ಹುಮನಾಬಾದ್ : ತಾಲ್ಲೂಕಿನ ದುಬಲಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜ ಭೋಜಗುಂಡಿ ಅವರು 11 ತಿಂಗಳಿಂದ ಇಲ್ಲಿವರೆಗೂ ಯಾವುದೇ ಸಾಮಾನ್ಯ ಸಭೆ ನಡೆಸದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಆರೋಪಿಸಿ, ಅವರ ಸದಸ್ಯತ್ವ ರದ್ದುಪಡಿಸಬೇಕು ಎಂದು ದುಬಲಗುಂಡಿ ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ್ ನಾತೆ ಅವರು ಮನವಿ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗಿರೀಶ್ ಬದೋಲೆಗೆ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಗ್ರಾಮ ಸ್ವರಾಜ ಮತ್ತು ಪಂಚಾಯತ ರಾಜ ಕಾಯ್ದೆ 1993 ರ ಪ್ರಕರಣ 43(ಎ)(1)(ii) ರ ಮತ್ತು 48(4) ಅಡಿಯಲ್ಲಿ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗರಾಜ ತಂದೆ ತುಕಾರಾಮ ಭೋಜಗೊಂಡ ರವನ್ನು ಸದಸ್ಯತ್ವದಿಂದ ಅನರ್ಹಗೊಳಿಸಲು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿ ರಘುನಾಥ ರವರ ವಿರುದ್ದ ಕ್ರಮಕೈಗೊಳ್ಳಲು ಮನವಿ ಸಲ್ಲಿಸಿದ್ದಾರೆ,
ಯಾವುದೇ ಸಭೆಯಲ್ಲಿ ಅನುಮೋದನೆ ಯಾಗದೇ ಕಿರಿಯಾ ಯೋಜನೆ ಮಾಡದೇ ಸರಕಾರದ ಹಣ ದುರುಪಯೋಗ ಪಡಿಸಿಕೊಂಡಿರುತ್ತಾರೆ ಇವರ ವಿರುದ್ಧ ಸಂಬಂಧ ಪಟ್ಟ ಪೋಲಿಸ ಠಾಣೆಗೆ ದೂರು ನೀಡಬೇಕೆಂದು ಆಗ್ರಹಿಸಿದರು,
ದುಬಲಗುಂಡಿ ಗ್ರಾಮ ಪಂಚಾಯತ ಅಧ್ಯಕ್ಷನು ಆದ ದಿನಾಂಕ: 05-08-2023 ರಂದ ಅಧ್ಯಕ್ಷನಾದ ನಂತರ 3 ಬಾರಿ ಸಾಮಾನ್ಯ ಸಭೆ ಕರೇದಿರುತ್ತಾರೆ ಇವರ ಅಧ್ಯಕ್ಷತೆ ಕೊನೆ ಈ ತುರ್ತುಸಭೆ ದಿನಾಂಕ: 01-01-2025 ರ ಕೊನೆಯ ಸಭೆಯಾಗಿರುತ್ತದೆ ಎಂದು ಅವರು ದೂರಿದ್ದಾರೆ,
ಹೀಗೆ ಅಧ್ಯಕ್ಷ ಹುದ್ದೆಯ ಪದಾವಧಿಯು ಪ್ರಾರಂಭದ ನಂತರ ನಡೇದ ಅನುಮೋದನೆ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆ ತುರ್ತು ಸಭೆ ಸರಿಯಾಗಿ ಸಮಯಕ್ಕೆ ಕರೇದಿಲ್ಲ, ಮೊದಲನೇ ಸಾಮಾನ್ಯ ಸಭೆ ನಂತರ ಸುಮಾರು ದಿನಗಳ ನಂತರ ಅಂದರೆ ಎರಡನೇ ಸಾಮಾನ್ಯ ಸಭೆ ಕರೇದಿದ್ದಾರೆ, ಎರಡನೇ ಸಾಮಾನ್ಯ ಸಭೆ ನಂತರ ನಡೆದ ನಂತರ ತುರ್ತು ಸಭೆಯನ್ನು ದಿನಾಂಕ:01-01-2025 ರಂದು ತುರ್ತು ಸಭೆ ಕರೆದಿರುತ್ತಾರೆ,
ಗ್ರಾಮ ಪಂಚಾಯತ ಅಧ್ಯಕ್ಷನು ಜನೇವರಿ 2025ನೇ ತಾರಿಖನ ತುರ್ತುಸಭೆ ಕರೇದ ನಂತರ, ಯಾವೊಂದು ಸಭೆ ಕೂಡಾ ಮಾಡಿರುವುದಿಲ್ಲ. ಸರಕಾರದ ಅನುದಾನ ಅಂದರೆ 15ನೇ ಹಣಕಾಸು ಯೋಜನೆಯಡಿಯ ಕಿರಿಯ ಯೋಜನೆ ತಯ್ಯಾರಿಸಲು ಕೂಡಾ ಸಭೆಗಳು ನಡೆಸಿರುವುದಿಲ್ಲ.
