ಸಾಮಾಜಿಕ ಕಾರ್ಯಕರ್ತರ ನಂದು ಕುಮಾರ್ ಸೇವೆ ಗುರುತಿಸಿ ವೈಎಸ್ಎಸ್ ಇಂಡಿಯಾ ವತಿಯಿಂದ ‘ರಾಷ್ಟ್ರೀಯ ಗೌರವ ಪ್ರಶಸ್ತಿ 2025’ ಪುರಸ್ಕಾರ

ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ನ್ಯಾಯವನ್ನು ಸ್ಥಾಪಿಸುವುದು, ಹಿಂದುಳಿದ ಮತ್ತು ನಿರ್ಲಕ್ಷಿತ ವರ್ಗಗಳನ್ನು ಸಬಲೀಕರಣಗೊಳಿಸುವುದು ಮತ್ತು ಸಾಮಾಜಿಕ ಜಾಗೃತಿಯ ಮೂಲಕ ಸಕಾರಾತ್ಮಕ ಬದಲಾವಣೆಯನ್ನು ತರುವುದು ತನ್ನ ಜೀವನದ ಗುರಿಯಾಗಿಸಿ ಕೊಂಡು ಸೇವೆ ಮಾಡುತ್ತಿರುವ ನಂದು ಕುಮಾರ್ ರವರ ಸೇವೆ ಗುರುತಿಸಿ ವೈಎಸ್ಎಸ್ ಇಂಡಿಯಾ ‘ರಾಷ್ಟ್ರೀಯ ಗೌರವ ಪ್ರಶಸ್ತಿ 2025’ ನೀಡಿ ಗೌರವಿಸಿದೆ.

ಈ ಗೌರವವು ನನಗೆ ಮಾತ್ರವಲ್ಲದೆ, ಸಾಮಾಜಿಕ ಉನ್ನತಿ, ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಎಲ್ಲಾ ಸಾಮಾಜಿಕ ಕಾರ್ಯಕರ್ತರು, ಸಹೋದ್ಯೋಗಿಗಳು ಮತ್ತು ಹಿತೈಷಿಗಳಿಗೂ ಸ್ಫೂರ್ತಿಯಾಗಿದೆ.”

“ನನ್ನಂತಹ ಸರಳ ಸಮಾಜ ಸೇವಕನನ್ನು ರಾಷ್ಟ್ರಮಟ್ಟದಲ್ಲಿ ಗೌರವಿಸಿದ್ದಕ್ಕಾಗಿ ವೈಎಸ್ಎಸ್ ಇಂಡಿಯಾಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈ ಪ್ರಶಸ್ತಿಯು ಸಮಾಜ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಕಡೆಗೆ ನನ್ನ ಸಂಕಲ್ಪ ಮತ್ತು ಸಮರ್ಪಣೆಯನ್ನು ಮತ್ತಷ್ಟು ಬಲಪಡಿಸಿದೆ.”

“ಸಮಾಜದ ನಿಜವಾದ ಶಕ್ತಿ ಅದರ ಏಕತೆ ಮತ್ತು ಸಹಕಾರದಲ್ಲಿದೆ; ಜನರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಬದಲಾವಣೆ ಮತ್ತು ಪ್ರಗತಿಯನ್ನು ಸಾಧಿಸಬಹುದು ಎಂದು ನಂದೂಕುಮಾರ್ ರವರು ತಿಳಿಸಿದರು.

error: Content is protected !!