ಗ್ಯಾರಂಟಿ ನ್ಯೂಜ್ ವತಿಯಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ ಶಾಲಾ ಅಂಗಳದಲ್ಲಿ ಮೂಡಿದ ಬಣ್ಣಬಣ್ಣದ ಚಿತ್ತಾರ

ಬಸವಕಲ್ಯಾಣ: ಗ್ಯಾರಂಟಿ ನ್ಯೂಸ್ ಚಾನೆಲ್ ಮತ್ತು ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆ ವತಿಯಿಂದ ಭಾನುವಾರ ನಗರದ ಬಸವೇಶ್ವರ ಸಿಬಿಎಸ್ ಸಿ ಶಾಲಾ ಆವರಣದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ರಂಗೋಲಿ ಹಬ್ಬ, ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಯುವತಿಯರು ಹಾಗೂ ಯುವಕರು ಒಳಗೊಂಡು ನೂರಾರು ಜನರು ಭಾಗವಹಿಸಿ ವಿಧವಿಧದ ರಂಗೋಲಿ ಬಿಡಿಸಿದ್ದರಿಂದ ಎಲ್ಲೆಡೆ ಬಣ್ಣಬಣ್ಣದ ಆಕರ್ಷಕ ಚಿತ್ತಾರ ಮೂಡಿತ್ತು.

ತ್ರಿಪುರಾಂತ ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್ ಸಸಿಗೆ ನೀರೆರೆದು ಉದ್ಘಾಟಿಸಿದರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು.
 
ಅಕ್ಕ ಪಡೆ ಕರ್ನಾಟಕದ ರಾಜ್ಯ ಸಂಯೋಜಕಿ ಶ್ರೀಮತಿ ಶೈನಿ ಪ್ರದೀಪ ಗುಂಟಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಮಾತನಾಡಿ, ಗ್ಯಾರಂಟಿ ನ್ಯೂಜ್ ಚಾನೆಲ್ ವತಿಯಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಿ ಸಂಕ್ರಾಂತಿ ಹಬ್ಬದ ರಂಗು ಹೆಚ್ಚಿಸಲಾಗಿದೆ. ಇದರಿಂದ ಮಹಿಳೆಯರಲ್ಲಿ ಧೈರ್ಯ ಮೂಡುತ್ತದೆ. ಅವರಲ್ಲಿನ ಸೂಪ್ತ ಪ್ರತಿಭೆ ಹೊರಬರಲು ವೇದಿಕೆ ಒದಗಿಸಿದಂತಾಗಿದೆ ಎಂದರು.

ನಗರಸಭೆ ಆಯುಕ್ತ ರಾಜೀವ ಬಣಕಾರ್, ಸಾವಿತ್ರಿ ಶರಣು ಸಲಗರ, ಸಿಡಿಪಿಒ ಗೌತಮ್ ಶಿಂಧೆ, ನಗರ ಠಾಣೆ ಸಿಪಿಐ ಅಲಿಸಾಬ್, ಸಾಹಿತಿ ಮಾಣಿಕ ಆರ್ ಭುರೆ, ಗೋಕುಳ ಹರಿಓ ಶಿಕ್ಷಣ ಸಂಸ್ಥೆ ಅಧ್ಯಕ್ಷ ದಿಲೀಪಗಿರಿ ಗೋಸಾಯಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸಂಜೀವಕುಮಾರ ಕಾಂಗೆ, ಅರ್ಜುನ ಕನಕ, ಬಸವೇಶ್ವರ ದೇವಸ್ಥಾನ ಸಮಿತಿಯ ಪ್ರಮುಖರಾದ, ಮಲ್ಲಿಕಾರ್ಜುನ ಚಿರಡೆ, ವೀರಣ್ಣ ಹಲಶೆಟ್ಟೆ, ವಿವೇಕಾನಂದ ಹೊದಲೂರೆ, ಶಿವರಾಜ ಶಾಶೆಟ್ಟೆ, ಯುವ ಮುಖಂಡರಾದ, ಪೋಪಟ ಜಮಾದಾರ, ಲೋಕೇಶ ಮೋಳಕೆರೆ ಉಪಸ್ಥಿತರಿದ್ದರು. ಗ್ಯಾರಂಟಿ ನ್ಯೂಜ್ ಚಾನೆಲ್ ಜಿಲ್ಲಾ ವರದಿಗಾರ ಶಿವು ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಶ್ವೀನ್ ಗೋರ್ಟೆ, ಬಸವರಾಜ ಖಂಡಾಳೆ ನಿರೂಪಿಸಿದರು.

ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಜಯಲಕ್ಷ್ಮಿ ಜಮಾದಾರ, ದ್ವಿತೀಯ ಸ್ಥಾನ ಪಡೆದ ಸಿದ್ಧಮ್ಮ ರಾಜೋಳೆ ಮತ್ತು ತೃತೀಯ ಸ್ಥಾನ ಪಡೆದ ಮಾಣಿಕೇಶ್ವರಿ ಅವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಮೊಳಕೆರೆ, ಪೋಪಟ್ ಜಮಾದಾರ, ಪತ್ರಕರ್ತ ಮಲ್ಲಿಕಾರ್ಜುನ್ ಬಂಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

error: Content is protected !!