ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ 19 ಗ್ರಾಮಗಳ 39 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಇಂದು ಅಧಿಕೃತವಾಗಿ ಚಾಲನೆ ನೀಡಿದರು.
ರಾಜ್ಯ ಸರ್ಕಾರದ ₹100 ಕೋಟಿ ಅನುದಾನದಲ್ಲಿ, ಬಾವನ–ಸೌಂದತ್ತಿ ಗ್ರಾಮ ಸಮೀಪದ ಕೃಷ್ಣಾ ನದಿಯ ದಡದಲ್ಲಿ ನಿರ್ಮಿಸಲಾದ ಈ ಯೋಜನೆ, ಕೃಷಿ ಅಭಿವೃದ್ಧಿಗೆ, ಭೂಗರ್ಭ ಜಲಮಟ್ಟ ಏರಿಕೆಗೆ, ರೈತರ ಆರ್ಥಿಕ ಬಲವರ್ಧನೆಗೆ, ಗ್ರಾಮೀಣ ಜೀವನಮಟ್ಟ ಸುಧಾರಣೆಗೆ
ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಈ ಯೋಜನೆ ರಾಯಬಾಗ ತಾಲೂಕಿನ ಸಾವಿರಾರು ಎಕರೆ ಕೃಷಿಭೂಮಿಗೆ ಹೊಸ ಜೀವ ತುಂಬುವ ಐತಿಹಾಸಿಕ ಹೆಜ್ಜೆಯಾಗಿದ್ದು, ರಾಯಬಾಗ ತಾಲೂಕಿನ ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ಮಹತ್ತರ ಸಾಧನೆಯಾಗಿದೆ.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಮುಖಂಡರಾದ ಶ್ರೀ ಮಹಾವೀರ ಮೊಹಿತೆ, ಬುಡಾ ಅಧ್ಯಕ್ಷ ಶ್ರೀ ಲಕ್ಷ್ಮಣರಾವ್ ಚಿಂಗಳೆ ಸೇರಿ ಸ್ಥಳೀಯ ಮುಖಂಡರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಯೋಜನೆಯಡಿ ನೀರು ತುಂಬಿಸಿಕೊಳ್ಳುವ 39 ಕೆರೆಗಳ ಪಟ್ಟಿ:
1. ಯಡ್ರಾಂವ ಕೆರೆ
2. ಕೆಂಚಕರವಾಡಿ ಕೆರೆ
3. ನಂದಿಕುರಳಿ ಕೆರೆ
4. ಹುಲ್ಯಾಳ ಕೆರೆ
5. ರಾಜವಾಡೆ ಸರೋವರ
6. ಕೆಂಪಾಂಜಲಿ ಕೆರೆ
7. ಹುಬ್ಬರವಾಡಿ ಕೆರೆ–1
8. ಹುಬ್ಬರವಾಡಿ ಕೆರೆ–2
9. ಮೇಖಾಲಿ ಕೆರೆ ನಿವೇಶನ–1
10. ಮೇಖಾಲಿ ಕೆರೆ ನಿವೇಶನ–2
11. ಮೇಖಾಳಿ ಕೆರೆ ಸೈಟ್–3
12. ಬೂದಿಹಾಳ ಕೆರೆ ಸೈಟ್–1
13. ಬೂದಿಹಾಳ ಕೆರೆ ಸೈಟ್–2
14. ದೇವನಕಟ್ಟಿ ಕೆರೆ ಸೈಟ್–1
15. ದೇವನಕಟ್ಟಿ ಕೆರೆ ಸೈಟ್–2
16. ಗಿರಿನಾಯಕವಾಡಿ ಕೆರೆ ಸೈಟ್–1
17. ಗಿರಿನಾಯಕವಾಡಿ ಕೆರೆ ನಿವೇಶನ–2
18. ಮಾವಿನಹೊಂಡ ಕೆರೆ
19. ಜೋಡಟ್ಟಿ ಕೆರೆ
20. ಬೆಂಡವಾಡ ಕೆರೆ–1
21. ಬೆಂಡವಾಡ ಕೆರೆ–2
22. ಬೆಂಡವಾಡ ಕೆರೆ–3
23. ಮಂಟೂರು ಕೆರೆ
24. ಮೀರಾಪೂರಹಟ್ಟಿ ಕೆರೆ–1
25. ಮೀರಾಪೂರಹಟ್ಟಿ ಕೆರೆ–2
26. ಮಾಡಲಗಿ ಕೆರೆ–1
27. ಮಾಡಲಗಿ ಕೆರೆ–2
28. ಮಾಡಲಗಿ ಕೆರೆ–3
29. ಶಾಹೂಪಾರ್ಕ ಕೆರೆ–1
30. ಶಾಹೂಪಾರ್ಕ ಕೆರೆ–2
31. ಶಾಹೂಪಾರ್ಕ ಕೆರೆ–3
32. ಶಾಹೂಪಾರ್ಕ ಕೆರೆ–4
33. ಮಿರಗಸಾಲಿ ಕೆರೆ
34. ನಾಗರಾಳ ಕೆರೆ ಸೈಟ್–1
35. ನಾಗರಾಳ ಕೆರೆ ಸೈಟ್–2
36. ಬ್ಯಾಕೂಡ ಕೆರೆ
37. ಬಿರನಾಳ ಕೆರೆ
38. ಯಡ್ರಾಂವ ಕೆರೆ–2
39. ಬೂದಿಹಾಳ ಕೆರೆ–3
ವರದಿ : ಸದಾನಂದ ಎಂ
