ಬೆಳಗಾವಿ : ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿ ಧರ್ಮನಾಥ ಭವನದಲ್ಲಿ ನಡೆದ ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಬೆಳಗಾವಿ,ಬೆಳಗಾವಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಹಾಗೂ ಇತರೆ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರ ಸೌಹಾರ್ದ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದರು.
ಡಿ.ಸಿ.ಸಿ. ಬ್ಯಾಂಕ್ ಮತ್ತು ವಿವಿಧ ಸಹಕಾರಿ ಸಂಘಗಳ ನಡುವಿನ ಸವಾಲುಗಳ ಕುರಿತು ಮಹತ್ವದ ಸಭೆ ನಡೆಯಿತು. ಪಿಕೆಪಿಎಸ್ ಪ್ರತಿನಿಧಿಗಳ ಸಲಹೆಗಳನ್ನು ಈ ಸಂದರ್ಭದಲ್ಲಿ ಪಡೆದರು. ಸಹಕಾರ ಕ್ಷೇತ್ರವನ್ನು ಬಲಪಡಿಸಲು ಮತ್ತು ರೈತರಿಗೆ ಸುಗಮವಾಗಿ ಸೌಲಭ್ಯಗಳನ್ನು ತಲುಪಿಸಲು ಪಾರದರ್ಶಕತೆ ಮತ್ತು ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸುವ ಅಗತ್ಯವಿದೆ. ಬೆಳಗಾವಿ ತಾಲೂಕಿನ ಪಿಕೆಪಿಎಸ್ ಪ್ರತಿನಿಧಿಯಾಗಿ ನನಗೆ ನೀಡಿದ ಈ ಜವಾಬ್ದಾರಿಯನ್ನು ಪೂರ್ಣ ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಲು ಅವರು ಬದ್ಧನಾಗಿದ್ದಾರೆ. ಸಹಕಾರ ಕ್ಷೇತ್ರದ ಉನ್ನತಿಗೆ ಅವರ ಪ್ರಯತ್ನ ನಿರಂತರ.
ಈ ಸಭೆಯಲ್ಲಿ ಅರಭಾವಿ ಶಾಸಕರಾದ ಶ್ರೀ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಶ್ರೀ ಅಣ್ಣಾಸಾಹೇಬ ಜೊಲ್ಲೆ, ವಿ.ಪ.ಸದಸ್ಯರು ಮತ್ತು ನಿರ್ದೇಶಕರಾದ ಶ್ರೀ ಚನ್ನರಾಜ ಹಟ್ಟಿಹೊಳಿ, ಬಿಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎನ್.ಜಿ.ಕಲಾವಂತ, ಪಿ.ಕೆ.ಪಿ.ಎಸ್.ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
