ಔರಾದ್ : ಎಕಂಬಾ ಗ್ರಾಮದ ಸೇಂಟ್ ಪೌಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಹಾಗೂ ವಾಹನ ಚಾಲಕ ನಿರ್ಲಕ್ಷö್ಯತನದಿಂದ ನಮ್ಮ ಮಗು ವಾಹನ ಚಕ್ರದಲ್ಲಿ ಸಿಲುಕಿ ಮೃತಪಟ್ಟಿದೆ ಎಂದು ಪಾಲಕರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಎದುರು ಕಣ್ಣೀರಿಟ್ಟರು. ಶನಿವಾರ ಏಕಂಬಾ ಗ್ರಾಮದ ಮೃತ ೬ ವರ್ಷದ ಬಾಲಕಿ ಕಾವೇರಿ ಅವರ ಮನೆಗೆ ತೆರಳಿ ಪಾಲಕರಿಗೆ ಸಾಂತ್ವನ ಹೇಳಿದರು. ಈ ವೇಳೆ ಶಾಲೆ ಫೀಸ್‌ಗೆ ಫೋನ್ ಮಾಡಿದವರೂ, ನಮ್ಮ ಮಗಳು ಪ್ರಾಣ ಬಿಟ್ಟರೂ ಫೋನ್ ಮಾಡಲಿಲ್ಲ.. ಮಗಳು ಪ್ರಾಣ ಬಿಡಲು ಶಾಲೆಯ ಆಡಳಿತ ಮಂಡಳಿ, ಚಾಲಕನ ಕುಡಿತವೇ ಕಾರಣ ಆಕ್ರಂದನ ತೋಡಿಕೊಂಡರು.
ಪಾಲಕರಾದ ಪೂಜಾ ಆಕಾಶ ಶಿಂಧೆ ಮಾತನಾಡಿ, ಶಾಲೆಯಿಂದ ಅವರೇ ಆಸ್ಪತ್ರೆಗೆ ಕೊಂಡೊಯ್ಯದಿದ್ದಾರೆ. ಮೃತಪಟ್ಟಿದೆಂದು ಬೇರೆಯವರು ಫೋನ್ ಮಾಡಿದ್ದಾರೆ. ನಮಗೆ ನ್ಯಾಯ ಕೊಡಿಸಿ, ನಾವು ಬಡವರು ಮಾತನಾಡುವ ಶಕ್ತಿಯಿಲ್ಲ. ನಮ್ಮ ಮಗಳಂತೆ ಮತ್ಯಾವ ಮಕ್ಕಳಿಗೂ ಇಂತಹ ಘಟನೆ ಮರಕಳಿಸದಂತೆ ಶಾಲೆಯ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು. ನಿತ್ಯ ಚಾಲಕÀ ಸರಾಯಿ ಕುಡಿತು ವಾಹನ ಚಾಲಾಯಿಸುತ್ತಿದ್ದ ಹಾಗೂ ವಾಹನದಲ್ಲಿ ಅತಿ ಹೆಚ್ಚು ಮಕ್ಕಳನ್ನು ಕೊಂಡೊಯ್ಯುತ್ತಿರುವ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ವಾಹನದಲ್ಲಿ ಚಾಲಕನ್ನೊಬ್ಬನಿಗೆ ಕಳುಹಿಸಿದ್ದಾರೆ. ಮಕ್ಕಳು ವಾಹನದಿಂದ ಇಳಿಯಲು ಸಮಸ್ಯೆ ಎದುರಿಸುತ್ತಿದ್ದರು. ವಾಹನ ಚಕ್ರಕ್ಕೆ ಬಾಲಕಿ ಸಿಲುಕಿ ಮೃತಪಡಲು ಆಡಳಿತ ಮಂಡಳಿ, ಚಾಲಕನ ನಿರ್ಲಕ್ಷö್ಯವೇ ಕಾರಣ ಎಂದು ಗೋಳು ತೋಡಿಕೊಂಡರು. ಸಂಬAಧಿಕರಾದ ಅಖಿಲ್ ಶಿಂಧೆ, ಪಿಂಕಾಬಾಯಿ, ವರ್ಷಾ, ರೇಖಾ, ಸುವರ್ಣಾ, ಲತಾ, ಲಕ್ಷಿö್ಮÃಬಾಯಿ, ಅನಿಲ, ಮಾಧವ್, ಪ್ರಫುಲ್ ಆಡಳಿತ ಮಂಡಳಿಯ ಮೇಲೆ ಕ್ರಮಕ್ಕೆ ಆಗ್ರಹಿಸಿದರು.
