಈ ವಾರದಲ್ಲಿ 6,ಕೋಟಿ 2.80ಲಕ್ಷ ಮೌಲ್ಯದ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸ್

ಬೆಂಗಳೂರು :
ಸಂಪಿಗೆಹಳ್ಳಿ ಪೊಲೀಸ್ ಠಾಣೆ:-

ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ 30 ಗ್ರಾಂ. ಎಂ.ಡಿ.ಎಂ.ಎ ಮತ್ತು ಬಜಾಜ್ ಪಲ್ಸರ್ ವಾಹನ ಒಟ್ಟು ₹ 3.40 ಲಕ್ಷ ಮೌಲ್ಯ ಜಪ್ತಿ ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ವಿ.ಜೆ. ಸಜೀತ್ ಐ.ಪಿ.ಎಸ್.
ರವರ ಮಾರ್ಗದರ್ಶನದಲ್ಲಿ, ಸಂಪಿಗೆಹಳ್ಳಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಮುರುಗೇಂದ್ರಯ್ಯ ಎಂ. ರವರ ನೇತೃತ್ವದಲ್ಲಿ, ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಎಂ. ರವರ ಉಸ್ತುವಾರಿಯಲ್ಲಿ ಇತರೆ ಅಧಿಕಾರಿ ಸಿಬ್ಬಂದಿಯವರು ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಯಲಹಂಕ ಪೊಲೀಸ್ ಠಾಣೆ:-
ನಿಷೇಧಿತ ಮಾದಕ ವಸ್ತುವಾದ ಎಮ್.ಡಿ.ಎಮ್.ಎ ಮಾರಾಟ ಮಾಡುತ್ತಿದ್ದ ಹೊರರಾಜ್ಯದ
ಮೂವರು ವ್ಯಕ್ತಿಗಳ ಬಂಧನ.
117 ಗ್ರಾಂ ಎಂ.ಡಿ.ಎಂ.ಎ, ಒಂದು ಕಾರು, 3 ಮೊಬೈಲ್ ಪೋನ್‌ಗಳ ಹೀಗೆ ಒಟ್ಟು ₹15 ಲಕ್ಷ ಮೌಲ್ಯದ ವಸ್ತು ವಶ.
ವಶಕ್ಕೆ ಪಡೆದ ಮೂವರು ಆರೋಪಿತರು ಮೂಲತಃ ಕೇರಳ ದವರೆಂದು ತಿಳಿದುಬಂದಿದೆ.

ಕೇರಳದಿಂದ ಕಡಿಮೆ ಬೆಲೆಗೆ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಅನ್ನು ಖರೀದಿ ಮಾಡಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾರೆ.

ಕೋರಮಂಗಲ ಪೊಲೀಸ್ ಠಾಣೆಯ : ನಿಷೇದಿತ ಮಾದಕ ವಸ್ತು ಮಾರಾಟದಲ್ಲಿ ತೊಡಗಿ ತಲೆಮರಿಸಿಕೊಂಡಿದ್ದ ಓರ್ವ ವ್ಯಕ್ತಿಯ ಬಂಧನ. ವಿವಿಧ ಕಂಪನಿಯ 16ಲಕ್ಷ ಮೌಲ್ಯದ 48 ಮೊಬೈಲ್ ಪೋನ್‌ ಗಳ ವಶ

