ಬೆಂಗಳೂರು : ನಗರ ಪಶ್ಚಿಮ ವಿಭಾಗದ ಚಾಮರಾಜಪೇಟೆ ಪೊಲೀಸರಿಂದ 2018 ರಿಂದ ರೌಡಿ/ಡ್ರಗ್ಸ್ ಪೆಡ್ಲರ್ ವ್ಯಕ್ತಿಯು ಆತನ ಸಹಚರನೊಂದಿಗೆ ಸೇರಿಕೊಂಡು. ಹೊರ ರಾಜ್ಯಗಳಿಂದ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದು, ಈ ಹಿಂದೆ ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿ, ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾದ ನಂತರ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡು, ಪಶ್ಚಿಮ ಮತ್ತು ಉತ್ತರ ವಿಭಾಗದ ವ್ಯಾಪ್ತಿಯಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ರೌಡಿ/ಡ್ರಗ್ಸ್ ಪೆಡ್ಲರ್ ವ್ಯಕ್ತಿಯಾದ ಸೈಯ್ಯದ್ ಮುಬಾರಕ್ @ ಮುಬಾರಕ್ ಮುಬ್ಬು ಬಿನ್ ಸಯ್ಯದ್ ಅಕ್ಟಲ್ ಪಾಷಾ @ ಅಕ್ಕಲ್, 31 ವರ್ಷ, ಈತನ ರೌಡಿ/ಡ್ರಗ್ಸ್ ಪೆಡ್ಲರ್ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಚಾಮರಾಜಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವರು ಪ್ರಸ್ತಾವನೆಯನ್ನು ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ ರವರಿಗೆ ಸಲ್ಲಿಸಿದ್ದರು, ಪ್ರಸ್ತಾವನೆಯನ್ನು ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ ರವರು ಅನುಮೋದಿಸಿ ಶಿಫಾರಸ್ಸು ಮಾಡಿದ್ದರು.
ಪಶ್ಚಿಮ ವಿಭಾಗದ ಅಧಿಕಾರಿಗಳ ಪ್ರಸ್ತಾವನೆಯನ್ನು ಪರಿಗಣಿಸಿ, ಪೊಲೀಸ್ ಆಯುಕ್ತರು, ರೌಡಿ/ಡ್ರಗ್ಸ್ ಪೆಡ್ಲರ್ ವ್ಯಕ್ತಿಯನ್ನು ಪ್ರತಿಬಂಧಕ ಬಂಧನದಲ್ಲಿಡಲು ದಿನಾಂಕ:29/08/2025 ರಂದು ಬಂಧನದ ಆದೇಶವನ್ನು ಹೊರಡಿಸಿರುತ್ತಾರೆ.
ಈ ಬಂಧನದ ಆದೇಶವನ್ನು ಚಾಮರಾಜಪೇಟೆ ಪೊಲೀಸರು ದಿನಾಂಕ:20/08/2025 ರಂದು ಬಂಧಿತ ವ್ಯಕ್ತಿಗೆ ಜಾರಿಗೊಳಿಸಿ. ಬಳ್ಳಾರಿ ನಗರ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು