ಹುಕ್ಕೇರಿ : ಸಂವಿಧಾನದ ಬಗ್ಗೆ ಮುತ್ತು ಕಾಂಬಳೆ ಅವರು ಸಂವಿಧಾನ ಕರಡು ಸಮಿತಿಯು ಅಂತಿಮ ಕರಡು ತಯಾರಿಸಿ 1948 ನವೆಂಬರ್ 4ರಂದು ಮೊದಲ ಕರಡು ಪ್ರತಿಯನ್ನು ಓದಿತು. ಇದರ ಬಗ್ಗೆ ನವೆಂಬರ್.9.1948ರ ವರೆಗೆ ಐದು ದಿನಗಳು ಚರ್ಚಿ ನಡೆದು ಸಾಕಷ್ಟು ಬದಲಾವಣೆಗಳನ್ನು ಮಾಡಲಾಯಿತು. 1948 ನವೆಂಬರ್ 15ರಂದು ಎರಡನೇ ಬಾರಿ ಕರಡು ಪ್ರತಿಯನ್ನು ಓದಲಾಯಿತು. ಈ ಸಂದರ್ಭದಲ್ಲಿ 7,653 ತಿದ್ದುಪಡಿಗಳಿಗೆ ಮನವಿ ಮಾಡಲಾಯಿತು ಅವುಗಳಲ್ಲಿ 2,475 ತಿದ್ದುಪಡಿಗಳನ್ನು ಅಕ್ಟೋಬರ್ 17 1949 ರವರೆಗೆ ಚರ್ಚಿಸಿ ತಿದ್ದುಪಡಿ ಮಾಡಲಾಯಿತು 1949 ನಂಬರ್ 14ರಂದು ಬಿ ಆರ್ ಅಂಬೇಡ್ಕರ್ ಮೂರನೇ ಬಾರಿಗೆ ಓದಲಾಯಿತು.ನಂತರ ಕರಡು ಪ್ರತಿಯನ್ನು 1949 ನವೆಂಬರ್ 26ರಂದು ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಸಂವಿಧಾನ ರಚನಾ ಸಭೆಯ 299 ಸದಸ್ಯರಲ್ಲಿ 284 ಮಂದಿ ಹಾಜರಿದ್ದು ಸಹಿ ಹಾಕಿದರು.ಈ ಮೂಲಕ ಸಂವಿಧಾನ ರಚನಾ ಸಭೆಯು ಒಟ್ಟು 11 ಅಧಿವೇಶನಗಳಲ್ಲಿ ಎರಡು ವರ್ಷ 11 ತಿಂಗಳು 18 ದಿನಗಳಲ್ಲಿ 1935ರ ಭಾರತ ಸರ್ಕಾರ ಕಾಯ್ದೆಯನ್ನು ಆಧಾರವಾಗಿರಿಸಿಕೊಂಡು 60 ದೇಶಗಳ ಸಂವಿಧಾನದ ಉತ್ತಮ ಅಂಶಗಳನ್ನು ಎರವಲು ಪಡೆದುಕೊಂಡು ರಚಿಸಿದ ಸಂವಿಧಾನವು ನವೆಂಬರ್ 26 1949 ರಂದು ಸಂವಿಧಾನ ರಚನಾ ಸಭೆಯಿಂದ ಅಂಗೀಕಾರ ಪಡೆಯಿತು 1949 ನಂಬರ್ 26ರಂದು ಅಂಗೀಕರಿಸಲ್ಪಟ್ಟ ಮೂಲ ಸಂವಿಧಾನವು 395 ವಿಧಿಗಳನ್ನು ಎಂಟು ಅನುಸೂಚಿಗಳನ್ನು ಒಳಗೊಂಡ 22 ಭಾಗವನ್ನು ಹೊಂದಿದೆ. ಇಂಗ್ಲಿಷ್ ಭಾಷೆಯಲ್ಲಿ 1,17,369ಪದಗಳಿಂದ ಕೂಡಿತ್ತು. ಸಂವಿಧಾನ ಅಂಗೀಕರಿಸಿದ ಸಂದರ್ಭದಲ್ಲಿ ಪೌರತ್ವ ಚುನಾವಣೆ, ತಾತ್ಕಾಲಿಕ ಸಂಸತ್ತು, ಕಿರು ಶೀರ್ಷಿಕೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಸಂವಿಧಾನದ ವಿಧಿಗಳಾದ ಐದು 5,6,7,8,9,60,324,366, 367,379, 380, 388,391,392, 393,394 ವಿಧಿಗಳು ಜಾರಿಗೆ ಬಂದವು ಉಳಿದ ವಿಧಿಗಳು ಹಾಗೂ ಸಂವಿಧಾನವು ಸಂಪೂರ್ಣವಾಗಿ ಜನವರಿ 26 1950 ರಲ್ಲಿ ಜಾರಿಗೆ ಬಂತು ಸಂವಿಧಾನ ಅಂಗೀಕರಿಸಲ್ಪಟ್ಟ ದಿನದ ಪ್ರಯುಕ್ತ ಈ ದಿನ ಹುಕ್ಕೇರಿ ತಾಲೂಕಿನ ದಲಿತ ಮುಖಂಡರಾದ *ಶ್ರೀ ಬಸವರಾಜ್ ತಳವಾರ ಹಾಗೂ ಮುಖಂಡರು ಸೇರಿಕೊಂಡು ಕೋರ್ಟ್ ಸರ್ಕಲ್ ಬಳಿ ಇರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವ್ಯ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮುಖಾಂತರ ಸಂವಿಧಾನ ಅಂಗೀಕರಿಸಲ್ಪಟ್ಟ ನವೆಂಬರ್ 26 ದಿನವನ್ನು ವಿಜೃಂಭಣೆಯಿಂದ ಆಚರಿಸಿದರು ಈ ಸಂದರ್ಭದಲ್ಲಿ ದಲಿತ ಮುಖಂಡರಾದ ರಮೇಶ ತಳವಾರ್ ಚಂದು ಛಲವಾದಿ, ಶಂಕರ್ ತಿಪ್ಪನಾಯಕ, ಮುತ್ತು ಕಾಂಬಳೆ, ಶಿವ ಕಣಗಲಿ,ಶಿವು ಮಾಲಕರಿ, ಕಾಶಪ್ಪ ಹರಿಜನ್ ಅಜಿತ್ ಇಂಗಳಿ ಕೆಂಪಣ್ಣಾಮಾದರ ವಿಠ್ಠಲ್ ಬಂಗಾರಿ, ಕೆಂಪಣ್ಣ ಕೆಂಪರಾಯಗೋಳ, ಶಂಕರ ಶಮರಂತ್ ನಿಖಿಲ್ ಮೇಗೇರಿ ಹಾಗೂ ಸಮತಾ ಸೈನಿಕ ದಳದ ಮುಖಂಡರು ಹಾಗೂ ಪತ್ರಕರ್ತರು ಹಾಜರಿದ್ದರು.
ವರದಿ : ಸದಾನಂದ ಎಂ