ಈಗಾಗಲೇ ಮಾಹಿತಿ ಹಕ್ಕು ಕಾಯ್ದೆಯಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ನೀಡಿದ ಪ್ರಕಾರ 01-01-2025 ರಂದು ಈ ಅಧ್ಯಕ್ಷರ ಕೊನೆಯ ತುರ್ತುಸಭೆ ಯಾಗಿರುತ್ತದೆ. ಆದ್ದರಿಂದ ಅನೇಕ ಬಾರಿ ಮೌಖಿಕವಾಗಿ ಸಭೆ ಕರೇಯಿರಿ ಅಂದಾಗ ಕೂಡಾ ಕರೇದಿರುವುದಿಲ್ಲ. ಕಾರಣ ಸರಕಾರದ ಹಣ ಅಂದರೆ 15ನೇ ಹಣಕಾಸು ಯೋಜನೆಯ ಕೆಲಸ ಮಾಡದೇ ನೀಯಮವನ್ನು ಗಾಳಿಗೆ ತೂರಿ ಮನಬಂದಂತೆ ಅಧ್ಯಕ್ಷನು ಸರಕಾರದ ಹಣವನ್ನು ದುರುಪಯೋಗ ಪಡಿಸಿ ಕೊಂಡಿರುತ್ತಾನೆ. ಹಾಗೂ ಯಾವುದೇ ಸಾಮಾನ್ಯ ಸಭೆ ಗಮನಕ್ಕೆ ತರದೇ ನಿಧಿ 2 ಜನರ ತೆರಿಗೆ ಹಣ ದುರುಪಯೋಗ ಪಡಿಸಿಕೊಂಡಿರುತ್ತಾನೆ. ಅದೇ ರೀತಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡದೇ ಸರಕಾರದ ಹಣವನ್ನು ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಸರಕಾರಕ್ಕೆ ಮೋಸಮಾಡಿರುತ್ತಾರೆ. ಅದರ ಜೊತೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕೂಡಾ ಶಾಮಿಲಾಗಿ ಆಕ್ರಮ ಮತ್ತು ಅವ್ಯವಾಹಾರದಲ್ಲಿ ತೊಡಗಿರುತ್ತಾರೆ. ಅವರ ವಿರುದ್ಧವು ಕೂಡಾ ತನಿಖೆ ಕೈಗೊಳ್ಳಬೇಕು ರವರ ಅವಧಿಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ರಘುನಾಥ ರವರ ವಿರುದ್ಧವು ತನಿಖೆ ಕೈಗೊಂಡು ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಈಗಾಗಲೇ ತಾವು ತನಿಖಾ ತಂಡವನ್ನು 14-15 hp 20 ಖರ್ಚುಗಳ ಕುರಿತು ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರಕ್ಕೆ ಹೊಣೆಗಾರರಾದ ಅಧಿಕಾರಿ ವಿರುದ್ಧ 1 ತೊ 4 ರಂತೆ ದೋಷರೋಪಣೆ ಪಟ್ಟಿ ಸಲ್ಲಿಸಿ ಶಿಸ್ತು ಕ್ರಮಕ್ಕಾಗಿ ಆದೇಶ ದಿನಾಂಕ: 16-06-2025 ರಂದು ಆದೇಶಿಸಿದಂತೆ ಇಲ್ಲಿಯವರೆಗೆ ಅವರ ವಿರುದ್ಧ ಶಿಸ್ತು ಕ್ರಮ ಆಗಿಲ್ಲ ಆದ್ದರಿಂದ ತಪಿತಸ್ಥರ ವಿರುದ್ಧ ಸಂಬಂಧಪಟ್ಟ ಪೋಲಿಸ್ ಠಾಣೆಗೆ ದೂರು ನೀಡಲು ಆದೇಶಿಸಬೇಕೆಂದು ಮನವಿ ಮಾಡಿದರು,
