ರಸ್ತೆ ಅಗಲೀಕರಣ ಪ್ರಿಯಾಂಕಾ ಜಾರಕಿಹೊಳಿ ಯವರಿಂದ ಗುದ್ದಲಿ ಪೂಜೆ

ರಾಯಬಾಗ : ಪ್ರಿಯಾಂಕಾ ಜಾರಕಿಹೊಳಿ ಅವರಿಂದ ಚಿಕೋಡಿ ಲೋಕಸಭಾ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಕಡೆ ಗುದ್ದಲಿ ಪೂಜೆ ನೆರವೇರಿಸಿದರು ಸದಸ್ಯರಾದ ಕು ಪ್ರಿಯಾಂಕ ಜಾರಕಿಹೊಳಿ ಅವರು ರಾಯಭಾಗ ಮತ್ ಕ್ಷೇತ್ರದ ಬರುವ ಹಲವು ಗ್ರಾಮಗಳ ರಸ್ತೆಗಳು ಹಾಳಾಗಿರುವ ಕಾರಣ ಅಲ್ಲಿನ ಜನರಿಗೆ ಹೋಗಲು ಬರಲು ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ ರಸ್ತೆ ಕಾಮಗರಿಗಳಿಗೆ ಚಾಲನೆ ನೀಡಿದರು

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ರಾಯಬಾಗ ಪಟ್ಟಣದ ಶ್ರೀನಗರದಲ್ಲಿ ಇಂದು ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಅಂದಾಜು ₹9.00 ಕೋಟಿ ವೆಚ್ಚದಲ್ಲಿ ಕಂಕಣವಾಡಿ ರಸ್ತೆಯ ಕಿಮೀ 0.00 ರಿಂದ 3.75 ಹಾಗೂ 15.23 ರಿಂದ 16.88 ರವರೆಗೆ ಅಗಲೀಕರಣ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ, ಜೊತೆಗೆ ಅಂದಾಜು ₹3.00 ಕೋಟಿ ವೆಚ್ಚದಲ್ಲಿ ಕಂಕಣವಾಡಿ ರಸ್ತೆಯ ಕಿಮೀ 8.50 ರಿಂದ 10.31 ಹಾಗೂ 14.70 ರಿಂದ 15.31 ರವರೆಗೆ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ‌ ಸಂದರ್ಭದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ಶಾಸಕರಾದ ಶ್ರೀ ದುರ್ಯೋಧನ‌ ಐಹೊಳೆ, ಮುಖಂಡರಾದ ಶ್ರೀ ಮಹಾವೀರ ಮೊಹಿತೆ ಸೇರಿ ಗುರು ಹಿರಿಯರು ಕಾಂಗ್ರೆಸ್ ಕಾರ್ಯಕರ್ತರು ಮತ್ತೀತರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!