458 ಗ್ರಾಂ ಚಿನ್ನಾಭರಣ ಮತ್ತು 3 ಕೆ.ಜಿ 868 ಗ್ರಾಂ ಬೆಳ್ಳಿಯ ವಸ್ತುಗಳ ವಶ, ಮೌಲ್ಯ ₹51.40 ಲಕ್ಷ.
ಜೆಪಿ ನಗರ ಪೊಲೀಸ್ ಠಾಣಾ ಸರಹದ್ದಿನ 2ನೇ ಹಂತದಲ್ಲಿ ವಾಸವಿರುವ ಪಿತ್ಯಾದುದಾರರು ದಿನಾಂಕ:11/10/2025 ರಂದು ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರಾದುದಾರರು ಸಂಬಂಧಿಕರ ಮನೆಯಲ್ಲಿ ಪೂಜೆಯಿದ್ದ ಕಾರಣ ಚಿನ್ನಾಭರಣಗಳನ್ನು ಧರಿಸುವ ಸಲುವಾಗಿ, ಕೊಠಡಿಯ ಬೀರುವನ್ನು ತೆರೆದು ನೋಡಲಾಗಿ, ಅದರಲ್ಲಿದ್ದ ಚಿನ್ನಾಭರಣಗಳು ಮತ್ತು ಬೆಳ್ಳಿಯ ವಸ್ತುಗಳು ಹಾಗೂ * 01 ಲಕ್ಷ ನಗದು ಇರುವುದಿಲ್ಲ. ಬೀರುವಿನ ಕೀಯನ್ನು ಬೀರುವಿನ ಮೇಲೆ ಇಟ್ಟಿದ್ದು, ಪಿರ್ಯಾದುದಾರರ ಮನೆಯಲ್ಲಿ ಈಗ್ಗೆ 10 ವರ್ಷಗಳಿಂದ ಕೆಲಸಮಾಡಿಕೊಂಡಿದ್ದ ಮಹಿಳೆಯು. ಕಳೆದ 20 ದಿನಗಳಿಂದ ಕೆಲಸಕ್ಕೆ ಬಂದಿರುವುದಿಲ್ಲ. ಬೀರುವಿನಲ್ಲಿದ್ದ ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಮನೆಕೆಲಸದಾಕೆಯೇ ಕಳವು ಮಾಡಿರಬೇಕೆಂದು ಅನುಮಾನ ವ್ಯಕ್ತಪಡಿಸಿ, ತಿಳಿಸಿರುತ್ತಾರೆ. ಈ ಕುರಿತು ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಸೇವಕಿಯಿಂದ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:11/10/2025 ರಂದು ಪ್ರಕರಣಕ್ಕೆ ಸಂಬಂಧಿಸಿದ ಮನೆಕೆಲಸದಾಕೆಯನ್ನು ಪುಟ್ಟೇನಹಳ್ಳಿಯ ಕಾಲೇಜ್ ವೊಂದರ ಬಳಿಯಿರುವ ಅಕ್ಕನ ವಾಸದ ಮನೆಯ ಬಳಿ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣಗಳು. ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಕಳವು ಮಾಡಿರುವುದಾಗಿ ತನ್ನೊಪ್ಪಿಕೊಂಡಿರುತ್ತಾಳೆ.
ದಿನಾಂಕ:11/10/2025 ರಂದು ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 08 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ತನಿಖೆಯನ್ನು ಮುಂದುವರೆಸಿ, ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿತೆಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಪ್ರಕರಣದಲ್ಲಿ ಕಳವು ಮಾಡಿದ ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳನ್ನು ಜಯನಗರದಲ್ಲಿರುವ 02 ಜ್ಯೂವೆಲರಿ ಅಂಗಡಿಗಳಲ್ಲಿ ಮತ್ತು ರಾಮೂರ್ತಿನಗರದಲ್ಲಿರುವ 01 ಜ್ಯೂವೆಲರಿ ಅಂಗಡಿಯಲ್ಲಿ ಅಡಮಾನ ಇಟ್ಟಿರುವುದಾಗಿ ತಿಳಿಸಿರುತ್ತಾಳೆ.
ಆರೋಪಿತೆಯು ನೀಡಿದ ಮಾಹಿತಿ ಮೇರೆಗೆ, ದಿನಾಂಕ:12/10/2025 ರಿಂದ ದಿನಾಂಕ:18/10/2025ರ ಅವಧಿಯಲ್ಲಿ ಒಟ್ಟು 458 ಗ್ರಾಂ ಚಿನ್ನಾಭರಣ, 3 ಕೆ.ಜಿ 868 ಗ್ರಾಂ ಬೆಳ್ಳಿಯ ವಸ್ತುಗಳನ್ನು ವರಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ 2 51,40,000/- (ಐವತ್ತೊಂದು ಲಕ್ಷದ ನಲವತ್ತು ಸಾವಿರ ರೂಪಾಯಿ).
ದಿನಾಂಕ:18/10/2025 ರಂದು ಆರೋಪಿತೆಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತೆಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಲೋಕೇಶ್.ಬಿ ಜಗಲಾಸರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪ ವಿಭಾಗದ ಎ.ಸಿ.ಪಿ ರವರಾದ ಶ್ರೀ.ನಾರಾಯಣಸ್ವಾಮಿ ರವರ ಉಸ್ತುವಾರಿಯಲಿ ಜೆಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ರವರಾದ ಶ್ರೀ.ಹರೀಶ್ ಎ. ಪಿ.ಎಸ್.ಐ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