16-06-2025 ರಂದು ರಚಿಸಿದ ತನಿಖಾ ತಂಡದ ವರದಿಯ ಪ್ರಕಾರ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡು ಬಂದಿದ್ದು, ಹಣವನ್ನು ದುರುಪಯೋಗಪಡಿಸಿಕೊಂಡ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಅವರ ವಿರುದ್ಧ ಸರಕಾರದ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗರಾಜ ಭೋಜಗುಂಡಿ ವಿರುದ್ಧ ದೂರು ದಾಖಲಿಸಲು ಆದೇಶಿಸ ಬೇಕೆಂದು ಒಟ್ಟಾಯಿಸಿದರು,
ಗ್ರಾಂ.ಪಂ. ಅಧ್ಯಕ್ಷನು ಗ್ರಾಮ ಸ್ವರಾಜ ಮತ್ತು ಪಂಚಾಯತ ರಾಜ ಕಾಯ್ದೆ 1993 ರ ಪ್ರಕರಣ 52 ರ ಪ್ರಕಾರ ತಿಂಗಳಿಗೆ ಒಂದಾದ ಮೇಲೊಂದರಂತೆ ಕರೆಯಬೇಕಾಗಿದ್ದ ಸಾಮಾನ್ಯ ಸಭೆ ಕರೆಯಲು ಅಧ್ಯಕ್ಷರು ತನ್ನ ಕರ್ತವ್ಯ ನಿರ್ಲಕ್ಷವಹಿಸಿರುತ್ತಾರೆ ಮತ್ತು ಗ್ರಾಮ ಸ್ವರಾಜ ಮತ್ತು ಪಂಚಾಯತ ರಾಜ ಕಾಯ್ದೆ 1993 ರ ಪ್ರಕರಣ 43(ಎ)(1)(ii) ರ ಮತ್ತು 48(4) ತಿಂಗಳಿಗೆ ಒಂದಾದ ಮೇಲೊಂದರಂತೆ ನಡೆಯಬೇಕಾದ ಸಾಮಾನ್ಯ ಸಭೆಯು ಸುಮಾರು 11 ತಿಂಗಳು ಕಳೇದರು ಸಹ ಸಾಮಾನ್ಯ ಸಭೆ ಕರೇದಿರುವುದಿಲ್ಲ ಆದುದ್ದರಿಂದ ಗ್ರಾಂ. ಪಂ. ಅಧ್ಯಕ್ಷನ ಸದಸ್ಯತ್ವ ರದ್ದು ಪಡೆಸಿ ಅನರ್ಹಗೊಳಿಸಿ ಮತ್ತು ಪಂಚಾಯತ ರಾಜ ಕಾಯ್ದೆಯ 48(4) ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಹಿಂದೆಯು ದುಬಲಗುಂಡಿ ಗ್ರಾಮಪಂಚಾಯಿತಿ ಸದಸ್ಯರು ನ್ಯಾಯವಾದಿಗಳು ಆಗಿರುವ ವಿಜಯಕುಮಾರ್ ನಾತೆ ನರೇಗಾ ಹಾಗೂ 15ನೇ ಹಣಕಾಸು ನಲ್ಲಿ ಕೋಟ್ಯಾಂತರ ಹಗರಣ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾದ್ಯಂತ ಚರ್ಚೆಯಾಗಿದರು,
ಈ ಕುರಿತು ತನಿಖೆಯು ಕೂಡ ನಡೆಸಿ ನಾಲ್ಕು ಪಂಚಾಯತಿ ಅಧಿಕಾರಿಗಳಿಗೆ ತಲೆ ದಂಡ ವಿಧಿಸಲಾಗಿತ್ತು ಹಾಗೂ ಅಧ್ಯಕ್ಷರ ವಿರುದ್ಧ ಕೋಟ್ಯಂತರ ಭ್ರಷ್ಟಾಚಾರ ಆರೋಪಿಸಿ ಲೋಕಾಯುಕ್ತ ದೂರು ನೀಡಿರುತ್ತಾರೆ ಇನ್ನು ಲೋಕಾಯುಕ್ತ ತನಿಖೆ ಪ್ರಾರಂಭ ವಾಗಿರುವುದಿಲ್ಲ, ಮತ್ತೆ ಅಧ್ಯಕ್ಷರ ವಿರುದ್ಧ ಮತ್ತೊಂದು ದೂರು ನೀಡಿದ್ದು ಈ ಬಾರಿ ನೇರ ಅಧ್ಯಕ್ಷರ ಮೇಲೆ ಕ್ರಮ ವಾಗುತ್ತಾ? ಎನ್ನುವುದೇ ಸಾರ್ವಜನಿಕರಲ್ಲಿ ಚರ್ಚೆಗ್ರಾಸ ವಾಗಿದೆ.
