ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕ. ನೀ. ನಿ. ನಿ. ನಂ 1 ಕಾಲುವೆ ಉಪವಿಭಾಗ ಕಚೇರಿ ಕಂಪ್ಲಿ ಕಾಲುವೆಯ ತಡೆಗೋಡೆಯು ಕೆಲವು ಕಡೆ ಸಂಪೂರ್ಣವಾಗಿ ಕೊರತೆ ಉಂಟಾಗಿ ಪುರಸಭೆಯ ಕಸ ವಿಲೆವಾರಿ ಘಟಕಕ್ಕೆ ಮತ್ತು ಅಯ್ಯಪ್ಪ ಸ್ವಾಮಿ ಹಾಗೂ ಸಾಯಿಬಾಬಾ ಗುಡಿಯ ಪುರಸಭೆಯ ಉದ್ಯಾನವನದಲ್ಲಿ ಮಕ್ಕಳು ಆಟವಾಡುವ ಸಂದರ್ಭದಲ್ಲಿ ಮತ್ತು ಕಸ ವಿಲೇವಾರಿ ಘಟಕಕ್ಕೆ ಹೋಗಿ ಬರುವ ಟ್ರ್ಯಾಕ್ಟರ್ ಮ್ಯಾಕ್ಸಿ ಕ್ಯಾಬ್ ಗೂಡ್ಸ್ ವಾಹನಗಳು ತಿರುಗಾಡುತ್ತಿದ್ದು ಡಾಂಬರ್ ರಸ್ತೆಯು ಹಂಚಿನವರೆಗೂ ಕೊರೆತ ಉಂಟಾಗಿರುತ್ತದೆ.
ಇದನ್ನೆಲ್ಲ ಪಕ್ಕದಲ್ಲಿ ಖಾಸಗಿ ಶಾಲೆಯು ಇರುತ್ತದೆ.
ಶಾಲಾ ವಾಹನಗಳು ಸಹ ಸಂಚರಿಸುತ್ತಿವೆ. ಪ್ರತಿ ಬಾರಿ ವಿಶೇಷ ಆಯುಕ್ತರು ಪರಿಶೀಲನೆಗೆ ಬಂದು ಹೋಗುತ್ತಿದ್ದಾರೆ ಅವರನ್ನು ಒಮ್ಮೆ ಕಾಲ್ನಡಿಗೆಯಲ್ಲಿ ತಿರುಗಾಡಿಸಿದರೆ ಗೊತ್ತಾಗುತ್ತದೆ ಅದು ಅಲ್ಲದೆ ಪುರಸಭೆಯ ಮುಖ್ಯಧಿಕಾರಿಗಳು ಹಾಗೂ ತಹಸಿಲ್ದಾರರು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂದು ಕೈಕಟ್ಟಿ ಕುಳಿತಿದ್ದಾರೆ ಇದರ ಬಗ್ಗೆ ಗಮನ ಹರಿಸದೆ ಇರುವುದು ದುರ್ದೈವ ಮುಂದಿನ ಅನಾಹುತಕ್ಕೆ ಎಡೆ ಮಾಡಿಕೊಡದೆ ಸ್ಥಳ ಪರಿಶೀಲಿಸಿ ವಿಶೇಷ ಇಲ್ಲ ತುರ್ತು ಅನುದಾನದಲ್ಲಿ ದುರಸ್ತಿಗೊಳಿಸಬೇಕೆಂದು ಮನವಿ ಸಲ್ಲಿಸಿದರು,
ಇದನ್ನ ಸರಿಪಡಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆ ಯೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು,
ಟಿ ಎಚ್ ಎಂ ರಾಜಕುಮಾರ ಮತ್ತು ಮರಿಯಪ್ಪ ಇವರ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಿದರು.