ಈ ಪ್ರಕರಣದಲ್ಲಿ ಓರ್ವ ವ್ಯಕ್ತಿಯು ತಲೆಮೆರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯವನ್ನು ಮುಂದುವರೆಸಲಾಗಿತ್ತು.
ತನಿಖೆಯನ್ನು ಮುಂದುವರೆಸಿ, ತಲೆಮರಿಸಿಕೊಂಡಿದ್ದ ವ್ಯಕ್ತಿಯನ್ನು ದಿನಾಂಕ:26/07/2025 ರಂದು ಗೋರಿಪಾಳ್ಯದಲ್ಲಿ ವಶಕ್ಕೆ ಪಡೆದು. ವಿಚಾರಣೆಗೊಳಪಡಿಸಿದಾಗ ಆರೋಪಿಯು ಇತರೆ ನಾಲ್ವರು ಆರೋಪಿಗಳೊಂದಿಗೆ ಸೇರಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾಗಿ ತಿಳಿಸಿದ್ದು, ಆತನ ಬಳಿಯಿದ್ದ ಹಲವಾರು ಮೊಬೈಲ್‌ಗಳ ಬಗ್ಗೆ ವಿಚಾರಿಸಿದಾಗ, ಮೊಬೈಲ್‌ಗಳು ಕಳುವಿಗೆ ಸಂಬಂಧಪಟ್ಟ ಮೊಬೈಲ್ ಪೋನ್‌ಗಳಾಗಿದ್ದು, ಈತನು ಆ 48 ಮೊಬೈಲ್ ಫೋನ್‌ಗಳನ್ನು ಇತರರಿಂದ ಸ್ವೀಕರಿಸಿದ್ದಾಗಿ ತಿಳಿಸಿ ತನ್ನೊಪ್ಪಿಕೊಂಡಿರುತ್ತಾನೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಅಗ್ನಿಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾತಿಮಾ, ಐ.ಪಿ.ಎಸ್. ರವರು ಮತ್ತು ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ವಾಸುದೇವ್ ವಿ.ಕೆ. ರವರುಗಳ ಮಾರ್ಗದರ್ಶನದಲ್ಲಿ ಕೋರಮಂಗಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಲೋಯಿಯಾ ರಾಮರೆಡ್ಡಿ. ಎಸ್ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆ :
ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಓರ್ವ ವ್ಯಕ್ತಿಯ ಬಂಧನ.

13.40ಲಕ್ಷ ಮೌಲ್ಯದ 22 ಕೆ.ಜಿ 180 ಗ್ರಾಂ ಗಾಂಜಾ ವಶ.

ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲು.

ಈ ಕಾರ್ಯಾಚರಣೆಯನ್ನು ಆಗ್ನೆಯ ವಿಭಾಗದ, ಉಪ ಪೊಲೀಸ್ ಆಯುಕ್ತರಾದ ಸಾರಾ ಪಾತೀಮಾ ರವರ ಮಾರ್ಗದರ್ಶನದಲ್ಲಿ ವಾಸುದೇವ್ ಸಹಾಯಕ ಪೊಲೀಸ್ ಆಯುಕ್ತರು, ಮಡಿವಾಳ ಉಪ ವಿಭಾಗ ರವರ ನೇತೃತ್ವದಲ್ಲಿ ಹೆಚ್.ಎಸ್.ಆರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ಪಿ.ಎಂ. ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಅವಲಹಳ್ಳಿ ಪೊಲೀಸ್ ಠಾಣಾ :
ನಿಷೇದಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕಿಸ್ಸೆಲ್ ನ್ನು ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ಡಗ್ ಪೆಡರ್‌ ಬಂಧನ.

ಸಿ.ಸಿ.ಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ, ದಿನಾಂಕ:14/08/2025 ರಂದು ಬಾತ್ಮೀಧಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಅವಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಮರಿಯಪ್ಪ ಲೇಔಟ್, ಮನೆಯೊಂದರಲ್ಲಿ ವಾಸವಾಗಿರುವ ವಿದೇಶಿ ಮೂಲದ ವ್ಯಕ್ತಿಯೋರ್ವನು ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್‌ನ್ನು ಆತನ ವಶದಲ್ಲಿಟ್ಟುಕೊಂಡು, ಆತನಗೆ ಪರಿಚಯವಿರುವ ಗಿರಾಕಿಗಳಿಗೆ ಮಾರಾಟ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆಂದು ತಿಳಿಸಿರುತ್ತಾರೆ.

