ವಿಜಯಪುರ : ಜೀವನಾವಶ್ಯಕ ವಸ್ತುಗಳ ಮೇಲೆ ಜಿ.ಎಸ್.ಟಿ. ಕಡಿತಗೊಳಿಸುವ ಮೂಲಕ ಜನಸಾಮನ್ಯರ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಐತಿಹಾಸಿಕ ನಿರ್ಣಯ ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಶ್ರೀ ಸಿದ್ದೇಶ್ವರ ದೇವಾಲಯದ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ವೇಳೆ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಅನೇಕ ಧುರೀಣರು ಅಲ್ಲಿರುವ ವ್ಯಾಪಾರಸ್ಥರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ಆಲಿಸುವ ಜೊತೆಗೆ ಜಿ.ಎಸ್.ಟಿ ಇಳಿಕೆಯ ಕುರಿತು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಪ್ರಧಾನಿ ನರೇಂದ್ರ ಮೋದಿ ಒಬ್ಬ ನೈಜ ಜನನಾಯಕ, ದೇಶದ ಬಡವರು ಜೀವನಾವಶ್ಯಕ ವಸ್ತುಗಳನ್ನು ಖರೀದಿಸಿಲು ತೊಂದರೆ ಎದುರಿಸಬಾರದು ಎಂದು ಅವುಗಳ ಮೇಲೆ ಜಿ.ಎಸ್.ಟಿ. ಕಡಿತಗೊಳಿಸಿದ್ದು ದೇಶದ ಆರ್ಥಿಕ ಇತಿಹಾಸದಲ್ಲಿಯೇ ಚಾರಿತ್ರಿಕ ಕಾರ್ಯಕ್ರಮವಾಗಿದೆ, ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎನ್ನುವ ಅವರ ಧ್ಯೇಯದಂತೆ ಅನೇಕ ಯೋಜನೆಗಳನ್ನು ಮೋದಿಜಿ ಅನುಷ್ಠಾನಗೊಳಿಸಿದ್ದಾರೆ, ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಸಂಸದನಾಗಿ ಆಯ್ಕೆಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದರು. ಜೀವನಾವಶ್ಯಕ ವಸ್ತುಗಳ ಬೆಲೆ ಇಳಿಕೆ ನೇರವಾಗಿ ಬಡವರಿಗೆ ವರದಾನವಾಗಿದೆ, ಆ ಮೂಲಕ ಮೋದಿಜಿ ತಮ್ಮ ಕಳಕಳಿ ತೋರಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.
ಅನೇಕ ಐತಿಹಾಸಿಕ ಅಭಿವೃದ್ಧಿ ಪರ, ಜನಪರ ನಿರ್ಧಾರ ಕೈಗೊಂಡಿರುವ ಮೋದಿಜಿ ನಮ್ಮ ದೇಶ ಕಂಡ ಅಪೂರ್ವ ನಾಯಕ ಎಂದು ಬಣ್ಣಿಸಿದರು. ಮಾಜಿ ಸಚಿವ ಅಪ್ಪಸಾಬ್ ಪಟ್ಟಣಶೆಟ್ಟಿ
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಡಾ.ಸುರೇಶ ಬಿರಾದಾರ, ಉಮೇಶ ಕೋಳಕೂರ, ಉಮೇಶ ಕಾರಜೋಳ, ಸಂಜೀವ ಐಹೊಳಿ, ಸಂಜಯ ಪಾಟೀಲ ಕನಮಡಿ, ಮಳುಗೌಡ ಪಾಟೀಲ, ಸಂದೀಪ ಪಾಟೀಲ, ರಾಜಶೇಖರ ಮಗಿಮಠ, ಮಲ್ಲಿಕಾರ್ಜುನ ಜೋಗೂರ, ಅಪ್ಪು ಕುಂಬಾರ, ಎಸ್.ಎ. ಪಾಟೀಲ, ಬಸವರಾಜ ಹಳ್ಳಿ, ಎಸ್.ಎ. ಪಾಟೀಲ, ಸಿದ್ದಗೊಂಡ ಬಿರಾದಾರ, ಚಿನ್ನು ಚಿನಗುಂಡಿ, ರವೀಂದ್ರ ಲೋಣಿ, ಚಿದಾನಂದ ಚಲವಾದಿ, ಪಾಪುಸಿಂಗ್ ರಜಪೂತ, ಆನಂದ ಮುಚ್ಚಂಡಿ ಮೊದಲಾದವರು ಉಪಸ್ಥಿತರಿದ್ದರು.
ವರದಿ : ಅಜೀಜ ಪಠಾಣ.