ರಾಜ್ಯ ಸರಕಾರವು ಪ್ರತಿ ಟನ್ ಕಬ್ಬಿಗೆ ರೂ.3300 ನಿಗದಿಗೊಳಿಸಿದರೂ ಕೂಡ ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ಮಾತ್ರ ಪ್ರತಿ ತನ್ ಕಬ್ಬಿಗೆ ರೂ.2550 ರೈತರ ಖಾತೆಗೆ ಜಮಾ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ.
ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಸವನಗೌಡ ಯತ್ನಾಳ್ ಅವರೇ ಕಾರ್ಖಾನೆ ಪ್ರಾರಂಭ ಮಾಡುವಾಗ ಸರಕಾರ ನಿಗದಿ ಮಾಡಿದ ದರಕ್ಕಿಂತ ನೂರು ರೂಪಾಯಿ ಜಾಸ್ತಿ ಕೊಟ್ಟು ಕಬ್ಬು ಖರೀದಿಸುತ್ತೇನೆ ಎಂದು ಹೇಳಿದ್ದಿರಿ ಎಲ್ಲಿದೆ ನಿಮ್ಮ ಆ ಆವೇಶದ ಮಾತು, ಸಿದ್ಧಸಿರಿ ಕಾರ್ಖಾನೆ ಪ್ರಾರಂಭ ಮಾಡಲು ಹೋರಾಟ ಮಾಡಿದ ಪ್ರಾಯೋಜಿತ ನಕಲಿ ಹೋರಾಟಗಾರರೇ ಎಲ್ಲಿದ್ದೀರಿ? ರೈತರಿಗೆ ಅನ್ಯಾಯವಾಗುತ್ತಿದೆ ಇಂಥ ಸಮಯದಲ್ಲಿ ಹೋರಾಟ ಮಾಡದೆ ಯಾವ ಬಿಲದಲ್ಲಿ ಅಡಗಿ ಕುಳಿತ್ತಿದ್ದೀರಿ!ತಾಲೂಕಿನ ಶಾಸಕರು ಮಾಜಿ ಸಂಸದರು ಬಿಜೆಪಿ ಪಕ್ಷದ ನಾಯಕರು ಎಲ್ಲಿದ್ದೀರಿ ಎಥೆನಾಲ್ ಕಾರ್ಖಾನೆ ಪ್ರಾರಂಭ ಮಾಡಬೇಕು ಎಂದು ಹೋರಾಟ ಮಾಡುವಾಗ ಇದ್ದ ನಿಮ್ಮ ಪೌರುಷ ಈಗ ರೈತರಿಗೆ ಅನ್ಯಾಯವಾಗುವಾಗ ಕಾರ್ಖಾನೆ ವಿರುದ್ದ ಒಂದೇ ಒಂದು ಮಾತನಾಡದೆ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದೀರಿ ಅಂದರೆ ನಿಮ್ಮ ಹೋರಾಟ ರೈತ ಪರವಾಗಿರದೆ ಕಾರ್ಖಾನೆಯ ಯಜಮಾನರ ಪರವಾಗಿ ಇತ್ತು ಎಂದು ಒಪ್ಪಿಕೊಳ್ಳಿ..
ಯತ್ನಾಳ್ ಅವರೇ ನಮ್ಮ ಕಾರ್ಖಾನೆಯ ಮುಂದೆ ರಾಜಕೀಯ ನಾಯಕರ ಚಪ್ಪಲಿ ಬಿಡಲು ಕೊಡುವುದಿಲ್ಲ ಎಂದು ಹೇಳಿದ್ದಿರಿ,ನೀವು ಹೇಳಿದ ಮಾತಿನಂತೆ ನಡೆದು ಕೊಂಡರೆ ಯಾರು ನಿಮ್ಮ ಬಳಿ ಚಪ್ಪಲಿ ಬಿಡಲು ಬರಲ್ಲ ನೀವು ಮಾತಿಗೆ ತಪ್ಪಿದರೆ ಚಿಂಚೋಳಿಯ ಜನತೆ ನಿಮಗೆ ರಸ್ತೆಯ ಮೇಲೆ ತಂದು ನಿಲ್ಲಿಸುತ್ತಾರೆ ಎಚ್ಚರ ಎಂದು
ಪತ್ರಿಕೆ ಪ್ರಕಟಣೆ ಮುಖಾಂತರ
ಅನೀಲಕುಮಾರ ಜಮಾದಾರ
ಉಪಾಧ್ಯಕ್ಷರು, ಬಾಲ ಭವನ ಸುಸೈಟಿ, ಕರ್ನಾಟಕ ಸರಕಾರ ಬೆಂಗಳೂರು ತಿಳಿಸಿದ್ದಾರೆ
