ಕೊಲ್ಹಾರ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಎಲ್ಲಾ ಐದು ಪದಾಧಿಕಾರಿಗಳ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಕೊಲ್ಹಾರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅರುಣಕುಮಾರ ಔರಸಂಗ, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ ತುಪ್ಪದ, ಖಜಾಂಚಿಯಾಗಿ ಹನುಮಂತ ಛಬ್ಬಿ, ಉಪಾಧ್ಯಕ್ಷರಾಗಿ ಮಲ್ಲಪ್ಪ ಗಣಿ ಹಾಗೂ ಕಾರ್ಯದರ್ಶಿಯಾಗಿ ಸಿದ್ದಪ್ಪ ಗಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಾಲ್ಲೂಕು ಚುನಾವಣಾ ಉಸ್ತುವಾರಿಗಳಾದ ರಾಜ್ಯ ಕಾರ್ಯಕಾರಿ ಸದಸ್ಯ ಪ್ರಕಾಶ ಬೆಣ್ಣೂರ ಹಾಗೂ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅವರು ಘೋಷಣಾ ಪತ್ರ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶರಣು ,ಮಾದರ,ಮಶ್ಯಾಕ ಬಳಗಾರ, ಮಂಜುನಾಥ ಮಟ್ಯಾಳ,ಶ್ರೀಧರ ಏಳಗಂಟಿ,ಕಾಂತು ಹಡಪದ, ಪೃಥ್ವಿ ಬಾರಸ್ಕಳ, ಮಲ್ಲಿಕಾರ್ಜುನ ಕುಬಕಡ್ಡಿ ಹಾಜರಿದ್ದರು.
ವರದಿ : ಸದಾಷಿವ್ ಮೇಲಿನಮನಿ
