ಜಿಟಿ ಜಿಟಿ ಮಳೆಗೆ ಈಜು ಕೊಳ ಆಗಿರುವ ಅಂಚೆಕಛೇರಿ ಆವರಣ ಅಸ್ವಚ್ಛತೆಯ ತಾಣ ವಾಗಿರುವ ಬಸವನ ನಾಡು

ಬಸವಕಲ್ಯಾಣ : ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣ ಬಸವಣ್ಣನ ಕರ್ಮಭೂಮಿ ಆಗಿರುವ ಈ ಪಟ್ಟಣ ಬೀದರ್ ಜಿಲ್ಲೆಯ ತಾಲೂಕು ಗಳಲ್ಲೇ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಬೀದರ್ ನಂತರ ಯಾವುದಾದರೂ ಮತ್ತೊಂದು ಜಿಲ್ಲೆ ಈ ಭಾಗಕ್ಕೆ ಆಗಬೇಕೆಂದರೆ ಆ ಸಾಮರ್ಥ್ಯ ಬಸವಕಲ್ಯಾಣ ದಲ್ಲಿದೆ ಅಂತಾರೆ AC ಕಚೇರಿಯು ಪಟ್ಟಣದಲ್ಲಿ ಇರುವುದರಿಂದ ಸುತ್ತಮುತ್ತಲಿನ ತಾಲೂಕಿನ ಜನರು ಕೂಡ ಈ ತಾಲೂಕಿಗೆ ಬರುತ್ತಾರೆ ಆದರೆ ಪಟ್ಟಣದಲ್ಲಿ ನೋಡಿದರೆ ಎಲ್ಲೆಂದರಲ್ಲಿ ಗಬ್ಬೆದ್ದು ನಾರುತ್ತಿರುವ ಕಾಲುವೆ ಗಳು ಇವೆ ಎಂದು ಸಾರ್ವಜನಿಕವಾಗಿ ದೂರು ಗಳು ಕೇಳಿ ಬಂದಿವೆ ಅದೇ ರೀತಿ ಪಟ್ಟಣದ ಅಂಚೆ ಕಛೇರಿಗೆ ವಯಸ್ಕರರು ಹಾಗೂ ಅನೇಕ ಜನರು ತಮ್ಮ ಕಾರ್ಯಗಳಿಗೆ ಬರುತ್ತಾರೆ ಪಕ್ಕದಲ್ಲೇ ಶಾಲೆ ಇದೆ ಶಾಲೆ ಮತ್ತು ಅಂಚೆ ಕಛೇರಿಯ ಆವರಣದಲ್ಲಿ ಜಿಟಿ ಜಿಟಿ ಮಳೆಗೆ ನೀರು ನಿಂತು ಈಜು ಕೊಳದಂತೆ ಆಗಿದೆ ಸಂಬಂಧ ಪಟ್ಟ ಪುರಸಭೆ ಅಧಿಕಾರಿಗಳು ಸ್ಥಳೀಯ ಶಾಸಕರು ಪಟ್ಟಣದ ಕಡೆಗೆ ಗಮನ ಹರಿಸಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕಾಗಿದೆ.