ಬೆಂಗಳೂರು : ನಗರ ಪಶ್ಚಿಮ ವಿಭಾಗದ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಕಲಾಸಿಪಾಳ್ಯ ಮುಖ್ಯರಸ್ತೆ ಯಲ್ಲಿರುವ ಸಿದ್ದಪ್ಪಣ್ಣ ಮಿಲ್ಟಿ ಹೋಟೆಲ್ ಮುಂದೆ ದಿನಾಂಕ:26-10-2024 ರಂದು ಮದ್ಯರಾತ್ರಿ 02-00 ಗಂಟೆಯಲ್ಲಿ ಪಿರ್ಯಾದುದಾರರು ತಮ್ಮ ಕಾರ್ ನಿಲ್ಲಿಸಿಕೊಂಡು ವಿಳಾಸ ಕೇಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಪಿರ್ಯಾದುದಾರರ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ, ಪಿರ್ಯಾದುದಾರರು ಮೊಬೈಲ್ ಫೋನ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತಾರೆ. ಆಗ ಆ ಅಪರಿಚಿತ ವ್ಯಕ್ತಿಯು ತನ್ನ ಬಳಿ ಇದ್ದ ಚಾಕುವಿನಿಂದ ಪಿರ್ಯಾದುದಾರರ ಬಲಗೈ, ಬಲ ಮುಂಗೈ ಹಾಗೂ ಬಲ ಭುಜಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ರಕ್ತಗಾಯಪಡಿಸಿ ಚಾಕು ಸಮೇತ ಪರಾರಿಯಾಗಿರುತ್ತಾನೆ.
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರವರು ಕಿರಣ್ ಕುಮಾರ್ ಎಸ್ ನೀಲಾಗಾರ್ ಹಾಗೂ ಇತರೆ ಅಧಿಕಾರಿ ಸಿಬ್ಬಂದಿಯವರು ಆರೋಪಿಯನ್ನು ಪತ್ತೆ ಮಾಡಿ ದಿನಾಂಕ:19-11-2024 ರಂದು ದಸ್ತಗಿರಿ ಮಾಡಿ, ಈತನಿಂದ ಕೃತ್ಯಕ್ಕೆ ಉಪಯೋಗಿಸದ್ದ ಚಾಕನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.
ಪ್ರಕರಣದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ದಿನಾಂಕ.03-01-2025 ರಂದು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ವಿಚಾರಣೆಯ ಸಮಯದಲ್ಲಿ ಆರೋಪಿಯ ವಿರುದ್ಧ ಆರೋಪ ದೃಡಪಟ್ಟ ಮೇರೆಗೆ ದಿನಾಂಕ.03-01-2026 ರಂದು ನ್ಯಾಯಾಲಯವು ಆರೋಪಿಗೆ 07 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿರುತ್ತದೆ.
ಈ ಪ್ರಕರಣದ ಸಾಕ್ಷಿದಾರರನ್ನು ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಳತ್ವ ವಹಿಸಿದ್ದ ಕೆ.ಎಂ ರಮೇಶ್ ಸಹಾಯಕ ಪೊಲೀಸ್ ಆಯುಕ್ತರು, ಚಿಕ್ಕಪೇಟೆ ಉಪ ವಿಭಾಗ, ಪ್ರಕರಣ ತನಿಖಾಧಿಕಾರಿಯಾದ ಕಿರಣ್ ಕುಮಾರ್ ಎಸ್ ನೀಲಾಗಾರ್ ಪೊಲೀಸ್ ಇನ್ಸ್‌ಪೆಕ್ಟರ್, ರಾಜೇಶ್ ವಿ. ಭಟ್, ಸರ್ಕಾರಿ ಅಭಿಯೋಜಕರು, ಮತ್ತು ಕಲಾಸಿಪಾಳ್ಯ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್
