ಬೆಳೆ ಪರಿಹಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ತಹಸೀಲ್ದಾರ್ ಅವರಿಗೆ ಮನವಿ ಪತ್ರ

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಸುಮಾರು 10 ಸಾವಿರ ಲಕ್ಷ ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು. 62 ಮನೆಗಳು ಬಿದ್ದಿವೆ ಅದರಲ್ಲಿ ಸುಮಾರು 16 ಸಾವಿರ ರೈತರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ರೈತ ಸಂಘಟನೆದವರು ಸ್ಥಳೀಯ ಶಾಸಕರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮತ್ತು ಹಿಂಗಾರು ಬಿತ್ತನೆಗೆ ಸ್ವಚ್ಛ ಮಾಡಬೇಕಾಗಿದೆ. ಹೊಲಗಳ ಬೀಳು ಬಿದ್ದಿರುವುದರಿಂದ ಕೂಡಲೇ ಇನ್ಶೂರೆನ್ಸ್ ವಿಮೆ ಹಣ ಕೊಡಬೇಕು ಮತ್ತು ಅತಿವೃಷ್ಟಿ ಅನಾವೃಷ್ಟಿಯ ಪರಿಹಾರ 25ಸಾವಿರ ನೀಡಬೇಕು. ರೈತನ ಕೈಗೆ ಬಂದ ತುತ್ತು, ಬಾಯಿಗೆ ಬರದಂತಾಗಿದೆ. ಸರ್ಕಾರಕ್ಕೆ ನಾನು ವಿನಂತಿ ಮಾಡುತ್ತೇನೆ ರೈತ ಕಷ್ಟದಲ್ಲಿದ್ದಾನೆ ಹಾಗಾಗಿ ಕೂಡಲೇ ಪರಿಹಾರವನ್ನು ನೀಡಿ ರೈತನ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಮತ್ತು ಹಿಂಗಾರು ಬಿತ್ತನೆಗೆ ರಸಗೊಬ್ಬರ, ಬಿತ್ತನೆ ಬೀಜ ಜೋಳ, ಕಡಲೆ, ಕುಸುಬಿ, ಸೂರ್ಯಕಾಂತಿ, ಗೋಧಿ, ಹೀಗೆ ಇನ್ನಿತರ ಬೀಜಗಳು ಫ್ರೀಯಾಗಿ ಅಂದರೆ ಪುಕ್ಕಟೆಯಾಗಿ ರೈತರಿಗೆ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಹೋದ ವರ್ಷ ನಿಂತಿರ್ತಕ್ಕಂತ 3ಲಕ್ಷ ಕೋಟಿ ಪರಿಹಾರ ಧನ ಕೂಡಲೇ ಕೊಡಬೇಕೆಂದು ಆಗ್ರಹಿಸುತ್ತೆ. ಎರಡು ಮೂರು ವರ್ಷಗಳಿಂದ ರೈತ ಕಷ್ಟದಲ್ಲಿದ್ದಾನೆ ಕೂಡಲೇ ರೈತನಿಗೆ ಸರ್ಕಾರ ರೈತನ ನೆರವಿಗೆ ಧಾವಿಸಿ ಪರಿಹಾರ ನೀಡಿ ರೈತನಿಗೆ ಪ್ರೋತ್ಸಾಹಿಸಬೇಕೆಂದು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕೇಳಿಕೊಳ್ಳುತ್ತೇವೆ.ವೀರಣ್ಣ ಗಂಗಾಣಿ ಅಧ್ಯಕ್ಷರು ತಾಲೂಕ ಘಟಕ, ಶಿವರಾಜ ಪಾಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಭೀಮರಾವ ಮಲಘಾಣ ಕಾಳಗಿ, ಜಗನ್ನಾಥ್ ಅಲ್ಬ,ಮಲ್ಲು ಪಾಟೀಲ್, ಶಿವಕುಮಾರ್ ಕೋಲ್ಡಿ, ಅಧ್ಯಕ್ಷರು ಸುಂದರ ಡಿ ಸಾಗರ್, ವೀರಣ್ಣ, ಚಂದ್ರಶೇಖರ್, ಗುರುನಾಥ ದೊಡ್ಮನಿ, ಶಿವಲಿಂಗ ಸುಲೇಪೇಟ, ಅನೇಕರು ಉಪಸ್ಥಿತರಿದ್ದರು.

ವರದಿ ರಮೇಶ್ ಎಸ್ ಕುಡಹಳ್ಳಿ

error: Content is protected !!