ಈ ಮಾಹಿತಿಯನ್ನಾದರಿಸಿ, ಅದೇ ದಿನ ಸಂಜೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಅವಲಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಜಂಟಿಯಾಗಿ, ಬಾತ್ಮೀಧಾರರು ತಿಳಿಸಿದ ಸ್ಥಳಕ್ಕೆ ಭೇಟಿ ನೀಡಿ, ದಾಳಿ ಮಾಡಿ, ಓರ್ವ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವಿದೇಶಿ ಪ್ರಜೆಯನ್ನು ವಿಚಾರಣೆಗೊಳಪಡಿಸಿಲಾಗಿ, ಆತನು 2024ನೇ ಸಾಲಿನ ಅಕ್ಟೋಬರ್ ಮಾಹೆಯಲ್ಲಿ ಟೂರಿಸ್ಟ್ ವೀಸಾದಡಿಯಲ್ಲಿ ದೆಹಲಿಗೆ ಬಂದು ಬಟ್ಟೆ ವ್ಯಾಪಾರ ಮಾಡಿಕೊಂಡಿರುತ್ತಾನೆ. 2025ನೇ ಸಾಲಿನಲ್ಲಿ ಬೆಂಗಳೂರಿಗೆ ಬಂದು, ಅವಲಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ವಾಸವಾಗಿರುತ್ತಾನೆ. ಬಟ್ಟೆ ವ್ಯಾಪಾರದಲ್ಲಿ ಬರುತ್ತಿದ್ದ ಹಣವು ಆತನಿಗೆ ಸಾಲದೇ ಇದ್ದುದರಿಂದ, ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟೆಲ್ ನ್ನು ಮಾರಾಟ ಮಾಡಿಕೊಂಡು ಹೆಚ್ಚಿನ ಹಣ ಸಂಪಾದನೆ ಮಾಡುತ್ತಿರುವುದಲ್ಲದೇ, ಭಾರತ ಸರ್ಕಾರ ನೀಡಿರುವ ವೀಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತಿಳಿದು ಬಂದಿರುತ್ತದೆ.

ಆತನ ವಶದಲ್ಲಿದ್ದ 255 ಗ್ರಾಂ ನಿಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್ ಹಾಗೂ 01 ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇದರ ಮೌಲ್ಯ ₹40,00,000/- (ನಲವತ್ತು ಲಕ್ಷ ರೂಪಾಯಿ) ಆಗಿರುತ್ತದೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ :
ನಿಷೇಧಿತ ಮಾದಕವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್‌ ನ್ನು ಮಾರಾಟ ಮಾಡುತ್ತಿದ್ದ. ವಿದೇಶಿಯರಿಬ್ಬರ ಬಂಧನ.
ಅಪರಿಚಿತ ವಿದೇಶಿ ವ್ಯಕ್ತಿಯೋರ್ವನು ಎಲೆಕ್ಟ್ರಾನಿಕ್‌ ಸಿಟಿ 1ನೇ ಹಂತದ ಬೆಟ್ಟದಾಸನಪುರ, ಕೇರಳ ಮಸೀದಿ ರಸ್ತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್‌ನ ಖಾಲಿ ಜಾಗದಲ್ಲಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಮಾಹಿತಿಯನ್ನು ಆಧರಿಸಿ ಎನ್.ಡಿ.ಪಿ.ಎಸ್ ಕಾಯ್ದೆ ಆಡಿಯಲ್ಲಿ ಪ್ರಕರಣ ದಾಖಲಿಸಿ ದಾಳಿಮಾಡಿ, ಓರ್ವ ವಿದೇಶಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಆತನಿಗೆ ಪರಿಚಯವಿರುವ ಓರ್ವ ವಿದೇಶಿ ಮಹಿಳೆಯಿಂದ ಕಡಿಮೆ ಬೆಲೆಗೆ ನಿಷೇದಿತ ಮಾದಕವಸ್ತು ಎಂ.ಡಿ.ಎಂ.ಎ ಕ್ರಿಸ್ಟಲ್‌ನ್ನು ಖರೀದಿ ಮಾಡಿಕೊಂಡು ಬಂದು, ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿರುತ್ತಾನೆ. ಆತನ ವಶದಲ್ಲಿದ್ದ 180 ಗ್ರಾಂ ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್, 1 ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಂಡಿರುತ್ತಾರೆ

ಆರೋಪಿಯು ನೀಡಿದ ಮಾಹಿತಿ ಮೇರೆಗೆ ಅದೇ ದಿನ ಆರೋಪಿಗೆ ಎಂ.ಡಿ.ಎಂ.ಎ ಕ್ರಿಸ್ಟಲ್‌ನ್ನು ಪೂರೈಸುತ್ತಿದ್ದ ಓರ್ವ ವಿದೇಶಿ ಮಹಿಳೆಯನ್ನು ಠಾಣಾ ಸರಹದ್ದಿನ ದೊಡ್ಡತೋಗೂರು ಕ್ರಾಸ್ ಬಳಿ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿ, ಆಕೆಗೆ ಪರಿಚಯವಿರುವ ಮತ್ತೋರ್ವ ವಿದೇಶಿ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂ.ಡಿ.ಎಂ.ಎ ಕ್ರಿಸ್ಟಲ್‌ ನ್ನು ಖರೀದಿ ಮಾಡಿಕೊಂಡು, ಈ ಪ್ರಕರಣದ ಆರೋಪಿಗೆ ನೀಡುತ್ತಿದ್ದುದ್ದಾಗಿ ತಮ್ಮೊಪ್ಪಿಕೊಂಡಿರುತ್ತಾಳೆ. ಅವೇಳೆಯಾದ್ದರಿಂದ ಆರೋಪಿತೆಯನ್ನು ರಾಜ್ಯ ಮಹಿಳಾ ನಿಲಯದಲ್ಲಿ ಕಾಯ್ದಿರಿಸಲಾಗಿರುತ್ತದೆ.

ಆರೋಪಿಯ ವಾಸದ ಮನೆಯಲ್ಲಿ 456 ಗ್ರಾಂ ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್‌ನ್ನು ವಶಪಡಿಸಿಕೊಂಡಿರುತ್ತದೆ.

ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ ಒಟ್ಟು 2 ಕೆ.ಜಿ 150 ಗ್ರಾಂ. ನಿಷೇಧಿತ ಮಾದಕವಸ್ತುವಾದ ಎಂ.ಡಿ.ಎಂ.ಎ ಕ್ರಿಸ್ಟಲ್‌ನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಒಟ್ಟು ಮೌಲ್ಯ ₹ 5ಕೋಟಿ ರೂಪಾಯಿಗಳು ಆಗಿರುತ್ತದೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಎಮ್ ನಾರಾಯಣ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರವರಾದ ಕೆ.ಎಮ್ ಸತೀಶ ರವರ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನವೀನ್ ಜಿ.ಎಮ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿಚಂದ್ರ ಹಾಗೂ ದರ್ಶನ್ ಅಲಗೂರೆ ಹಾಗೂ ಅಪರಾಧ ವಿಭಾಗದ ಅಧಿಕಾರಿ/ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಸಿದ್ದಾಪುರ ಪೊಲೀಸ್ ಠಾಣಾ :
ಮನೆ ಕೆಲಸದಾಕೆಯಿಂದ ಡೈಮೆಂಡ್ ಮತ್ತು ಚಿನ್ನದ ಆಭರಣಗಳು ಕಳವು, ಓರ್ವ ಮಹಿಳೆ ಸೇರಿದಂತೆ ಇಬ್ಬರ ಬಂಧನ, ಡೈಮೆಂಡ್ ಮತ್ತು ಚಿನ್ನದ ಆಭರಣಗಳು, ಬೆಳ್ಳಿಯ ವಸ್ತು. ಮೊಬೈಲ್ ಫೋನ್ ಹಾಗೂ ಬೆಲೆ ಬಾಳುವ ವಾಚ್‌ಗಳ ಹೀಗೆ ಒಟ್ಟು ₹ 22ಲಕ್ಷ ರೂ ಮೌಲ್ಯದ ವಸ್ತು ವಶ,

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಜಯನಗರ 1ನೇ ಬ್ಲಾಕ್‌ನ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ವಾಸವಿರುವ ಪಿರಾದುದಾರರು, ದಿನಾಂಕ:31/07/2025 ರಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ವೃತ್ತಿಯಲ್ಲಿ ವೈದ್ಯರಾಗಿದ್ದು, ಮನೆಯ ಕೆಲಸಕ್ಕೆಂದು ಆಂಧ್ರಪ್ರದೇಶದ ಖಾಖನಾಡ್‌ನಿಂದ ಓರ್ವ ಮಹಿಳೆಯನ್ನು ಈಗ್ಗೆ ಒಂದೂವರೆ ವರ್ಷಗಳಿಂದ ಕೆಲಸಕ್ಕೆ ನೇಮಿಸಿಕೊಂಡಿರುತ್ತಾರೆ.

