ಸಾರ್ವಜನಿಕ ರಜೆಗಳು ಹಬ್ಬ ಹರಿ ದಿನಗಳು ಭಾನುವಾರಗಳು ಹೀಗೆ ಯಾವುದನ್ನು ಪರಿಗಣಿಸದೆ ತಮ್ಮ ಕಾರ್ಯದಲ್ಲಿ ನಿರಂತರವಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಪೌರಕಾರ್ಮಿಕರು ನಗರವನ್ನು ಸ್ವಚ್ಛವಾಗಿರುವ ಕೆಲಸ ಮಾಡುತ್ತಾರೆ. ಯಾವುದೇ ಒಂದು ನಗರ ಅಥವಾ ವಾರ್ಡ್ ಸ್ವಚ್ಛವಾಗಿರಲು ಕಾರಣ ಇವರ ಸೇವೆಯಾಗಿದೆ. ಕೋವಿಡ್ ಸಮಯದಲ್ಲೂ ಸಹ ಪೌರಕಾರ್ಮಿಕರು ನಿರಂತರವಾಗಿ ಕೆಲಸಮಾಡಿದರು. ಸಂದಿಗ್ದ ಸ್ಥಿತಿಯಲ್ಲೂ ನೈರ್ಮಲೀಕರಣಕ್ಕೆ ತಮ್ಮನ್ನು ತೊಡಗಿಸಿ ಕೊಂಡವರು ಅಂತವರು ಸೇವೆ ಸಮಾಜಕ್ಕೆ ಅನನ್ಯ. ಆದ್ದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಅವರ ಸೇವೆಯನ್ನು ಪರಿಗಣಿಸಿ ಹಿರಿಯ ವಕೀಲರಾದ ಚಿತ್ರಗಾರ್ ರಾಜಕುಮಾರ್ ಅವರು ವಾರ್ಡ್ ನಂ.25 ಹಾಗೆ 24, 26ರ ಪೌರ ಕಾರ್ಮಿಕರಿಗೆ ಸೀರೆ ಶಾಲು ಹೂವಿನ ಹಾರದ ಜೊತೆಗೆ ಉಪಹಾರ ನೀಡಿ ಸನ್ಮಾನಿಸಿದರು. ಅದೇ ರೀತಿ ಪುರುಷ ಪೌರ ಕಾರ್ಮಿಕರಿಗೂ ಸಹ ಬಟ್ಟೆ ಶಾಲು ಹೂವಿನ ಹಾರ ಮತ್ತು ಉಪಹಾರ ನೀಡಿ ಸನ್ಮಾನಿಸಿದರು. 7 ಜನ ಮಹಿಳಾ ಕಾರ್ಮಿಕರು ಮತ್ತು 13 ಪುರುಷ ಕಾರ್ಮಿಕರು ಹಾಗೂ ಮಹಾನಗರ ಪಾಲಿಕೆಯ ಸದರಿ ವಾರ್ಡ್ನ ಅಧಿಕಾರಿಗಳಾದ ಬಡೇ ಸಾಬ್, ಸ್ಯಾನಿಟರಿ inspector ಅಕ್ತರ್, ಜನಾರ್ಧನ್, ವೆಂಕಟೇಶ್ , ಮಹಿಳಾ ಅಧಿಕಾರಿಗಳಾದ ಅರ್ಪಿತ, ಶಿಲ್ಪಾ ಮತ್ತು ಮುಂತಾದವರು ಭಾಗವಹಿಸಿದರು. ಈ ಸಂಧರ್ಭದಲ್ಲಿ ಹಿರಿಯ ವಕೀಲರಾದ ರಾಜಕುಮಾರ್ ಅವರ ಕುಟುಂಬದವರು ಮತ್ತು ಆತ್ಮೀಯರಾದ ಜಿ.ಅರವಿಂದ್ ಯಾದವ್, ಸ್ಯಾಮ್ ಸನ್ ಜುಲಂಗೆರಾ ಹಾಗೂ ರಾಮಲಿಂಗ ಅವರು ಪಾಲ್ಗೊಂಡಿದ್ದರು. ನಗರದ ಬಸವನಬಾವಿ ರಸ್ತೆಯ ಚಿತ್ರಗಾರ್ ರಾಜಕುಮಾರ್ ವಕೀಲರ ಮನೆಯ ಹತ್ತಿರ ಕಾರ್ಯಕ್ರಮ ನಡೆಯಿತು.
