ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ವನ್ನು ದುರ್ಬಲಗೊಳಿಸುವಂತೆ ಆಗ್ರಹ

ರಾಯಬಾಗ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಗ್ರಾಮೀಣ ಜನರ ಜೀವನಾಡಿಯಾದ ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ವನ್ನು ದುರ್ಬಲಗೊಳಿಸುವಂತೆ ತಿದ್ದುಪಡಿ ಮಾಡಿ ಮರುನಾಮಕರಣಗೊಳಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ-ರಾಮ್-ಜಿ ಯೋಜನೆಯನ್ನು ತಕ್ಷಣ ರದ್ದುಗೊಳಿಸಿ, ಹಳೆಯ ಮನರೇಗಾ ಯೋಜನೆಯನ್ನು ಯಥಾವತ್ತಾಗಿ ಮುಂದುವರಿಸಲು ಆಗ್ರಹಿಸಿ ಇಂದು ರಾಯಬಾಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಘಟಕದ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಪಾದಯಾತ್ರೆಯಲ್ಲಿ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು.

ಮನರೇಗಾ ಯೋಜನೆ ಗ್ರಾಮೀಣ ಬಡಜನರು, ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಜೀವನಾಧಾರವಾಗಿದ್ದು, ಬರಗಾಲ ಮತ್ತು ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ಭರವಸೆಯ ಕೈಹಿಡಿದ ಯೋಜನೆಯಾಗಿದೆ.
ಈ ಯೋಜನೆಯ ಮೂಲಕ ಸಾವಿರಾರು ಕುಟುಂಬಗಳಿಗೆ ಉದ್ಯೋಗದ ಭದ್ರತೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಮಹತ್ತರ ಕೊಡುಗೆ ದೊರೆತಿದೆ. ಗ್ರಾಮೀಣ ಅಭಿವೃದ್ಧಿ, ರೈತರ ಹಿತ ಮತ್ತು ಕಾರ್ಮಿಕರ ಭದ್ರತೆಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಡಿ ಎಸ್ ನಾಯಕ, ಸಿದ್ಧಾರೂಡ ಬಂಡಗರ, ನಿರ್ಮಲ ಪಾಟೀಲ, ಡಾ. ಏನ್ ಎ ಮಗದುಮ,  ಅಣ್ಣಸಾಹೇಬ ಸಮಾಜೆ, ವೀರಪ್ಪ ನಿಂಗನೂರೆ, ಹಾಜಿ ಮುಲ್ಲಾ, ಅಪ್ಪಾಸಾಹೇಬ ಕುಲಗೋಡೆ, ದಿಲೀಪ ಜಮಾದಾರ, ಅರ್ಜುನ ನಾಯಕವಾಡಿ, ಶಿವನಗೌಡ ಪಾಟೀಲ, ಬಹುಸಾಹೇಬ ಪಾಟೀಲ, ವಸಂತ ಕರಿಗಾರ, ಶಿವು ಮರಾಯಿ, ಶಂಕರಗೌಡ ಪಾಟೀಲ, ರಾಜು ಕೋಟಗಿ, ಪಾಂಡುರಂಗ ಮಾಣೆ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ವರದಿ : ಸದಾನಂದ ಎಮ್

error: Content is protected !!