ವೃಕ್ಷಥಾನ್ ಹೆರಿಟೇಜ್ ರನ್ ಸಂಭ್ರಮಕ್ಕೆ ಮುನ್ನುಡಿ ಬರೆದ ಬಸವನಾಡಿನ ಪುಟಾಣಿಗಳು
ವೃಕ್ಷಥಾನ್ ಹೆರಿಟೇಜ್ ರನ್ ಅಭಿಯಾನದ ಭಾಗವಾಗಿ, ಮುದ್ದು ಮಕ್ಕಳು ಕೂಡ ಪ್ರಕೃತಿ ಸಂರಕ್ಷಣೆಯ ಸಂಕಲ್ಪದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದೊಂದಿಗೆ ಇದೇ ಮೊದಲ ಬಾರಿಗೆ ವೃಕ್ಷ ಕಿಡ್ಸ್ ರನ್ ಆಯೋಜಿಸಲಾಗಿತ್ತು.
ಬೆಳಿಗ್ಗೆ 6 ಗಂಟೆಗೆ ವಿಜಯಪುರ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿವಿಧ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಮಕ್ಕಳು ಸಂಭ್ರಮದಿಂದ ಓಟದಲ್ಲಿ ಪಾಲ್ಗೊಂಡಿದ್ದರು. ಮುದ್ದು ಮಕ್ಕಳ ಓಟ ಮತ್ತು ಅದರ ನೋಟವೇ ಸಂತಸ ತುಂಬುವಂತಹದ್ದು!
ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳಿಗೂ ಇಂದು ಪ್ರತ್ಯೇಕ ಓಟವಿತ್ತು.
ಎಲ್ಲ ಮಕ್ಕಳು ಭಾನುವಾರ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ಹಬ್ಬದ ಸಂಭ್ರಮಕ್ಕೆ ಈ ದಿನವೇ ಮೆರಗು ತುಂಬಿದರು.
ಇಂದು ನಡೆದ 3 ಪ್ರತ್ಯೇಕ ವಿಭಾಗಗಳು:
• ನರ್ಸರಿ – LKG – UKG ಮತ್ತು 1ನೇ ತರಗತಿ
• 2 ಮತ್ತು 3ನೇ ತರಗತಿಗಳು
• 4 ಮತ್ತು 5ನೇ ತರಗತಿಗಳು
ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಇಂದಿನ ಓಟದಲ್ಲಿ ವಿಜೇತರಾದ ಮಕ್ಕಳಿಗೆ ನಾಳೆ 6 ನೇ ಡಿಸೆಂಬರ್ ಶನಿವಾರ ಬೆಳಿಗ್ಗೆ 8 ಗಂಟೆಗೆ ಬಹುಮಾನ ವಿತರಣೆ ಮಾಡಲಾಗುವುದು.
ವಿಜಯಪೂರ ಜಿಲ್ಲಾ ವರದಿಗಾರ ಅಜೀಜ ಪಠಾಣ.
