ರೈತರಿಗೆ ಮಳೆ ಹಾನಿ ಬೆಳೆ ಪರಿಹಾರ ನೀಡಲು ಕರವೇ ಒತ್ತಾಯ

ಕರವೇ ತಾಲೂಕು ಅಧ್ಯಕ್ಷರಾದ ಬಸವರಾಜ್ ಚನ್ನೂರ್ ಹಾಗೂ ವಲಯ ಘಟಕದ ಕರವೇ ಅಧ್ಯಕ್ಷರಾದ ಹನುಮಗೌಡ ಮಾಲಿ ಪಾಟೀಲ್ ಅವರ ನೇತೃತ್ವದಲ್ಲಿ ಕರವೇ ವತಿಯಿಂದ ಹುಣಸಗಿ ತಹಶೀಲ್ದಾರ್ ಅವರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ, ಹಾನಿಯಾದ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಬೇಕು, ಹಾಗೂ ಮಳೆಯಿಂದ ಬಿದ್ದಿರುವ ಮನೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ಸಿದ್ದನಗೌಡ ಮಾಳನೂರ್, ರಾಜು ಅವರಾದಿ, ಬಸವರಾಜ್ ಕೊಂಡಗೋಳಿ, ರಾಜುಗೌಡ ಕುಪ್ಪಿ, ಬಂದೇನವಾಜ ಯಾತನೂರು, ರಾಮಲಿಂಗ ಗುಳಬಾಳ್, ರಮೇಶ್ ಜಿರಳಾ, ರಾಚೋಟಿ ಹಾವೇರಿ, ಪರಶುರಾಮ್ ಉ ಪ್ಪಲದಿನ್ನಿ, ಪರಶು ಬಿಜಾಪುರ್, ನಜೀರ್ ತಮ್ಮದಡ್ಡಿ, ಬಸ್ಸು ಮ್ಯಾಗೇರಿ, ಬಸವರಾಜ್ ಕೋಳೂರು , ಗುರಯ್ಯ ಸ್ವಾಮಿ, ಕುಮಾರ್ ಮಾಲಿಗೌಡ್ರು ಇದ್ದರು.

error: Content is protected !!