ಆಸ್ಪತ್ರೆಯ ಕೆಲಸ ಮುಗಿಸಿ ಮನೆಗೆ ಬಂದು, ವಿಶ್ರಾಂತಿ ಪಡೆದು, ನಂತರ ಸಂಜೆ ಎದ್ದು ನೋಡಿದರೆ ಮನೆಕೆಲಸದಾಕೆಯು ಕಾಣಿಸಿರುವುದಿಲ್ಲ. ಆಗ ಕೆಲಸದಾಕೆಗೆ ಕರೆ ಮಾಡಿದರೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಅನುಮಾನಗೊಂಡ ವೈದ್ಯರು ಮನೆಯಲ್ಲಿರುವ ಕಬೋರ್ಡ್ ನೋಡಿದರೆ , ಕಬೋರ್ಡ್‌ನಲ್ಲಿಟ್ಟಿದ್ದ ಡೈಮೆಂಡ್ ಮತ್ತು ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ವಸ್ತುಗಳು, ಮೊಬೈಲ್ ಫೋನ್‌ಗಳು, ಬೆಲೆಬಾಳುವ ವಾಚ್‌ಗಳು ಕಾಣೆಯಾಗಿದ್ದವು. ಇವುಗಳನ್ನು ಕೆಲಸದಾಕೆಯೆ ಕಳವು ಮಾಡಿಕೊಂಡು ಹೋಗಿರುತ್ತಾಳೆಂದು ತಿಳಿಸಿರುತ್ತಾರೆ. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು. ದಿನಾಂಕ:03/08/2025 ರಂದು ಪಿರ್ಯಾದುದಾರರ ಮನೆಯಲ್ಲಿ ಕೆಲಸಮಾಡುತ್ತಿದ್ದ ಕೆಲಸದಾಕೆಯನ್ನು ತೆಲಂಗಾಣ ರಾಜ್ಯದ ನ್ಯೂ ರಂಗಪು‌ರ್ ಗ್ರಾಮದಲ್ಲಿರುವ ಆಕೆಯ ತಂಗಿಯ ವಾಸದ ಮನೆಯಿಂದ ಪ್ರಕರಣದಲ್ಲಿ ಕಳುವಾಗಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳ ಸಮೇತ ವಶಕ್ಕೆ ಪಡೆಯಲಾಯಿತು. ವಶಕ್ಕೆ ಪಡೆದ ಕೆಲಸದಾಕೆಯನ್ನು ವಿಚಾರಣೆಗೊಳಪಡಿಸಿದಾಗ ಡೈಮೆಂಡ್ ರಿಂಗ್. ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ. ಹಾಗೂ ಕಳವು ಮಾಡಿದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತನ್ನ ವಶದಲ್ಲಿಯೇ ಇಟ್ಟುಕೊಂಡು ಡೈಮೆಂಡ್ ರಿಂಗ್‌ನ್ನು ಆಕೆಯ ತಂಗಿಯ ಗಂಡನ ಮುಖಾಂತರ ಮಾರಾಟ ಮಾಡಿಸಿರುವುದಾಗಿ ತಿಳಿಸಿರುತ್ತಾಳೆ. ದಿನಾಂಕ:04/08/2025 ರಂದು ಆರೋಪಿತೆಯ ತಂಗಿಯ ಗಂಡನನ್ನು ವಶಕ್ಕೆ ಪಡೆಯಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿ, ಆತನು ಡೈಮಂಡ್ ರಿಂಗ್‌ನ್ನು ತೆಲಂಗಾಣದ ರಂಗಪುರಂ ಗ್ರಾಮದ ಜ್ಯುವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ದಿನಾಂಕ:06/08/2025 ರಂದು 10.45 ಗ್ರಾಂ ಡೈಮೆಂಡ್ ರಿಂಗ್‌ನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಪ್ರಕರಣದ ಆರೋಪಿಗಳಿಬ್ಬರ ಬಂಧನದಿಂದ ಒಟ್ಟು 5.40 ಗ್ರಾಂ ಡೈಮೆಂಡ್ ರಿಂಗ್, 10.45 ಗ್ರಾಂ ಡೈಮೆಂಡ್ ಓಲೆ, 11.50 ಗ್ರಾಂ ಚಿನ್ನಾಭರಣ, 1 ಕೆ.ಜಿ 62 ಗ್ರಾಂ, ಬೆಳ್ಳಿಯ ವಸ್ತುಗಳು, 4 ಮೊಬೈಲ್ ಫೋನ್‌ಗಳು, 5 ಬೆಲೆಬಾಳುವ ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ ₹ 22,00,000/- (ಇಪ್ಪತ್ತೆರಡು ಲಕ್ಷ ರೂಪಾಯಿ) ಆಗಿರುತ್ತದೆ.

ಈ ಕಾರ್ಯಚರಣೆಯನ್ನು ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಲೋಕೇಶ್ ಭರಮಪ್ಪ ಜಗಲಾಸರ್‌ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಾರಾಯಣಸ್ವಾಮಿ.ವಿ ರವರ ನೇತೃತ್ವದಲ್ಲಿ, ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್.ಡಿ.ಪಟೇಲ್ ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

error: Content is protected !!