ಪುರಸಭೆ ವಾಣಿಜ್ಯ ಮಳಿಗೆ ನಂ. 6 ರಲ್ಲಿ ಇದ್ದಂತ ವಿದ್ಯುತ್ ಬಿಲ್ ಕ್ಯಾಶ್ ಕೌಂಟರ್ ಪ್ರಾರಂಭಿಸಬೇಕು ಎಂದು ಸಾರ್ವಜನಿಕರಿಂದ ಹೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿದರು

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಹೆಸ್ಕಾಂ ಇಲಾಖೆಯಿಂದ ಗ್ರಾಹಕರಿಗೆ ಅನುಕೂಲವಾಗಲೆಂದು ಪುರಸಭೆ ಮುಂದೆ ಇರುವ ವಾಣಿಜ್ಯ ಮಳಿಗೆಯ ಮೊದಲನೇ ಮಹಡಿಯ ಮಳಿಗೆ ನಂ.6 ರಲ್ಲಿ ಮೊದಲು ವಿದ್ಯುತ್ ಬಿಲ್ಲನ್ನು ತುಂಬಲು ಗ್ರಾಹಕರಿಗೆ ಅನುಕೂಲವಾಗಲೆಂದು ವಿದ್ಯುತ್ ಬಿಲ್ ಕ್ಯಾಶ್ ಕೌಂಟರ್ ಆರಂಭಿಸಿದ್ದು ಇರುತ್ತದೆ.

ಆದರೆ ಇವಾಗ ಸುಮಾರು 8 ತಿಂಗಳಿಂದ ಬಂದು ಇದ್ದ ಕಾರಣ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ.
ಗ್ರಾಹಕರಿಗೆ ಅನುಕೂಲವಾಗುವ ಸ್ಥಳದಲ್ಲಿ ಪುನಹ ಪುರಸಭೆ ಮುಂದೆ ಇರುವ ವಾಣಿಜ್ಯ ಮಳಿಗೆಯ ಮೊದಲನೇ ಮಹಡಿಯ ಮಳಿಗೆ ನಂ6 ರಲ್ಲಿ ವಿದ್ಯುತ್ ಬಿಲ್ ಕ್ಯಾಶ್ ಕೌಂಟರ್ ಪ್ರಾರಂಭಿಸಬೇಕು ಎಂದು ಸಾರ್ವಜನಿಕರಿಂದ ಆಗ್ರಹಿಸಿ ಕಾರ್ಯನಿರ್ವಾಹಕ ಅಭಿಯಂತರರು ಕಾರ್ಯ ಮತ್ತು ಪಾಲನಾ ವಿಭಾಗ ಹು.ವಿ.ಸ.ಕಂ.ನಿ., ರಾಮದುರ್ಗ ಇವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪ್ರಶಾಂತ್ ಅಂಗಡಿ, ಬಿ ಯು ಬೈರೆಕದಾರ, ಮಹೇಶ್ ದೊಡ್ಡಮನಿ, ಅಂಬರೀಶ್ ಬಟಕುರ್ಕಿ, ಸುರೇಶ್ ಕೆ ಇಳಗೇರ್, ಕೀರಣ ದೊಡಮನಿ, ಯಮನಪ್ಪ ಬಾರ್ಕಿ, ಜಾಫರಸಾಬ್ ಮುಲ್ಲಾ, , ಹಟೇಲಸಾಬ್ ಬೈರೆಕದಾರ, ಪಾಲ್ಗೊಂಡಿದ್ದರು.

ವರದಿ : Md ಸೋಹಿಲ ಭೈರಕದಾರ

error: Content is protected !!