ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಟ್ಟಿಆಲೂರ ಗ್ರಾಮದಲ್ಲಿರುವ ಸರಕಾರಿ ಆಸ್ಪತ್ರೆಯ ನಿಜ ಸ್ಥಿತಿಯಿದು.
ಸಾರ್ವಜನಿಕರ ಹಿತ ದೃಷ್ಟಿಯಿಂದ, ಸರಕಾರ ಅಂದು ಆಸ್ಪತ್ರೆ ನಿರ್ಮಾಣ ಮಾಡಿತ್ತು.
ಆದರೆ ಇಂದು ಸಂಬಂಧಿಸಿದ ಬೇಜವಾಬ್ದಾರಿ ಅಧಿಕಾರಿಗಳ ನಿರ್ಲಕ್ಷತನದಿಂದ ಆಸ್ಪತ್ರೆ ಗಬ್ಬೆದ್ದು ನಾರುತ್ತಿದೆ.
ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರಾಮದ ಬಡ ರೋಗಿಗಳಿಗೆ ಚಿಕಿತ್ಸೆ ಒದಗಲಿ ಅಂತ ಹಟ್ಟಿ ಆಲೂರ ಗ್ರಾಮದಲ್ಲಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಿದೆ. ಆದರೆ ಸಾರಾಯಿ ಗುಟ್ಕಾ ಮತ್ತು ಮೂತ್ರ ವಿಸರ್ಜನೆ ಮಾಡಲು ಉಪಯೋಗಿಸುತ್ತಿರುವದು ನಾಚಿಕೆಗೇಡಿನ ಸಂಗತಿ ಆಗಿದೆ.
ಹೊಸಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯರಾದ ಕರೆಪ್ಪ ಗುಡ್ಡೆನ್ನವರ ಮಾತನಾಡಿ ಸಾರ್ವಜನಿಕ ಆಸ್ತಿ ತಮ್ಮ ಸಂರಕ್ಷಣೆಯ ದಿಕ್ಕಿಲ್ಲದೆ ಹಾಳಾಗುತ್ತಿದ್ದು ಆದಷ್ಟು ಬೇಗನೆ ಬಾಗಿಲು ಕಿಟಕಿಗಳನ್ನು ಮರು ರಿಪೇರಿ ಮಾಡಿಸಿ, ಸಾರ್ವಜನಿಕ ಆಸ್ತಿಯಾದ ಹಟ್ಟಿ ಆಲೂರ ಆಸ್ಪತ್ರೆಯನ್ನು ಸಂರಕ್ಷಿಸಲು ವಿನಂತಿಸಿದರು, ಅದರಂತೆ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳು ಆದಷ್ಟು ಬೇಗನೆ ಸರಿಪಡಿಸಿ ಸಂರಕ್ಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ
ಇದು ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಆಸ್ಪತ್ರೆ ಆಗಿದೆ.
ಸಾಕಷ್ಟು ಬಾರಿ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲು ಪಿಡಿಒ ಅವರ ಗಮನಕ್ಕೆ ತಂದರು ಕೂಡ ಯಾವ ಪ್ರಯೋಜನ ಆಗುತ್ತಿಲ್ಲ.
ಈ ಸುದ್ದಿಯನ್ನು ಗಮನಿಸಿದ ಮೇಲಾದರೂ
ಸರಕಾರ ಮತ್ತು ಸಂಬಂಧಿತ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಕಾಯ್ದು ನೋಡಬೇಕಾಗಿದೆ.
ವರದಿ : ಸದಾನಂದ್ ಎಂ ಎಚ್