ಹಿರಿಯ ಪತ್ರಕರ್ತ ನಾಗಶೆಟ್ಟಿ ಧರಂಪುರ ಇನ್ನಿಲ್ಲ

ಬೀದರ್: ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷರಾಗಿದ್ದ ನಾಗಶೆಟ್ಟಿ ಧರಂಪುರ ಹೃದಯಘಾತದಿಂದ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು.
ದಿವಂಗತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯೆಯು ತೆಲಂಗಾಣ ರಾಜ್ಯದ ಗಡಿ ಗ್ರಾಮ ರತ್ನಾಪುರದಲ್ಲಿ ಮಧ್ಯಾಹ್ನ 2 ಗಂಟೆಗೆ ಜರುಗಲಿದೆ.
ಕೆಯುಡಬ್ಲ್ಯುಜೆ ಸಂತಾಪ:- ಸುಮಾರು ಮೂರು ವರೆ ದಶಕಗಳಿಗೂ ಅಧಿಕ ಕಾಲ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಉತ್ತರ ಕರ್ನಾಟಕ, ಜನದನಿ ಪತ್ರಿಕೆಯಲ್ಲಿ,, ದುರ್ಗಾ ನ್ಯುಜ್, ಚಾನಲನಲ್ಲಿ ವರದಿಗಾರರಾಗಿ, ಕ್ರಾಂತಿ ಭೂಮ ವಾರ ಪತ್ರಿಕೆ, ಇತ್ತಿಚೀಗೆ ಶರಣ ಭೂಮಿ ಪತ್ರಿಕೆಯಲ್ಲಿ‌ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದರು. ದಿವಂಗತರು ಕೇವಲ ಪತ್ರಕರ್ತರಾಗಿರದೆ, ಸಾಹಿತಿಗಳು, ಕಲಾವಿದರು, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದರು. ಇವರ ಅಗಲಿಕೆಯಿಂದ ಇಡೀ ಬೀದರ್ ಪತ್ರಕರ್ತರ ಬಳಗ ಬಡವಾಗಿದೆ. ಓರ್ವ ಸಜ್ಜನ ಮಾಧ್ಯಮ ಮಿತ್ರನನ್ನು ಕಳೆದುಕೊಂಡು ಕೆಯುಡಬ್ಲ್ಯುಜೆ ಅತ್ಯಂತ ದುಖ ಅನುಭವಿಸಿದಂತಾಯಿತು. ಅವರ ಅಗಲಿಕೆಯಿಂದ ಅವರ ಕುಟುಂಬಕ್ಕಾದ ನೋವು ತಡೆದುಕೊಳ್ಳುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥ್ನಿಸುವುದಾಗಿ ಕೆಯುಡಬ್ಲ್ಯುಜೆ ತಂಡವು ಸಂತಾಪ‌ ವ್ಯಕ್ತಪಡಿಸುತ್ತದೆ.

error: Content is protected !!