ನಂತರ ಸೇಂಟ್ ಪೌಲ್ ಪಬ್ಲಿಕ್ ಶಾಲೆಗೆ ಭೇಟಿ ಅಸಮಧಾನ ವ್ಯಕ್ತಪಡಿಸಿದರು. ಬಳಿಕ ಹೋಲಿ ಕ್ರೋಸ್ ಶಾಲೆಗೆ ಭೇಟಿ ನೀಡಿದ ಆಯೋಗದ ಸದಸ್ಯರು ಮಕ್ಕಳ ರಕ್ಷಣ ನೀತಿ ೨೦೧೬ರ ಅನುಷ್ಠಾನ ಆಗದಿರುವದನ್ನು ಮಾಹಿತಿ ಪಡೆದು ಇಂದೇ ತಾಲೂಕಿನ ಎಲ್ಲ ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲೆಗಳ ಮುಖ್ಯಗುರು ಆಡಳಿತ ಮಂಡಳಿಯ ತುರ್ತು ಸಭೆ ಕರೆದು ರಾಜ್ಯ ಮಕ್ಕಳ ರಕ್ಷಣಾ ನೀತಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಅನುಷ್ಠಾನವಾಗದೇ ಹೋದಲ್ಲಿ ನಿಮ್ಮನ್ನೆ ನೇರ ಹೊಣೆಗಾರ ಮಾಡಿ ಇಲಾಖೆಗೆ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಎರಡು ಶಾಲೆಗಳಿಗೆ ನೋಟಿಸ್ ಜಾರಿ ಮಾಡಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಬಿಇಒಗೆ ಎಚ್ಚರಿಕೆ ನೀಡಿದರು.
ಸುಪ್ರೀ ಕೋರ್ಟ್ನ ಆದೇಶ ಹಾಗೂ ಕರ್ನಾಟಕ ಮೋಟಾರು ವಾಹನಗಳು (ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ನಿಯಮಾವಳಿಗಳು) ಕಾಯ್ದೆ ೨೦೧೨ ತಿದ್ದಪಡಿ ೨೦೨೪ರನ್ವಯ ಆಡಳಿತ ಮಂಡಳಿಯವರು ಸಂಪೂರ್ಣ ನಿರ್ಲಕ್ಷö್ಯ ತೋರಿದ್ದಾರೆ. ಶಾಲೆಯ ಹೆಸರು, ಪ್ರಾಂಶುಪಾಲರ ದೂರವಾಣಿ ಸಂಖ್ಯೆ, ಜಿಪಿಎಸ್ ಅಳವಡಿಕೆ, ಸಿಸಿ ಟಿವಿ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಕನಿಷ್ಠ ಚಾಲನ ಪರವಾನಗಿ ಪಡೆದ ೫ ವರ್ಷದ ಅನುಭವ ಇರುವ ಚಾಲಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಇದು ಉಲ್ಲಂಘನೆಯಾಗಿದೆ. ಈ ಬಗ್ಗೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಎಲ್ಲ ಅಂಶಗಳು ಸೇರಿಸುವಂತೆ ಆರ್‌ಟಿಒ ಇನ್ಸ್ಸ್ಪೆಕ್ಟರ್ ಹುಸೇನ್ ಅವರಿಗೆ ಸೂಚಿಸಿದರು.
ನಿಯಮ ಉಲ್ಲಂಘನೆ ವಾಹನಗಳು ವಶಕ್ಕೆ
ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಇಲಾಖೆಯ ನಿಯಮ ಉಲ್ಲಂಘಿಸಿದ್ದು, ಹೋಲಿ ಕ್ರೋಸ್ ಹಾಗೂ ಸೇಂಟ್ ಪೌಲ್ ಶಾಲೆಯ ವಾಹನಗಳು ವಶಕ್ಕೆ ಪಡೆಯಲಾಗುತ್ತದೆ ಎಂದು ಆರ್‌ಟಿಒ ಇನ್ಸ್ಸ್ಪೆಕ್ಟರ್ ಹುಸೇನ್ ನದ್ಧಾಫ್ ಆಯೋಗಕ್ಕೆ ತಿಳಿಸಿದರು. ಇಲಾಖೆಯ ನಿಯಮಾನುಸಾರ ಶಾಲೆಯ ಆಡಳಿತ ಮಂಡಳಿ, ಚಾಲಕ ಹಾಗೂ ವಾಹನಗಳ ಮೇಲೆ ಕ್ರಮ ಜರುಗಿಸುವಂತೆ ಶಶಿಧರ್ ಕೋಸಂಬೆ ಸೂಚಿಸಿದರು.
ಸಭೆ ನಡೆಸುವಂತೆ ಬಿಇಒಗೆ ಸೂಚನೆ
ತಾಲೂಕಿನಲ್ಲಿರುವ ಎಲ್ಲ ಖಾಸಗಿ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರ ಹಾಗೂ ಚಾಲಕರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಆಯೋಗದ ಸದಸ್ಯ ಶಶಿಧರ ಕೋಸಂಬೆ ಬಿಇಒ ರಂಗೇಶ ಅವರಿಗೆ ಎಚ್ಚರಿಕೆ ನೀಡಿದ್ದರು. ತಾಲೂಕಿನಲ್ಲಿ ಅನೇಕ ಶಾಲಾ ವಾಹನಗಳು ನಿಯಮ ಬಾಹಿರವಾಗಿ ಸಂಚರಿಸುತ್ತಿವೆ. ಅಂತಹ ಸಂಸ್ಥೆಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವರದಿ : ರಾಚಯ್ಯ ಸ್ವಾಮಿ