ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ
ರೋಟರಿ ಕ್ಲಬ್ ಬೀದರ್ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನೌಬಾದ್ ಇವರುಗಳು ಜಂಟಿಯಾಗಿ ದಿನಾಂಕ 31.08.2024 ರಂದು ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ ಒಂದನ್ನು ನೌಬಾದ್ ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ನಗರದ ನಮ್ಮ ಶಿಶುರಕ್ಷಾ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾಕ್ಟರ್ ಅಕ್ಷಯ್ ಜಗ್ಗತಾಪ್, ಮಕ್ಕಳ ತಜ್ಞರು ಈ ಕಾರ್ಯಕ್ರಮದಲ್ಲಿ ಹಾಜರಾದ ಎಲ್ಲಾ ತಾಯಂದಿರನ್ನು ಉದ್ದೇಶಿಸಿ ಸ್ತನ್ಯಪಾನದ Utsav ಕುರಿತು ತಿಳಿ ಹೇಳಿ, ತಾಯಿ ಮತ್ತು ಮಗುವಿನ ಮದ್ಯೆ ಅಕ್ಕರೆಯ ಬಾಂಧವ್ಯ ಬೆಳೆಯುವುದು, ಅಲ್ಲದೆ ಮಕ್ಕಳ ಉತ್ತಮ ಬೆಳವಣಿಗೆ ಆಗುವುದರೊಂದಿಗೆ, ರೋಗನಿರೋಧಕ ಶಕ್ತಿ ಅಭಿವೃದ್ಧಿಗೊಂಡು ಮಕ್ಕಳು ಆರೋಗ್ಯಕರ ಜೀವನವನ್ನು ನಡೆಸುತ್ತಾರೆ ಎಂದು ತಿಳಿಸಿದರು.
ಹಾಗೂ ಡಾಕ್ಟರ್ ತ್ರಿವೇಣಿ ಶಿರಶೆಟ್ಟಿ, ಮಕ್ಕಳ ತಜ್ಞರು ಮಾತನಾಡಿ ಡಬ್ಲ್ಯೂ ಎಚ್ ಸಂಸ್ಥೆಯು ಪ್ರತಿ ವರ್ಷ ಒಂದು ನಿಗದಿತ ಧ್ಯೇಯವನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ನಡೆಸುತ್ತದೆ, ಅದರಂತೆ ಪ್ರತಿವರ್ಷದ ಆಗಸ್ಟ್ ಒಂದನೇ ತಾರೀಖಿನಿಂದ 7ನೇ ತಾರೀಖಿನವರೆಗೆ ಜಾಗೃತಿ ಸಪ್ತಹವನ್ನು ಆಚರಿಸುತ್ತದೆ ಎಂದು ತಿಳಿಸಿರುತ್ತಾರೆ.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾಕ್ಟರ್ ನೇಹ ಫಾತಿಮಾ ಅವರು ಎಲ್ಲಾ ತಾಯಂದಿರನ್ನು ಉದ್ದೇಶಿಸಿ ಮಾತನಾಡಿ ಕನಿಷ್ಠಪಕ್ಷ ಆರು ತಿಂಗಳು ಹಾಗೂ ಗರಿಷ್ಠ ಎರಡು ವರ್ಷಗಳ ಕಾಲ ಮಗುವನ್ನು ಸ್ತನ್ಯಪಾನ ಮಾಡಿಸುವಂತೆ ಹೇಳಿದರು.
ಅಧ್ಯಕ್ಷ ಭಾಷಣವನ್ನು ರೋ.ಸೋಮಶೇಖರ್ ಪಾಟೀಲ್ ಅವರು ಮಾಡಿ, ನುರಿತ ವೈದ್ಯಾಧಿಕಾರಿಗಳು ಹೇಳಿದಂತೆ ಎಲ್ಲಾ ತಾಯಂದಿರು ನಡೆದುಕೊಳ್ಳುವಂತೆ ತಿಳಿಸಿದರು.
ರೊಟೇರಿಯನ್ ಡಾ. ಸುರೇಶ್ ಪಾಟೀಲ್ ಅವರು ನಿರೂಪಣೆ ಮಾಡಿದರು.
ರೋಟರಿ ಕ್ಲಬ್ ಕಾರ್ಯದರ್ಶಿಯಾದ ರೋಟೆರಿಯನ್ ಕೃಪಾಸಿಂದು ಪಾಟೀಲ್ ವಂದನಾರ್ಪಣೆ ಮಾಡಿದರು.
ಹಿರಿಯರಾದ ರೋ. ಹಾವಶೆಟ್ಟಿ ಪಾಟೀಲ, ರಂಜಿತ್ ಪಾಟೀಲ್, ರವಿಕಿರಣ್ ಪಬ್ಬ, ಚಂದ್ರಕಾಂತ್ ಕಾಡದಿ, ಅನಿಲ್ ಮಸೂದೆ, ಸಂಗಮೇಶ್ ಗದಗಿ ಹಾಜರಿದ್ದರು.