ಪೊಲಿಯೋ ಲಸಿಕೆ ಅಭಿಯಾನ ನಡೆಯಬೇಕಿದ್ದ ಗಾಜಾದಲ್ಲಿ ಇಸ್ರೇಲ್ ದಾಳಿ- 48 ಜನರ ಸಾವು

ಗಾಜಾ : ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧವಿರಾಮ ಇರುವ ಎಂಟು ಗಂಟೆ ಅವಧಿಯಲ್ಲಿ 640,000 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲು ವಿಶ್ವ ಸಂಸ್ಥೆಯು ಸಿದ್ಧತೆ ನಡೆಸಿತ್ತು. ಆದರೆ ಇಂದು ಗಾಜಾ ಭಾಗದಲ್ಲಿ 48 ಜನರನ್ನು ಇಸ್ರೇಲ್ ಕೊಂದಿದೆ ಎಂದು ಪಾಲೆಸ್ತೀನ್ ಆರೋಗ್ಯ ವಿಭಾಗವು ಹೇಳಿದೆ. ಗಾಜಾದ ಉಪ ಆರೋಗ್ಯ ಸಚಿವ ಯೂಸೆಫ್ ಅಬು ಅಲ್-ರೀಶ್ ಮಾತನಾಡಿ, ಯುದ್ಧಕ್ಕೆ ವಿರಾಮ ನೀಡಿದರೆ ಮಾತ್ರ ಹೆಚ್ಚು ಮಕ್ಕಳನ್ನು ತಲುಪಿ ಪೊಲಿಯೋ ಲಸಿಕೆ ಹಾಕಲು ಸಾಧ್ಯ ಎಂದು ಹೇಳಿದ್ದಾರೆ.

 

ಆಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೊಲಿಯೋ ವೈರಸ್ ಎಲ್ಲಿ ಬೇಕಾದರೂ ತಲುಪಬಹುದು, ಹೀಗಾಗಿ ಕದನ ವಿರಾಮ ಘೋಷಿಸುವಂತೆ ಮಾಡಲು, ಅಂತರಾಷ್ಟ್ರೀಯ ಸಮುದಾಯಗಳು ಮುಂದಾಗಬೇಕು ಎಂದು ಹೇಳಿದ್ದಾರೆ. ನಾಸಿರ್ ಆಸ್ಪತ್ರೆ ವಾರ್ಡ್ ಗಳಲ್ಲಿ ಶನಿವಾರದಂದು ಮಾದರಿಯಾಗಿ ಕೆಲ ಮಕ್ಕಳಿಗೆ ವ್ಯಾಕ್ಸಿನ್ ಹಾಕಲಾಗಿದೆ. ಕಳೆದ ವಾರ ಪಾರ್ಶ್ವವಾಯುಗೆ ಮಗುವೊಂದು ತುತ್ತಾದ ಬಳಿಕ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಭಾಗದಲ್ಲಿ 25 ವರ್ಷಗಳಲ್ಲಿ ಮೊದಲ ಪ್ರಕರಣ ಇದಾಗಿದೆ. ಯುದ್ಧ ವಿರಾಮ ಇರುವ, ನಾಲ್ಕು ವಾರಗಳಲ್ಲಿ 90% ಮಕ್ಕಳಿಗೆ ಎರಡು ಬಾರಿ ಪೊಲಿಯೋ ಲಸಿಕೆ ಹಾಕಬೇಕು.

 

ಆದರೆ ಇದು ಸವಾಲಿನ ಕೆಲಸವಾಗಿದ್ದು ಕಳೆದ 11 ತಿಂಗಳ ಯುದ್ಧದಲ್ಲಿ ಗಾಜಾ ಬಹುತೇಕ ಪ್ರದೇಶ ನಾಶವಾಗಿದೆ. ಪೊಲಿಯೋ ಲಸಿಕಾ ಅಭಿಯಾನ ಆರಂಭಿಸಲು 2 ಸಾವಿರ ಸಿಬ್ಬಂದಿಗಳು ಸಜ್ಜಾಗಿದ್ದರು. ಆದರೆ 1 ನಿರಾಶ್ರಿತರ ಕೇಂದ್ರದ ಮೇಲೆಯೇ ದಾಳಿಯಾಗಿದೆ. ಇದರಲ್ಲಿ 19 ಜನರ ಸಾವಾಗಿದ್ದು, 9 ಮಂದಿ ಒಂದೇ ಕುಟುಂಬದವರು ಬಲಿಯಾಗಿದ್ದಾರೆ ಎನ್ನಲಾಗಿದೆ‌.

ವರದಿ /ಸದಾನಂದ ಎಂ ಎಚ್