ಸ್ವಾಭಿಮಾನ ಫೇನಲ್ ಬಾರಿ ಭರ್ಜರಿ ಗೆಲವು ರಮೇಶ್ ಕತ್ತಿ ಮುಖದಲ್ಲಿ ಮಂದಹಾಸ

ಹುಕ್ಕೇರಿ: ಕತ್ತಿ”ಎಬಿ ಏಟಿಗೆ, ತತ್ತರಿಸಿದ ಜಾರಕಿಹೊಳಿ ಪೆನಲ್; ಹು ಇಸ್ ಡ್ಯಾಡಿ ನೌ ಎಂದ ನಿಖಿಲ್ ಕತ್ತಿ.!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 15 ನಿರ್ದೇಶಕರ ಆಯ್ಕೆಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ರಮೇಶ್ ಕತ್ತಿಯವರ ಪೆನಲ್ ಮುನ್ನಡೆ ಸಾಧಿಸಿದೆ.

ರಮೇಶ್ ಕತ್ತಿ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ರಾಜಕೀಯ ಯುದ್ಧದಲ್ಲಿ ರಮೇಶ್ ಕತ್ತಿ ಅವರು ಫೆನಲ್ ಮುನ್ನಡೆ ಸಾಧಿಸಿದೆ.

ಮಹಿಳಾ ಮೀಸಲು 2 ಸ್ಥಾನಗಳಲ್ಲಿ, ಹಿಂದುಳಿದ ಅ ವರ್ಗದ ಮೀಸಲು ಕ್ಷೇತ್ರ ಒಂದು,ಬ ವರ್ಗ ಒಂದು ಪರಿಶಿಷ್ಟ ಒಂದು ಸ್ಥಾನ, ಪರಿಶಿಷ್ಟ ಪಂಗಡ ಒಂದು ಸ್ಥಾನ ಗಳಲ್ಲಿ ರಮೇಶ ಕತ್ತಿ ಪೆನೆಲ್ ಮುನ್ನಡೆ ಸಾಧಿಸಿದೆ.

ಹುಕ್ಕೇರಿ ವಿದ್ಯುತ್‌ ಸಂಘಕ್ಕೆ ನಡೆದ ಚುನಾವಣೆಯಲ್ಲಿ ರಮೇಶ ಕತ್ತಿ ಬಣ ಎಲ್ಲಾ 15 ಸ್ಥಾನಗಳನ್ನೂ ಗೆದ್ದುಕೊಂಡಿದೆ. ತನ್ಮೂಲಕ ಜಾರಕಿಹೊಳಿ ಸಹೋದರರಿಗೆ ರಮೇಶ ಕತ್ತಿ ಮತ್ತು ಎ.ಬಿ.ಪಾಟೀಲ ಜೋಡಿ ಭರ್ಜರಿ ಏಟು ನೀಡಿದೆ.

ವರದಿ : ಸದಾನಂದ ಎಂ

error: Content is protected !!