ಕಲಬುರಗಿ ಜಿಲ್ಲಾ ಚಿಂಚೋಳಿ ತಾಲೂಕಿನ ಹೆದ್ದಾರಿ ಸಂಖ್ಯೆ 32 (ಸೇಡಂ ತಾಲೂಕಿನ ವ್ಯಪ್ತಿಯಲ್ಲಿ ಬರುವ ಸುಲೇಪೇಟ ನಿಂದ ಹೊಡೆಬೀರನಳ್ಳಿ ಕ್ರಾಸ್ ವರೆಗೆ ರಸ್ತೆಯಲ್ಲಿ ಗುಂಡಿ ಬಿದ್ದು ಹಾಳಾಗಿದೆ ಜಿಲ್ಲಾ ಮುಖ್ಯ ರಸ್ತೆ ಕೂಡಿದ್ದು ಸುಮಾರ ದಿನಗಳಿಂದ ಅನೇಕ ಜನರು ರಸ್ತೆ ಬಗ್ಗೆ ದೂರ ಕೊಟ್ಟರು ಯಾರು ಕೂಡ ಗಮನ ಹರಿಸುತಿಲ್ಲ ತೆಗ್ಗು ಗುಂಡಿಗಳು ರಸ್ತೆ ಯುದ್ಧಕ್ಕೂ ತೆಗ್ಗು ಗುಂಡಿಗಳು ಬಿದ್ದು ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ.ಓವರ ಲೋಡ್ ಹೊತ್ತು ಟಿಪ್ಪರ್ ಗಳು ಹಗಲಿರುಳು ಸಂಚರಿಸುತ್ತವೆ ಸಾಗುವ ಟಿಪ್ಪರ್ ಗಳಿಂದ ಗುಂಡಿಗಳು ಮನೆ ಮಾಡಿವೆ ವಾಹನ ಸವಾರರ ಸಂಚಕಾರ ತಂದೋಡ್ಡಿವೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ ವಹಿಸುತ್ತಿದ್ದು ಸಾರ್ವಜನಿಕರ ಶಾಪಕ್ಕೆ ಗುರಿಯಾಗುತ್ತಿದ್ದಾರೆ ಅದಕ್ಕಾಗಿ ಮೇಲಧಿಕಾರಿಗಳು ಗಂಭೀರವಾಗಿ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು dss ಕಾಳಗಿ ತಾಲೂಕಿನ ಸಂಚಾಲಕರಾದ ಬಸವರಾಜ್ ಬಡಗೇರಿ ಅವರು ಅಗ್ರಹಿಸಿದ್ದಾರೆ ಈ ಸಂಧರ್ಭದಲ್ಲಿ ಶಿವರಾಯ ಕುಡಹಳ್ಳಿ ನಾಗೇಶ್ ಬಡಗೇರಿ ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