ಮುಖ್ಯತಿಥಿಗಳಾದ ಶ್ರೀ ನಂದಾದೀಪಬೋರಾಳ್ಕರ್ ರವರು ಮಾತನಾಡಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ರಚನೆಯಲ್ಲಿ ಶ್ರಮಿಸಿದ ಯೋಗದಾನ, ಸಂವಿಧಾನದ ಆಶಯ, ಸಂವಿಧಾನ ಬಂಧನಕ್ಕೆ ಒಳಗಾದ ಜನರನ್ನು ಸ್ವತಂತ್ರರನ್ನಾಗಿ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು. ಸಮಾಜದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ ಬಹುಮುಖ್ಯವಾಗಿದೆ ಎಂದುತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಶಿ ಚಂದ್ರಕಾಂತ ನಿರ್ಮಳೆ ಮಾತನಾಡಿ “ದೇಶದಲ್ಲಿರುವ ಎಲ್ಲ ಧರ್ಮಗಳಿಗಿಂತ, ಭಾರತದ ಏಕೈಕ ಶ್ರೇಷ್ಠ ಧರ್ಮಗ್ರಂಥ ಸಂವಿಧಾನವಿದೆ “ಎಂದು ತಿಳಿಸುತ್ತ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು. ಭೀಮರಾವ್ ಗಾಯಕವಾಡ ಸಂವಿಧಾನದ ಆಶಯ ಕುರಿತು ಗೀತೆಯನ್ನು ಹಾಡಿದರು. ಸ್ವಾಗತ ಪ್ರಾಸ್ತವಿಕ ನುಡಿಯನ್ನು ಮೇತ್ರೆ ಮುರಳಿಧರ್ ಸಶಿ ನುಡಿದರು. ಕಾರ್ಯಕ್ರಮದಲ್ಲಿ ಪಾಲಕರು, ಅತಿಥಿ ಶಿಕ್ಷಕರು, ಅಡುಗೆ ಸಿಬ್ಬಂದಿ, ಶಾಲಾ ಮಕ್ಕಳು ಭಾಗವಹಿದರು. ವಂದನಾರ್ಪಣೆಯನ್ನು ವಿದ್ಯಾರ್ಥಿ ಅಂಬಾದಾಸ್ ನೆರವೇರಿಸಿದರು.
ವರದಿ : ರಾಚಯ್ಯ ಸ್ವಾಮಿ
